ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಹುಬಲಿ ನೆಪದಲ್ಲಿ ಕೇಂದ್ರ ಬಜೆಟ್ ಸ್ಮರಿಸಿದ ಮೋದಿ

By Manjunatha
|
Google Oneindia Kannada News

Recommended Video

ಮಹಾಮಸ್ತಕಾಭಿಷೇಕಕ್ಕೆ ಬಂದಾಗ ಕೇಂದ್ರ ಬಜೆಟ್ ನ ನೆನಪಿಸಿಕೊಂಡ ಮೋದಿ | Oneindia Kannada

ಶ್ರವಣಬೆಳಗೊಳ, ಫೆಬ್ರವರಿ 19: ನಾವು ಬಜೆಟ್‌ನಲ್ಲಿ ಘೋಷಿಸಿರುವ 'ಆಯುಷ್ಮಾನ್ ಭಾರತ' ವಿಮಾ ಯೋಜನೆ ಇಡೀಯ ವಿಶ್ವದಲ್ಲೇ ದೊಡ್ಡ ಯೋಜನೆ, ಸ್ವತಂತ್ರ ಭಾರತದ ನಂತರ ಭಾರತದಲ್ಲಿ ಇಡಲಾಗುತ್ತಿರುವ ಅತಿ ದೊಡ್ಡ ಹೆಜ್ಜೆ ಇದು ಎಂದು ಪ್ರಧಾನಿ ಮೋದಿ ಹೇಳಿದರು.

ಮಹಾಮಸ್ತಕಾಭಿಷೇಕ ಸಂದರ್ಭ ವಿಂದ್ಯಾಗಿರಿ ಬೆಟ್ಟಕ್ಕೆ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ಇಂದ ನಿರ್ಮಿಸಿದ 630 ಮೆಟ್ಟಿಲುಗಳು ಹಾಗೂ ಬಾಹುಬಲಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

In Pics: ಮುಗಿಲೆತ್ತರಕ್ಕೆ ನಿಂತ ವಿರಾಗಿಗೆ ಮಹಾಮಸ್ತಕಾಭಿಷೇಕ

'ಒಬ್ಬ ವ್ಯಕ್ತಿಗೆ ಖಾಯಿಲೆ ಬಂದರೆ ಅದು ಆತನ ಕುಟುಂಬವನ್ನೇ ಸಾಲಗಳ ಕೂಪಕ್ಕೆ ತಳ್ಳಿಬಿಡುತ್ತದೆ. ಆ ಕುಟುಂಬದ ನಾಲ್ಕೈದು ತಲೆಮಾರಿನ ಮೇಲೆ ಖಾಯಿಲೆಯಿಂದಾಗುವ ನಷ್ಟ ಪ್ರಭಾವ ಬೀರುತ್ತದೆ ಹಾಗಾಗಿ ನಾವು ಅಂತಹಾ ಬಡ, ಮಧ್ಯಮವರ್ಗದ ಜನರನ್ನು ಅವರ ಕಷ್ಟದ ಸಮಯದಲ್ಲಿ ಕೈ ಹಿಡಿಯಲು ಮುಂದಾಗಿದ್ದೇವೆ ಎಂದರು.

ಧಾರ್ಮಿಕ, ಸಾಮಾಜಿಕ ಎರಡೂ ಇವೆ

ಧಾರ್ಮಿಕ, ಸಾಮಾಜಿಕ ಎರಡೂ ಇವೆ

ಭಾರತದಲ್ಲಿ ಸಾಮಾಜಿಕ ಕಾರ್ಯಗಳಿಗಿಂತಲೂ ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಪ್ರಾಧಾನ್ಯತೆ ಎನ್ನುವ ವಾದ ಸರಿಯಲ್ಲ, ಅವೆರಡೂ ಜೊತೆ ಜೊತೆಯಾಗೇ ಸಾಗುತ್ತವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.

ಶಿಕ್ಷಣ, ಆರೋಗ್ಯದ ಅಭಿವೃದ್ಧಿ

ಶಿಕ್ಷಣ, ಆರೋಗ್ಯದ ಅಭಿವೃದ್ಧಿ

ದೇಶದಲ್ಲಿ ಪುರಾತನ ಕಾಲದಿಂದಲೂ ಮುನಿಗಳು, ಋಷಿಗಳು, ಸಂತರು ಧಾರ್ಮಿಕ ಕಾರ್ಯದ ಜೊತೆಗೆ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಲೇ ಬಂದಿದ್ದಾರೆ. ಶಿಕ್ಷಣ, ಆರೋಗ್ಯದ ಕ್ಷೇತ್ರಗಳಲ್ಲಿ ಅವರ ಸೇವೆ ಅಪಾರ ಎಂದು ಅವರು ಸಂತಮುನಿಗಳ ಸೇವೆಯನ್ನು ಮೋದಿ ಸ್ಮರಿಸಿದರು.

ಕೇಂದ್ರದ ಸಹಾಯಕ್ಕೆ ಸಂತಸ

ಕೇಂದ್ರದ ಸಹಾಯಕ್ಕೆ ಸಂತಸ

ಶ್ರವಣಬೆಳಗೊಳಕ್ಕೆ ಆಗಮಿಸಲು ಪುಣ್ಯ ಮಾಡಿದ್ದೇನೆ ಎಂದ ಅವರು, ಮಸ್ತಕಾಭಿಷೇಕದಲ್ಲಿ ಕೇಂದ್ರ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದೆ ಅದಕ್ಕೆ ನಾನು ಸಂತೋಷಿತನಾಗಿದ್ದೇನೆ ಎಂದರು. ಬಾಹುಬಲಿಯ ಬಗೆಗಿನ ಶ್ಲೋಕವೊಂದನ್ನು ಹೇಳಿ ಚಪ್ಪಾಳೆ ಗಿಟ್ಟಿಸಿದ ಅವರು ಅದರ ತಾತ್ಪರ್ಯವನ್ನೂ ತಿಳಿಸಿದರು.

630 ಮೆಟ್ಟಿಲುಗಳ ಲೋಕಾರ್ಪಣೆ

630 ಮೆಟ್ಟಿಲುಗಳ ಲೋಕಾರ್ಪಣೆ

ವಿಂದ್ಯಗಿರಿ ಬೆಟ್ಟಕ್ಕೆ ಕೇಂದ್ರದ ಅನುದಾನದಲ್ಲಿ ನಿರ್ಮಿಸಿರುವ 630 ಮೆಟ್ಟಿಲುಗಳು ಹಾಗೂ ಬಾಹುಬಲಿ ಸಾರ್ವಜನಿಕ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದರು.

English summary
PM Narendra Modi inaugurates 630 steps of Vindyagiri hill. He participated in Bahubali Mahamastakabhisheka function. In this occasion he remembers social worker of Sant's and Muni's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X