ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಶಾಸಕ ಪ್ರೀತಂ ಹಾಗೂ ಟ್ವೀಟ್ ವಿರುದ್ಧ ಪ್ರಜ್ವಲ್ ಫ್ಯಾನ್ಸ್ ಗರಂ

|
Google Oneindia Kannada News

Recommended Video

ಬಿಜೆಪಿ ಶಾಸಕ ಪ್ರೀತಂ ಗೌಡ ಮೇಲೆ ಪ್ರಜ್ವಲ್ ರೇವಣ್ಣ ಫ್ಯಾನ್ಸ್ ಕಿಡಿ ಕಾರಿದ್ದಾರೆ | Oneindia Kannada

ಹಾಸನ, ಜನವರಿ 30: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರು ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಯ ಕಾರು ಬಳಕೆ ಮಾಡಿದ್ದಾರೆ ಎಂಬ ಬಿಜೆಪಿ ಕರ್ನಾಟಕದ ಟ್ವೀಟ್ ಬಗ್ಗೆ ಪ್ರಜ್ವಲ್ ರೇವಣ್ಣ ಅಭಿಮಾನಿಗಳು ಕಿಡಿಕಾರಿದ್ದಾರೆ. ಇದೆಲ್ಲವೂ ಶಾಸಕ ಪ್ರೀತಂ ಗೌಡ ಅವರ ಕುತಂತ್ರ, ಈ ರೀತಿ ಗಿಮಿಕ್ ಮಾಡಿ, ಪ್ರಜ್ವಲ್ ಅವರ ಹೆಸರು ಹಾಳು ಮಾಡಲು ವ್ಯರ್ಥ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪ್ರಜ್ವಲ್ ಫ್ಯಾನ್ಸ್ ಹೇಳಿಕೊಂಡಿದ್ದಾರೆ.

"ಯಾರದೋ ಟ್ಯಾಕ್ಸ್​ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು," ಎಂದು ಕನ್ನಡದಲ್ಲಿ ಶೀರ್ಷಿಕೆ ನೀಡಿ, ಪ್ರಜ್ವಲ್ ಅವರು ತಮ್ಮ ತಂದೆ ರೇವಣ್ಣ ಅವರ ಸರ್ಕಾರಿ ವಾಹನ ಬಳಸುತ್ತಿರುವ ವಿಡಿಯೋವನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ಪ್ರಜ್ವಲ್ ರೇವಣ್ಣ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

'ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು': ಬಿಜೆಪಿ 'ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು': ಬಿಜೆಪಿ

ಪ್ರಜ್ವಲ್ ರೇವಣ್ಣ ಯೂತ್ ಐಕಾನ್ ಎಂಬ ಫೇಸ್‍ಬುಕ್ ಖಾತೆ ಮೂಲಕ ಬಿಜೆಪಿ ನಾಯಕರನ್ನು ಅಭಿಮಾನಿಗಳು ಟೀಕಿಸಿದ್ದಾರೆ. ಯಾವ ಕಾರನ್ನ ಬಳಸಬೇಕು, ಯಾವುದನ್ನು ಬಳಸಬಾರದು ಎಂಬ ಕನಿಷ್ಟ ಜ್ಞಾನ ನಮಗಿದೆ. ಅದನ್ನ ಮಹಾ ಮೇದಾವಿ(ಮೂದೇವಿ)ಯಿಂದ ಕಲಿಯಬೇಕಿಲ್ಲ.

ಕಾರ್ಯಕರ್ತರನ್ನು ಭೇಟಿ ಮಾಡಲು ಬರುವಾಗ ಪ್ರಜ್ವಲ್ ಅವರ ಕಾರು ಕೆಟ್ಟು ಹೋಗಿತ್ತು. ಹಾಗಾಗಿ ಅವರು ಸರ್ಕಾರಿ ಕಾರಲ್ಲಿ ಡ್ರಾಪ್ ಪಡೆದಿದ್ದಾರೆ ಅಷ್ಟೇ. ಅದನ್ನೇ ಬಿಜೆಪಿ ಅವರು ದೊಡ್ಡ ಸುದ್ದಿ ಮಾಡಿದ್ದಾರೆ. ಹಾಸನದ ಶಾಸಕ ಪ್ರೀತಂ ಗೌಡ ಚೀಪ್ ಪಾಲಿಟಿಕ್ಸ್ ಗಿಮಿಕ್ ಮಾಡಿದ್ದಾರೆ ಎಂದು ಪ್ರಜ್ವಲ್ ಅಭಿಮಾನಿಗಳು ಕಿಡಿಕಾರಿದ್ದಾರೆ.

 ಚುನಾವಣಾ ಪ್ರಚಾರ ಆರಂಭಿಸಿರುವ ಪ್ರಜ್ವಲ್

ಚುನಾವಣಾ ಪ್ರಚಾರ ಆರಂಭಿಸಿರುವ ಪ್ರಜ್ವಲ್

ದೇವೇಗೌಡರಿಂದ‌ ಗ್ರೀನ್ ಸಿಗ್ನಲ್‌ ಸಿಕ್ಕ ಬಳಿಕ ಚುನಾವಣಾ ಪ್ರಚಾರ ಪೂರ್ವ ಸಿದ್ಧತೆ ಆರಂಭಿಸಿರುವ ಪ್ರಜ್ವಲ್ ರೇವಣ್ಣ ಅವರು ಇಂದು ಹಾಸನ‌ ನಗರದ ‌ವಿವಿಧೆಡೆ‌ ಪಕ್ಷದ ಮುಖಂಡರು ಸ್ಥಳೀಯ ಜನಪ್ರತಿನಿಧಿಗಳ‌ ಸಭೆ ನಡೆಸಿದರು. ನಿನ್ನೆ ನಗರಸಭೆ ವಾರ್ಡ್ ವಾರ್ ಸಭೆಗಳನ್ನು ಯಶಸ್ವಿಯಾಗಿ ಪೂರೈಸಿದ್ದರು. ನಂತರ ಅಲ್ಲಿಂದ ಬೇರೆಡೆಗೆ ತೆರಳುವಾಗ ಸರ್ಕಾರಿ ವಾಹನ ಬಳಸಿದ್ದರು.

