ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿ ತಾಲ್ಲೂಕಿನಲ್ಲಿಯೂ ಪಿಂಚಣಿ ಅದಾಲತ್: ಜೆ.ಸಿ. ಮಾಧುಸ್ವಾಮಿ

|
Google Oneindia Kannada News

ಹಾಸನ, ಜನವರಿ 25: ಹಾಸನ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿಯೂ ಪಿಂಚಣಿ ಅದಾಲತ್ ನಡೆಸಿ ಉಪವಿಭಾಗಾಧಿಕಾರಿಗಳು ಕಡ್ಡಾಯವಾಗಿ ಸ್ಥಳದಲ್ಲಿದ್ದು, ಅರ್ಜಿ ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಸಭೆ ನಡೆಸಿ ಮಾತನಾಡಿದ ಅವರು, ಪಿಂಚಣಿಗಾಗಿ ಬಂದ ಹೊಸ ಅರ್ಜಿಗಳು 45 ದಿನಗಳೊಳಗೆ ವಿಲೇವಾರಿಯಾಗಬೇಕು, ಅಲ್ಲದೆ ತಹಶೀಲ್ದಾರರು ಇದರ ಜವಾಬ್ದಾರರು ನಂತರದಲ್ಲಿ ಆರ್.ಟಿ.ಜಿ.ಎಸ್ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ತಲುಪಲಿದೆ ಎಂದರು.

ಮನೆ ಬಾಗಿಲಿಗೆ ಪಿಂಚಣಿ; ಉಡುಪಿಯಲ್ಲಿ ಪಾಯೋಗಿಕವಾಗಿ ಜಾರಿಮನೆ ಬಾಗಿಲಿಗೆ ಪಿಂಚಣಿ; ಉಡುಪಿಯಲ್ಲಿ ಪಾಯೋಗಿಕವಾಗಿ ಜಾರಿ

ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲ್ಲೂಕಿನ ಬಹುತೇಕ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ ಇನ್ನು ಒದಗಿಸಿಲ್ಲ ಎಂದು ಅಸಮಧಾನ ವ್ಯಕ್ತಡಿಸಿದ ಹೆಚ್.ಡಿ. ರೇವಣ್ಣ ಹಾಗೂ ಕೆ.ಎಂ. ಶಿವಲಿಂಗೇಗೌಡರಿಗೆ ಆ ಕುರಿತ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಕಡ್ಡಾಯವಾಗಿ ನೀರು ಕೊಡಿಸುವ ಜವಾಬ್ದಾರಿ ತಮ್ಮದೆಂದು ಸಚಿವರು ಭರವಸೆ ನೀಡಿದರು.

Pension Adalat will be conducted in each Taluks: J.C Madhuswamy

ಪ್ರತಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ಅರಣ್ಯ ಇಲಾಖೆ ವತಿಯಿಂದ ರೈತರಿಗೆ ನೆರವಾಗುವಂತೆ ನರೇಗಾದಡಿ ಸಾಮಾಜಿಕ ಅರಣ್ಯದಲ್ಲಿ ರೇಷ್ಮೆ ಸಸಿ ಬೆಳೆಸಿ ವಿತರಣೆಗಾಗಿ ರೇಷ್ಮೆ ಇಲಾಖೆಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಜಿಲ್ಲೆಯಲ್ಲಿ ಕುಟುಂಬಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿರುವ ಅನಧಿಕೃತ ಪಡಿತರ ಕಾರ್ಡ್‍ಗಳನ್ನು ಪಟ್ಟಿಯಿಂದ ತೆಗೆಯುವಂತೆ ಸಚಿವರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ.

ರೈತ ತಂತ್ರಾಂಶಗಳನ್ನು ಬಳಸುವಂತೆ ಕರೆ:
ಶಾಸಕರಾದ ಹೆಚ್.ಡಿ. ರೇವಣ್ಣ, ಸಿ.ಎನ್ ಬಾಲಕೃಷ್ಣ, ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ, ರಾಗಿ, ಭತ್ತ ಖರೀದಿ ಕೇಂದ್ರಗಳನ್ನು ತೆರೆದಿದ್ದರೂ ಗುರಿಗೆ ತಕ್ಕಂತೆ ಬೆಳೆ ಬಂದಿಲ್ಲ ಮತ್ತು ಮಾರುಕಟ್ಟೆಗೆ ಬರುವ ರೈತ ತಂತ್ರಾಂಶಗಳನ್ನು ಬಳಸಿ ನೋಂದಣಿ ಮಾಡಿಸುವ ಪ್ರಕ್ರಿಯೆ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ಮಧ್ಯವರ್ತಿಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡುವ ಸಾಧ್ಯತೆಗಳಿವೆ ಹಾಗಾಗಿ ಪ್ರಕ್ರಿಯೆ ಸರಳಿಕರಿಸುವಂತೆ ಮತ್ತು ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ದೂರವಿಟ್ಟು ರೈತರಿಗೆ ಅನುಕೂಲ ಮಾಡುವಂತೆ ಜೆ.ಸಿ. ಮಾಧುಸ್ವಾಮಿಯವರನ್ನು ಒತ್ತಾಯಿಸಿದರು.

ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಸರಿಯಾದ ಮಾಹಿತಿ ನೀಡಿ ನೋಂದಣಿ ಮಾಡಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರಲ್ಲದೆ, ಮಧ್ಯಮ ಹಂತದ ಸಾಲವನ್ನು ಸಹಕಾರ ಬ್ಯಾಂಕ್‍ಗಳು ರೈತರಿಗೆ ವಿತರಿಸದೇ ಇರುವುದು ಸರಿಯಾದ ಕ್ರಮವಲ್ಲ ಅದು ಮುಂದುವರಿಯದಿರಲಿ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಜಿಲ್ಲೆಯಲ್ಲಿ ಅನಧಿಕೃತ ಕ್ರಶರ್‍ಗಳು ಚಾಲ್ತಿಯಲ್ಲಿದ್ದು, ವಿದ್ಯುತ್ ಸೌಲಭ್ಯ ಕಡಿತಗೊಳಿಸಿದ್ದರೂ ಡೀಸಲ್ ಮೊಟಾರ್ ಗಳನ್ನು ಬಳಸಿ ಕೆಲಸ ಮುಂದುವರೆಸುತ್ತಿದ್ದಾರೆ. ಅರಣ್ಯ ಪ್ರದೇಶಗಳಲ್ಲಿಯೂ ಅಕ್ರಮವಾಗಿ ಕ್ರಶರ್ ನಡೆಯುತ್ತಿವೆ ಅಲ್ಲದೆ ಜಿ.ಪಿ.ಎಸ್ ಇಲ್ಲದ ವಾಹನಗಳಲ್ಲಿ ಮರಳು ಸಾಗಾಣಿಕೆ ನಡೆಯುತ್ತಿದ್ದು ಇವುಗಳನ್ನು ನಿಲ್ಲಿಸುವಂತೆ ಶಾಸಕರುಗಳಾದ ಕೆ.ಎಂ. ಶಿವಲಿಂಗೇಗೌಡ, ಕೆ.ಎಸ್. ಲಿಂಗೇಶ್, ಹೆಚ್.ಡಿ. ರೇವಣ್ಣ, ಎ.ಟಿ. ರಾಮಸ್ವಾಮಿ ಅವರು ಸಚಿವರಿಗೆ ಹೇಳಿದರು.

ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಪ್ರತಿಕ್ರಿಯಿಸಿ, ಅರಣ್ಯ ಪ್ರದೇಶದಲ್ಲಿ ಮತ್ತು ಅನಧಿಕೃತವಾಗಿ ನಡೆಯುತ್ತಿರುವ ಕ್ರಶರ್ ಗಳ ಕುರಿತು ಒಂದು ವಾರದೊಳಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಈ ಕುರಿತು ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ. ಮರಳು, ಜಲ್ಲಿ ಸಾಗಾಣಿಕೆ ಮಾಡುವ ವಾಹನಗಳು ಕಡ್ಡಾಯವಾಗಿ ಪರ್ಮಿಟ್ ಪಡೆದುಕೊಳ್ಳುವುದರ ಜೊತೆಗೆ ಜಿ.ಪಿ.ಎಸ್ ಅಳವಡಿಕೊಳ್ಳತಕ್ಕದ್ದು. ನಿಯಮಬಾಹಿರವಾಗಿ ಸಾಗಾಣಿಕೆ ನಡೆಸುವ ವಾಹನಗಳನ್ನು ತಡೆಹಿಡಿದು ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ಎಚ್.ಡಿ. ರೇವಣ್ಣ, ಕೆ.ಎಂ. ಶಿವಲಿಂಗೇಗೌಡ ಮತ್ತು ಸಿ.ಎನ್. ಬಾಲಕೃಷ್ಣ ಅವರು ಮಾತನಾಡಿ, ಜಿಲ್ಲೆಯ ಬಹುತೇಕ ತಾಲ್ಲೂಕುಗಳಿಂದ ಹಾಸನ ನಗರದ ಕಾರ್ಖಾನೆಗಳಿಗೆ ಮಹಿಳೆಯರು ಕೆಲಸಕ್ಕೆ ಬರುತ್ತಿದ್ದು, ಅವರನ್ನು ಪ್ರಾಣಿಗಳಂತೆ ವಾಹನಗಳಲ್ಲಿ ತುಂಬಿಕೊಂಡು ಕಾರ್ಯಕ್ಷೇತ್ರಕ್ಕೆ ಕರೆ ತರುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಇದಕ್ಕೆ ಪೂರ್ಣವಿರಾಮ ಹಾಕಬೇಕೆಂದು ಒತ್ತಾಯಿಸಿದರಲ್ಲದೆ, ಆ ಮಹಿಳೆಯರಿಗೆ ವಿಶೇಷ ಬಸ್‍ಪಾಸ್ ಸೌಲಭ್ಯ ಹೊದಗಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಕಾರ್ಮಿಕ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಬಸ್‍ಪಾಸ್ ವಿತರಿಸುವ ವ್ಯವಸ್ಥೆ ಮಾಡಲಾಗಿದ್ದು, ಅದೇ ರೀತಿ ಹಾಸನ ಜಿಲ್ಲೆಯಲ್ಲಿಯೂ ಬಸ್‍ಪಾಸ್ ನೀಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಪ್ರತಿ ಕಾರ್ಖಾನೆಗೆ ತೆರಳಿ ಯಾವ ಸ್ಥಳಗಳಿಂದ ಎಷ್ಟು ಮಂದಿ ಮಹಿಳೆಯರು ಕೆಲಸಕ್ಕೆ ಬರುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

English summary
Pension Adalat will be conducted in each Taluks and officers will receive grievances from Public said Law minister J.C Madhuswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X