ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ್ತೂರಿ ರಂಗನ್ ವರದಿ ಜಾರಿಗೆ ಒಂದು ವರ್ಷ ಕಾಲಾವಕಾಶ: ನಿಟ್ಟುಸಿರು ಬಿಟ್ಟ ಹಾಸನ ಜನತೆ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜುಲೈ, 26 : ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಕೇಂದ್ರ ಪರಿಸರ ಇಲಾಖೆ 5ನೇ ಅಧಿಸೂಚನೆಯನ್ನು ಹೊರಡಿಸಿತ್ತು. ಇದನ್ನು ಅನುಷ್ಠಾನ ಮಾಡಿದರೆ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ ಎಂದು ಸರ್ಕಾರ ಮತ್ತು ಜನರು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಕೇಂದ್ರ ಪರಿಸರ ಇಲಾಖೆ ಒಂದು ವರ್ಷ ಕಾಲಾವಕಾಶ ನೀಡಿದ್ದು, ಹಾಸನ ಜನರು ನಿಟ್ಟುಸಿರು ಬಿಡುವಂತಾಗಿದೆ.

ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ 5ನೇ ಅಧಿಸೂಚನೆಯನ್ನು ಹೊರಡಿಸಿತ್ತು. ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನೂ ನೀಡಿತ್ತು. ಈ ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನ ಅಸ್ತವ್ಯಸ್ತವಾಗುತ್ತದೆ ಎಂದು ಅಸಮಾಧಾನ ವ್ಯಕ್ತವಾಗಿದ್ದವು.

ಹಾಸನ: ಹೆಂಡತಿ ಕೈ ಟಚ್ ಮಾಡಿದ್ದಕ್ಕೆ ಅಪ್ರಾಪ್ತನನ್ನು ಕೊಂದ ಪತಿ! ಹಾಸನ: ಹೆಂಡತಿ ಕೈ ಟಚ್ ಮಾಡಿದ್ದಕ್ಕೆ ಅಪ್ರಾಪ್ತನನ್ನು ಕೊಂದ ಪತಿ!

2010ರಲ್ಲಿ ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿ ಸಲ್ಲಿಕೆಯಾಗಿತ್ತು. ಗಾಡ್ಗಿಳ್ ವರದಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಲಾಗಿತ್ತು.

 ರಾಜ್ಯ ಸರ್ಕಾರ ಮತ್ತು ಜನರಿಂದ ವಿರೋಧ

ರಾಜ್ಯ ಸರ್ಕಾರ ಮತ್ತು ಜನರಿಂದ ವಿರೋಧ

ಅದರಂತೆ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್ನಾಟಕದ ವ್ಯಾಪ್ತಿಯನ್ನು ಉಲ್ಲೇಖಿಸಿತ್ತು. ರಾಜ್ಯದಲ್ಲಿ ಇದು 20,668 ಚದರ ಕಿಲೋ ಮೀಟರ್ ಒಳಗೊಂಡಿದೆ. ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯನವರು ಪ್ರತಿಕ್ರಿಯೆ ನೀಡಿ, "ನಮ್ಮ ಸರ್ಕಾರ ಕಸ್ತೂರಿ ರಂಗನ್ ಕೊಟ್ಟಿರುವ ವರದಿಗೆ ವಿರುದ್ದವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ನೀರಾವರಿ ಸಚಿವರು ಇದೆ ವಿಚಾರವಾಗಿ ದೆಹಲಿಗೆ ಹೋಗಿದ್ದು, ಇದಕ್ಕೆ ಸಂಬಂಧಪಟ್ಟವರ ಜೊತೆ ಚರ್ಚೆ ಮಾಡಲಿದ್ದಾರೆ.‌ ಈ ವರದಿಯಿಂದ ರಾಜ್ಯದ ಹಲವಾರು ಜಿಲ್ಲೆಗಳ ಹಳ್ಳಿಗಳಿಗೆ ತೊಂದರೆಯಾಗಲಿದೆ. ನಮ್ಮ ಸರ್ಕಾರ ಅದನ್ನು ತಿರಸ್ಕಾರ ಮಾಡಿ, ಕೇಂದ್ರ‌‌‌ ಸರ್ಕಾರಕ್ಕೆ ವರದಿ ಕಳುಹಿಸಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಲಾಗಿದೆ ಅಂತಾ ಭರವಸೆ ಕೊಟ್ಟಿದ್ದಾರೆ ಎಂದರು.

