ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ 19: ಹಾಸನದಿಂದ ಕೊರೊನಾ ದೂರ ದೂರ...

|
Google Oneindia Kannada News

ಹಾಸನ, ಮೇ 6; ಹಾಸನ ಜಿಲ್ಲೆಯ ಕೊರೊನಾ ವೈರಸ್ ಸ್ಥಿತಿಗತಿ ಕುರಿತು ಹಾಸನ ಜಿಲ್ಲಾಧಿಕಾರಿ ಮೇ 6 ರ ಅಂಕಿ ಆಂಶ ಬಿಡುಗಡೆ ಮಾಡಿದ್ದು, ಆ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೋವಿಡ್ ಪಾಸಿಟೀವ್ ಪ್ರಕರಣ ಪತ್ತೆಯಾಗಿಲ್ಲ.

Recommended Video

ಕಲಾವಿದರಿಗೆ ಸರ್ಕಾರ ಕೊಡ್ತಿರೋ ಹಣವನ್ನು ಅವಶ್ಯಕತೆ ಇದ್ದೋರು ಪಡೆದುಕೊಳ್ಳಿ | Saadhu Kokila | Oneindia Kannada

ಇದುವರೆಗೆ ಕೊರೊನಾ ಶಂಕಿತರೆಂದು 2403 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇವರಲ್ಲಿ 828 ಜನ ಅಂತರ ರಾಷ್ಟ್ರೀಯ ಪ್ರಯಾಣಿಕರು ಮತ್ತು ಶಂಕಿತರು ಹಾಗೂ 109 ಜನ ವಿದೇಶಿಯರಾಗಿರುತ್ತಾರೆ. ಶೀತ, ನೆಗಡಿ, ಕೆಮ್ಮು ಇರುವ 1,377 ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ.

10 ದಿನದಿಂದ ಜ್ವರ, ಕೆಮ್ಮು, ನೆಗಡಿ ಕಂಡುಬಂದಿರುವ 89 ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ. 2362 ಜನರ ಗಂಟಲ ಶ್ರಾವವನ್ನು ಪರೀಕ್ಷೆಗೆ ಒಳಪಡಿಸಿದ್ದು ಎಲ್ಲರ ವರದಿ ನೆಗೆಟೀವ್ ಬಂದಿರುತ್ತದೆ.

No Covid19 Positive Cases In Hasan District

ಒಟ್ಟು ಹಾಲಿ 14 ದಿನಗಳ ವರೆಗಿರುವ 87 ಜನರನ್ನು ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ವಹಿಸಲಾಗಿದೆ. ಇದಲ್ಲದೇ 14 ದಿನದಿಂದ 28 ದಿನಗಳ ವರೆಗಿರುವ 25 ಮಂದಿಯ ದೈನಂದಿನ ಆರೋಗ್ಯ ಮಾಹಿತಿ ಪಡೆಯಲಾಗುತ್ತಿದೆ. 467 ಜನ 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 26 ಜನ ಆಸ್ಪತ್ರೆಯ ಐಸೋಲೇಷನ್‍ನಲ್ಲಿ ಇದ್ದಾರೆ, 899 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
No Covid19 Positive Cases In Hasan District. 2403 people tested report nagative. here the latest datas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X