 ಪ್ರಜ್ವಲ್ ಪ್ರಶ್ನಿಸುವ ನೈತಿಕ ಹಕ್ಕು ಪ್ರೀತಂಗಿಲ್ಲ

ಪ್ರಜ್ವಲ್ ಪ್ರಶ್ನಿಸುವ ನೈತಿಕ ಹಕ್ಕು ಪ್ರೀತಂಗಿಲ್ಲ

ಹಾಸನ ಕ್ಷೇತ್ರದ ಅಭಿವೃದ್ಧಿ ಮಾಡುವ ಕಿಂಚಿತ್ತು ನೈತಿಕತೆ ಇಲ್ಲದವರು ಈ ರೀತಿ ಚಿಲ್ಲರೆ ರಾಜಕೀಯಕ್ಕೆ ಇಳಿದಿದ್ದಾರೆ. ಜನರು ನಿಮ್ಮ ಸುಳ್ಳು ಸುದ್ದಿಗಳನ್ನು ನಂಬುವುದಿಲ್ಲ, ನಿಮ್ಮ ಮಾತು ನಿಮಗೆ ತಿರುಗುಬಾಣ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ತಮ್ಮ ನಾಯಕ ಕಾರು ದುರ್ಬಳಕೆ ಮಾಡಿಲ್ಲ, ಡ್ರಾಪ್ ಪಡೆದಿದ್ದಾರೆ ಎಂದು ಅಭಿಮಾನಿಗಳು ಪ್ರಜ್ವಲ್ ರೇವಣ್ಣ ಅವರ ಪರವಹಿಸಿದ್ದಾರೆ.

ಪ್ರಜ್ವಲ್ ಸ್ಪರ್ಧಿಸಿದರೆ ಬೆಂಬಲ ನೀಡೊಲ್ಲ: ಎ ಮಂಜುಪ್ರಜ್ವಲ್ ಸ್ಪರ್ಧಿಸಿದರೆ ಬೆಂಬಲ ನೀಡೊಲ್ಲ: ಎ ಮಂಜು

Array

Array

ತಮ್ಮ ಕಾರು ಮಾರ್ಗಮಧ್ಯೆ ಕೈಕೊಟ್ಟ ಕಾರಣ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಡ್ರಾಪ್ ಪಡೆದಿದ್ದಾರೆ. ಇದನ್ನೇ ಮಹಾಪ್ರಮಾದ ಎಂದು ಪ್ರೀ'ತಂ' ತಮಟೆ ಬಾರಿಸುತ್ತಿರುವುದನ್ನು ನೋಡಿ ಅಯ್ಯೋ ಪಾಪ‌ ಎಂದು ನಗುವಂತಾಗಿದೆ. ಹಾಸನದ ಅಭಿವೃದ್ಧಿ ಬಗ್ಗೆ ಮಾತನಾಡಲು ಯಾವುದೇ ಕಿಂಚಿತ್ತೂ ನೈತಿಕತೆ ಇಲ್ಲದವರು ಇಂತಹ ಚಿಲ್ಲರೆ ರಾಜಕೀಯಕ್ಕೆ ಇಳಿದಿದ್ದಾರೆ.

 ವಾಹನ ರಿಪೇರಿಗೆ ಬಿಡಲಾಗಿದೆ

ವಾಹನ ರಿಪೇರಿಗೆ ಬಿಡಲಾಗಿದೆ

ಪ್ರಜ್ವಲ್ ರೇವಣ್ಣ ಅವರ ಕಾರು ರಿಪೇರಿಗೆ ಬಿಟ್ಟಿರುವ ಫೋಟೋ ಹಾಗು ಜಾಬ್ ಶೀಟ್ ಫೋಟೋ ಹಾಕಿ ಪ್ರೀತಂ ಚೀಪ್ ಪಾಲಿಟಿಕ್ಸ್ ಗಿಮಿಕ್ಸ್ ನಡೆಯಲ್ಲ ಎಂದು ಟೀಕಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಕಾರು ನಂದಿ ಟೊಯೋಟಾ ಸರ್ವಿಸ್ ಸೆಂಟರ್ ನಲ್ಲಿ ರಿಪೇರಿಗೆ ಬಿಟ್ಟಿದ್ದಕ್ಕೆ ಸಾಕ್ಷಿಯಾಗಿ ರಸೀತಿ ಫೋಟೊ ಹಾಕಿದ್ದಾರೆ.

English summary
Prajwal Revanna Fans slam Hassan BJP MLA Preetham Gowda and termed BJP Karnataka tweet about Prajwal using his father minister HD Revanna's official car for personal use as cheap trick.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X