 ವರದಿ ಅಡಿಯಲ್ಲಿ ಬರುವ ಹಳ್ಳಿಗಳು

ವರದಿ ಅಡಿಯಲ್ಲಿ ಬರುವ ಹಳ್ಳಿಗಳು

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಆದಿಬೈಲು ಎಂಬ ಹಳ್ಳಿ ಈ ವ್ಯಾಪ್ತಿಯಲ್ಲಿ ಬರುತ್ತದೆ. ಇನ್ನು ಸಕಲೇಶಪುರ ತಾಲೂಕಿನ ಅಚನಹಳ್ಳಿ, ಮರಗುಂದ, ಅಗನಿ, ಕುಮಾರಹಳ್ಳಿ, ಹೊಡಚಹಳ್ಳಿ, ಕಾಡುಮನೆ ಎಸ್ಕೇಟ್, ಹೆಗ್ಗಡ್ಡೆ ಸೇರಿದಂತೆ ಜಿಲ್ಲೆಯ 20ಕ್ಕೂ ಹೆಚ್ಚು ಹಳ್ಳಿಗಳು ಕಸ್ತೂರಿ ರಂಗನ್ ವರದಿಯೊಳಗೆ ಬರಲಿದವೆ. 3 ಜಿಲ್ಲೆಯ ನೂರಾರು ಹಳ್ಳಿಗಳನ್ನು ಸೂಕ್ಷ್ಮ ವಲಯದೊಳಗೆ ಗುರುತಿಸಿದ್ದು, ಈ ವರದಿಯನ್ನು ಸರ್ಕಾರ ಅನುಮೋದನೆ ನೀಡಿದರೆ ಹಳ್ಳಿಗಳ ಜನರಿಗೆ ಅಪಾಯ ಎದುರಿಸಲಿದ್ದಾರೆ.

 ಸೂಕ್ತ ಸರ್ವೇ ಮಾಡಿಸಬೇಕು ಎಂದು ಜನರು ಪಟ್ಟು

ಸೂಕ್ತ ಸರ್ವೇ ಮಾಡಿಸಬೇಕು ಎಂದು ಜನರು ಪಟ್ಟು

20,688 ಚದರ ಕಿಲೋ‌ಮೀಟರ್ ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶಕ್ಕೆ ಅವೈಜ್ಞಾನಿಕ ಬಫರ್ ಝೋನ್ ಒಳಪಡಿಸಿ, ಕೆಲವೊಂದು ಹಳ್ಳಿಗಳ ಹೆಸರು ಪ್ರಸ್ಥಾಪಿಸಲಾಗಿದೆ, ಆದರೆ ಯಾವ ಗ್ರಾಮ, ಎಷ್ಟನೇ ಸರ್ವೇ ನಂಬರ್, ಎಷ್ಟು ಎಕರೆ ಪ್ರದೇಶ ಈ ವ್ಯಾಪ್ತಿಗೆ ಬರುತ್ತದೆ ಅಂತಾ ನಿಖರವಾಗಿ ಗುರುತು ಮಾಡದೇ ಇರೋದು ನೂರಾರು ಹಳ್ಳಿಗಳ ಜನರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಕೇಂದ್ರ ಪರಿಸರ ಇಲಾಖೆ ಒಂದು ವರ್ಷ ಅವಕಾಶ ನೀಡಿದ್ದು ಹಾಸನದ ಜನರು ನಿಟ್ಟುಸಿರು ಬಿಡುವಂತಾಗಿದೆ. ಮುಂದೆ ಕೇಂದ್ರ ಸರ್ಕಾರ ಸೂಕ್ತ ಸರ್ವೇ ನಡೆಸಿ ಮಲೆನಾಡಿನ ಹಳ್ಳಿಗಳನ್ನು ಕೈಬಿಡಬೇಕೆಂದು ಹಾಸನ ಜನರು ಓತ್ತಾಯಿಸಿದ್ದಾರೆ...

ಭೌತಿಕ ಸರ್ವೇ ಮೂಲಕ ಸೂಕ್ಷ್ಮ ಪರಿಸರ ಗುರುತಿಸಿಲ್ಲ

ಭೌತಿಕ ಸರ್ವೇ ಮೂಲಕ ಸೂಕ್ಷ್ಮ ಪರಿಸರ ಗುರುತಿಸಿಲ್ಲ

ಇದೊಂದು ಉಪಗ್ರಹ ಆಧಾರಿತ ಯೋಜನೆಯಾಗಿದ್ದು, ಖುದ್ದಾಗಿ ಭೌತಿಕ ಸರ್ವೇ ಮೂಲಕ ಸೂಕ್ಷ್ಮ ಪರಿಸರ ಗುರುತಿಸಿಲ್ಲ. ಇದರಲ್ಲಿ ಕೃತಕ ಅರಣ್ಯವಾದ ಕಾಫಿ, ಅಡಿಕೆ, ತೆಂಗು ತೋಟಗಳು ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. ಇದನ್ನ ಸರಿಪಡಿಸಲು ಖುದ್ದಾಗಿ ಸರ್ವೇ ಮಾಡಿಸಿ, ನೈಸರ್ಗಿಕ ಅರಣ್ಯ ಗಡಿಯನ್ನು ಗುರುತಿಸಬೇಕು ಎಂದು ಮಲೆನಾಡಿನ ಜನರು ಹಾಗೂ ಶಾಸಕರು ಒತ್ತಾಯಿಸಿದ್ದಾರೆ.‌

Recommended Video

Navya Pleading To Rajkumar Audio leak | ನನಿಗ್ ಯಾಕ್ ಮೋಸ ಮಾಡ್ದೆ !! ನವ್ಯ ಅಳಲು !! | *Politics | OneIndia

English summary
Based on the kaSturi Rangan report, the Central Environment Department had issued the 5th notification in Western Ghats. The government and the people expressed outrage that if this is implemented, the lives of thousands of people in the villages will be ruined. After this, the Central Environment Department has given one year's time, and the people of Hassan can heave a sigh of relief.Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X