ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿವೃತ್ತಿಯ ಮಾತೇ ಇಲ್ಲ, ರಾಹುಲ್ ಜೊತೆ ನಿಲ್ಲುತ್ತೇನೆ ಎಂದ ದೇವೇಗೌಡ್ರು

|
Google Oneindia Kannada News

Recommended Video

Lok Sabha Elections : ರಾಹುಲ್ ಜೊತೆಗೆ ಎಂದಿಗೂ ನಿಲ್ತಾರೆ ಗೌಡ್ರು | Oneindia kannada

ಹಾಸನ, ಏಪ್ರಿಲ್ 19: "ನಾನು ರಾಜಕೀಯ ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ. ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ನಾನು ಅವರೊಂದಿಗೆ ಜೊತೆಯಾಗಿರುತ್ತೇನೆ"ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ವರಸೆ ಬದಲಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹಾಸನ ಕ್ಷೇತ್ರದಲ್ಲಿ ಗುರುವಾರ ಮೊದಲ ಹಂತದ ಚುನಾವಣೆಗೆ ಮತದಾನ ಮಾಡಿದ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ರೀತಿ ಹೇಳಿದರು.

ಹಾಸನದಲ್ಲಿ ಮೊಮ್ಮಗನ ಗೆಲುವಿಗೆ ಮತಚಲಾಯಿಸಿ ದೇವೇಗೌಡ ದಂಪತಿಹಾಸನದಲ್ಲಿ ಮೊಮ್ಮಗನ ಗೆಲುವಿಗೆ ಮತಚಲಾಯಿಸಿ ದೇವೇಗೌಡ ದಂಪತಿ

"ನಾನು ಇನ್ನು ಮೇಲೆ ಚುನಾವಣಾ ರಾಜಕೀಯದಿಂದ ದೂರವುಳಿಯುತ್ತೇನೆ. ಚುನಾವಣೆಗೆ ಸ್ಪರ್ಧಿಸೋಲ್ಲ ಎಂದು ಮೂರು ವರ್ಷದ ಮೊದಲೇ ನಾನು ಹೇಳಿದ್ದೆ. ಆದರೆ ನಾನು ಚುನಾವಣೆಗೆ ನಿಲ್ಲಲೇ ಬೇಕಾದ ಒತ್ತಡ ಹುಟ್ಟಿತು. ಚುನಾವಣೆಗೆ ನಿಲ್ಲುವಂತೆ ಅಭಿಮಾನಿಗಳು, ಮೈತ್ರಿಪಕ್ಷದ ನಾಯಕರು ಒತ್ತಾಯ ಮಾಡಿದ್ದರಿಂದ ಬೇರೆ ದಾರಿ ಕಾಣದೆ ಮತ್ತೆ ಚುನಾವಣೆಗೆ ಸ್ಪರ್ಧಿಸಿದೆ" ಎಂದು ಗೌಡರು ಹೇಳಿದರು.

Not retiring, will be there for Rahul Gandhi when he becomes PM: HD Deve Gowda

"ನನ್ನ ಚುನಾವಣಾ ಸ್ಪರ್ಧೆಯನ್ನು ಬೇರೆ ರೀತಿ ಅರ್ಥೈಸುವ ಅಗತ್ಯವಿಲ್ಲ. ನನಗೆ ಯಾವ ಉದ್ದೇಶವೂ ಇಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ಅವರ ಜೊತೆ ಇರುತ್ತೇನೆ. ನನಗೆ ಪ್ರಧಾನಿಯಾಗುವ ಆಸೆ ಇಲ್ಲ" ಎಂದು ಗೌಡರು ಸ್ಪಷ್ಟಪಡಿಸಿದ್ದಾರೆ.

ಅದ್ಯಾಕೆ ದೇವೇಗೌಡ್ರು 'ದಯಮಾಡಿ' ಮತಯಾಚಿಸುತ್ತಿದ್ದಾರೆ? ಸೋಲಿನ ಮುನ್ಸೂಚನೆಯೇ? ಅದ್ಯಾಕೆ ದೇವೇಗೌಡ್ರು 'ದಯಮಾಡಿ' ಮತಯಾಚಿಸುತ್ತಿದ್ದಾರೆ? ಸೋಲಿನ ಮುನ್ಸೂಚನೆಯೇ?

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಏಪ್ರಿಲ್ 18 ರಂದು ನಡೆದಿದ್ದು, ಫಲಿತಾಂಶ ಮೇ 23 ರಂದು ಹೊರಬೀಳಲಿದೆ.

English summary
Former prime minister and JD(S) supremo HD Deve Gowda has said that he will not retire from active politics and that if Rahul Gandhi becomes the Prime Minister of the country, he will be by his side.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X