ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಜ್ವಲ್ ನಾಮಪತ್ರ ಸಲ್ಲಿಕೆಗೆ ಮುನ್ನ ರೇವಣ್ಣಗೆ ಎದುರಾದ ಸಾಲುಸಾಲು ಅಪಶಕುನ

|
Google Oneindia Kannada News

Recommended Video

Lok Sabha Elections 2019 : ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಎಚ್ ಡಿ ರೇವಣ್ಣಗೆ ಎದುರಾದ ಅಪಶಕುನಗಳು

ಹಾಸನ, ಮಾರ್ಚ್ 22: ದೈವಜ್ಞ ಪುರೋಹಿತರೇ ನಾಚಿಸುವಂತೆ ಶಾಸ್ತ್ರ ಸಂಪ್ರದಾಯವನ್ನು ಕರಗತ ಮಾಡಿಕೊಂಡಿರುವ ಮತ್ತು ಅದನ್ನೇ ಪಾಲಿಸಿಕೊಂಡು ಬರುತ್ತಿರುವ, ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರಿಗೇ ಸಾಲುಸಾಲು ಅಪಶಕುನ ಎದುರಾದಾಗ?

ಅದು ಕೂಡಾ ಹಲವು ವರ್ಷಗಳ ಕನಸು, ಪುತ್ರನ ರಾಜಕೀಯ ಎಂಟ್ರಿಯ ಭಾಗವಾಗಿ, ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ವೇಳೆಯೇ ಇಂತಹ ಘಟನೆ ಎದುರಾದಾಗ ರೇವಣ್ಣ ಅವರಿಗೆ ಹೇಗಾಗಿರಬೇಡ?

ಹಾಸನ : 'ಶುಭಗಳಿಗೆ' ಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಜ್ವಲ್ ರೇವಣ್ಣಹಾಸನ : 'ಶುಭಗಳಿಗೆ' ಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಜ್ವಲ್ ರೇವಣ್ಣ

ಒಂದೊಂದು ಮಹತ್ವದ ಹೆಜ್ಜೆ ಇಡಬೇಕಾದರೂ, ರಾಹುಕಾಲ, ಯಮಗಂಡಕಾಲ ನೋಡುವ ರೇವಣ್ಣ, ತಾನಲ್ಲದೇ ತನ್ನ ಕುಟುಂಬದವರೂ ಅದನ್ನು ಪಾಲಿಸಿಕೊಂಡು ಬರುವಂತೆ ನೋಡಿಕೊಳ್ಳುವುದು ಗೊತ್ತಿರುವ ವಿಷಯ.

Prajwal Revanna files nomination as JDS candidate in Hassan, Revanna faced jinx at temple

ವಿಚಾರಕ್ಕೆ ಬರುವುದಾದರೆ, ಸಚಿವ ರೇವಣ್ಣ ಆವರ ಪುತ್ರ ಪ್ರಜ್ವಲ್ ರೇವಣ್ಣ, ಶುಭ ಶುಕ್ರವಾರದಂದು ಜೆಡಿಎಸ್ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರಕ್ಕೆ ತನ್ನ ಉಮೇದುವಾರಿಕೆಯನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ತನ್ನ ತಂದೆ ರೇವಣ್ಣ, ತಾಯಿ ಭವಾನಿ ಜೊತೆಗೆ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.

