ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತವನ್ನು ಮೋದಿ ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ: ದೇವೇಗೌಡ

|
Google Oneindia Kannada News

ಹಾಸನ, ಏಪ್ರಿಲ್ 2: ಪ್ರಧಾನಿ ನರೇಂದ್ರ ಮೋದಿ ಭಾರತವನ್ನು 'ಹಿಂದೂ ರಾಷ್ಟ್ರ'ವನ್ನಾಗಿ ಮಾಡಲು ಬಯಸಿದ್ದಾರೆ ಎಂದು ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪ ಮಾಡಿದ್ದಾರೆ. ಕಾಶ್ಮೀರಕ್ಕೆ ಸಂವಿಧಾನದ 370ನೇ ಪರಿಚ್ಛೇದದಲ್ಲಿ ನೀಡಿರುವ ವಿಶೇಷ ಸ್ಥಾನಮಾನವನ್ನು ಏಕೆ ತೆಗೆಯಬೇಕು ಎಂದು ಕೂಡ ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏತಕ್ಕಾಗಿ ಆ ಪರಿಚ್ಛೇದವನ್ನು ತೆಗೆಯಬೇಕು? ನನ್ನ ಪ್ರಶ್ನೆ ಏನೆಂದರೆ, ಏಕಾಗಿ ತೆಗೆಯಬೇಕು? ನಾನು ಪರಿಚ್ಛೇದ 370 ನೀಡಿದ್ದಲ್ಲ. ಆಗಿನ ಮಹಾರಾಜರ ಜತೆಗೆ ಪರಿಚ್ಛೇದ 370ಕ್ಕೆ ಸಮ್ಮತಿಸಿದ ನಂತರವೇ ಕಾಶ್ಮೀರವು ಭಾರತಕ್ಕೆ ಸೇರ್ಪಡೆ ಆಗಿದ್ದು ಎಂದು ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಗೆಲುವಿಗಾಗಿ ದೇವೇಗೌಡರ ಮುಂದಿನ ರಣತಂತ್ರ ಏನಿರಬಹುದು?ಗೆಲುವಿಗಾಗಿ ದೇವೇಗೌಡರ ಮುಂದಿನ ರಣತಂತ್ರ ಏನಿರಬಹುದು?

ಬೌದ್ಧರು, ಮುಸ್ಲಿಮರು, ಹಿಂದೂಗಳು, ಬ್ರಾಹ್ಮಣರು, ಪಂಡಿತರು ಇನ್ನೂ ಹಲವಾರು ಸಮುದಾಯದವರು ಜಮ್ಮು-ಕಾಶ್ಮೀರದಲ್ಲಿ ಇದ್ದಾರೆ. ಆ ವಾತಾವರಣವನ್ನು ಅವಲೋಕನ ಮಾಡಿದ ನಂತರವೇ ಈ ತೀರ್ಮಾನಕ್ಕೆ ಬರಲಾಯಿತು ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

PM Narendra Modi trying to make India a ‘Hindu Rashtra,’ alleges HD Deve Gowda

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಬೆಂಬಲದೊಂದಿಗೆ ಜೆಡಿಎಸ್ ಟಿಕೆಟ್ ನಿಂದ ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಣದಲ್ಲಿ ಇದ್ದಾರೆ. ಅವರ ವಿರುದ್ಧ ಪ್ರಮುಖವಾಗಿ ಬಿಜೆಪಿಯಿಂದ ಎ.ಮಂಜು ಇದ್ದಾರೆ. ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದಾರೆ.

English summary
JDS supremo HD Deve Gowda Tuesday accused Prime Minister Narendra Modi of wanting to make India a “Hindu Rashtra” in Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X