ಬೆಳಿಗ್ಗೆ 5.30ಕ್ಕೆ ಹೋಗಿದ್ದ ರೇವಣ್ಣ ಕುಟುಂಬ, ಹೊಳೆ ನರಸೀಪುರದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಲಕ್ಷ್ಮಿ ನರಸಿಂಹ ದೇವರ ಸಮ್ಮುಖದಲ್ಲಿ ನಾಮಪತ್ರ ಇರಿಸಿ ಅದಕ್ಕೆ ಪೂಜೆ ಸಲ್ಲಿಸಲಾಯಿತು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಲಕ್ಷ್ಮೀ ನರಸಿಂಹನ ಸನ್ನಿಧಿಯಲ್ಲಿ ಮಂಗಳಾರತಿ ಸರಿಯಾಗಿಲ್ಲವೆಂದು ಎರಡೆರಡು ಬಾರಿ ಪೂಜೆ ಮಾಡಿಸಿದ ರೇವಣ್ಣ, ನಂತರ ದೇವಾಲಯದ ಹೊರಗೆ ಈಡುಗಾಯಿ ಹೊಡೆಯಲು ಪ್ರಜ್ವಲ್ ಮತ್ತು ಪತ್ನಿ ಜೊತೆ ಬಂದರು. ಈಡುಗಾಯಿಯ ಮೇಲೆ ಕರ್ಪೂರವನ್ನು ಇಟ್ಟು, ತಾನು ಮತ್ತು ಪ್ರಜ್ವಲ್ ದೇವರಲ್ಲಿ ಪ್ರಾರ್ಥಿಸುತ್ತಾ, ಕರ್ಪೂರವನ್ನು ಕೆಳಕ್ಕೆ ಹಾಕುವಾಗ, ಈಡುಗಾಯಿ ಬೆಂಕಿಗೆ ಬಿತ್ತು.

Prajwal Revanna files nomination as JDS candidate in Hassan, Revanna faced jinx at temple

ಆದರೆ, ಪ್ರಜ್ವಲ್ ಕರ್ಪೂರವನ್ನು ನೆಲಕ್ಕೆ ಹಾಕಿ ಈಡುಗಾಯಿಯನ್ನು ಸರಿಯಾಗಿ ಒಡೆದರು. ಬೆಂಕಿಗೆ ಬಿದ್ದ ಈಡುಗಾಯಿಯನ್ನು ರೇವಣ್ಣ ತೆಗೆದು ಒಡೆದಾಗ ಮೊದಲನೇ ಬಾರಿ ಅದು ಒಡೆಯಲಿಲ್ಲ, ಎರಡನೇ ಮತ್ತೆ ರೇವಣ್ಣ ಪ್ರಯತ್ನಿಸಿದಾಗ ಅದು ಒಡೆಯಿತು. ಜೈಕಾರ ಹಾಕಿಕೊಂಡು ಬಂದಿದ್ದ ಜೆಡಿಎಸ್ ಕಾರ್ಯಕರ್ತರು, ಅಣ್ಣಾ ಇದು ಅಪಶಕುನ ಎಂದು ರೇವಣ್ಣಗೆ ಹೇಳಿದಾಗ, ಅವರ ಮೇಲೆಯೇ ರೇವಣ್ಣ ಸಿಟ್ಟಾದರು.

ಬೆಂಗಳೂರಿನ 2 ಕ್ಷೇತ್ರಗಳಿಗೆ ಅಭ್ಯರ್ಥಿ ಹುಡುಕಲು ಜೆಡಿಎಸ್, ಕಾಂಗ್ರೆಸ್ ಪರದಾಟಬೆಂಗಳೂರಿನ 2 ಕ್ಷೇತ್ರಗಳಿಗೆ ಅಭ್ಯರ್ಥಿ ಹುಡುಕಲು ಜೆಡಿಎಸ್, ಕಾಂಗ್ರೆಸ್ ಪರದಾಟ

ಶೃಂಗೇರಿ ಶ್ರೀಗಳು ನಿಗದಿ ಮಾಡಿದ್ದ ದಿನವಾದ ಇಂದು ರಾಹುಕಾಲ ಕಳೆದ ಮೇಲೆ ಅಂದರೆ, 12:35ಕ್ಕೆ ಪ್ರಜ್ವಲ್ ರೇವಣ್ಣ ಅವರು ಚುನಾವಣಾಧಿಕಾರಿ ಅಕ್ರಂ ಪಾಷ ಅವರಿಗೆ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ಆಖಾಡಕ್ಕೆ ಇಳಿದರು.

English summary
Prajwal Revanna files nomination as JDS candidate for the Hassan loksabha constituency. His father and PWD minister HD Revanna faced jinx at Holenarasipura temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X