• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೀಘ್ರವೇ ಮುಗಿಯಲಿದೆ ಎನ್ ಹೆಚ್ 75 ರಸ್ತೆ ಕಾಮಗಾರಿ

|

ಹಾಸನ, ಜನವರಿ 13: ಹಾಸನ-ಸಕಲೇಶಪುರ ನಡುವಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ -75 ರಸ್ತೆ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ. ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಚಿವರು, ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಗೋಪಾಲಯ್ಯ ಮತ್ತು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ನಾರಾಯಣಸ್ವಾಮಿ ಮತ್ತು ಶಾಸಕರಾದ ಅಶ್ವಥ್‍ ನಾರಾಯಣ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿದರು.

ಶಿರಸಿ-ಕುಮಟಾ ರಸ್ತೆ ಅಗಲೀಕರಣ; ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ

ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ ಸಚಿವ ಕೆ. ಗೋಪಾಲಯ್ಯ, "ಈ ವರ್ಷದ ಮೇ ತಿಂಗಳ ಅಂತ್ಯದ ವೇಳೆಗೆ ಮಳೆಗಾಲ ಪ್ರಾರಂಭವಾಗುವುದರಿಂದ ಆದಷ್ಟು ಗರಿಷ್ಠ ಕಾಮಗಾರಿ ಪೂರ್ಣಗೊಳಿಸಿ 2022ಕ್ಕೆ ಸಂಪೂರ್ಣ ಕಾಮಗಾರಿ ಮುಗಿಸುವಂತೆ" ಸೂಚನೆ ನೀಡಿದರು.

ಈ ಗ್ರಾಮದ ರಸ್ತೆ ಸಂಚಾರವೇ ದುಸ್ತರ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಇದರಿಂದಾಗಿ ಪ್ರಯಾಣಿಕರು ಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲಸ ಚುರುಕಿನಿಂದ ಸಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ನಗರದ ರಸ್ತೆ ಅಗೆದರೆ ಭಾರೀ ದಂಡ ಕಟ್ಟಲು ಸಿದ್ಧರಾಗಿ

ಮರಗಳು, ಕಲ್ಲಿಗೆ ವ್ಯವಸ್ಥೆ

ಮರಗಳು, ಕಲ್ಲಿಗೆ ವ್ಯವಸ್ಥೆ

"ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕಾಮಗಾರಿಗೆ ಅಗತ್ಯವಿರುವ ಮರಳು ಹಾಗೂ ಕಲ್ಲಿಗೆ ಅಗತ್ಯ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ಗುಣಮಟ್ಟ ಕಾಯ್ದುಕೊಂಡು 2022ರ ಒಳಗೆ. ಈ ರಸ್ತೆಯನ್ನು ಮುಗಿಸಬೇಕು" ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

ಕಾಮಗಾರಿ ಚುರುಕುಗೊಳಿಸಿ

ಕಾಮಗಾರಿ ಚುರುಕುಗೊಳಿಸಿ

ರಸ್ತೆ ನಿರ್ಮಾಣಕ್ಕೆ 5ಕಡೆ ಮರಳು ಗಣಿ ಪ್ರದೇಶಗಳನ್ನು ನೀಡಲಾಗಿದೆ. ಕಲ್ಲು ಒದಗಿಸಲಾಗಿದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹೆದ್ದಾರಿ ಸಚಿವರಾ ನಿತಿನ್ ಗಡ್ಕರಿಯವರು ಕಾಮಗಾರಿ ಚುರುಕುಗೊಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತಾಪ್ ಸಿಂಹ ಅವರು ಕೇಂದ್ರ ಸಚಿವರೊಂದಿಗೆ ಸಂಪರ್ಕ ಮಾಡಿ ಕಾಮಗಾರಿ ತ್ವರಿತಗೊಳಿಸಲು ಶ್ರಮಿಸುತ್ತಿದ್ದಾರೆ ಎಂದು ಗೋಪಾಲಯ್ಯ ಹೇಳಿದರು.

ಬಹಳ ಪ್ರಮುಖ ರಸ್ತೆ

ಬಹಳ ಪ್ರಮುಖ ರಸ್ತೆ

ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, "ಎನ್‍ ಹೆಚ್ 75 ಬಹಳ ಪ್ರಮುಖ ರಸ್ತೆಯಾಗಿದ್ದು ಹಾಸನದಿಂದ ಮಂಗಳೂರಿನವರೆಗೆ ರಸ್ತೆ ಕಾಮಗಾರಿಯ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಸಿಲಾಗಿದೆ. ಮೊದಲು ಕಾಮಗಾರಿ ಪ್ರಾಥಮಿಕ ಗುತ್ತಿಗೆ ಪಡೆದ ಗುತ್ತಿಗೆದಾರರು ಕಾಮಗಾರಿ ಮಾಡದೆ ಇದ್ದ ಕಾರಣ ಉಪಗುತ್ತಿಗೆದಾರರಿಗೆ ಕಂಟ್ರಾಕ್ಟರ್ ಮಾಡುವವರಿಗೆ ಪೂರ್ಣಪ್ರಮಾಣದ ಕಾಮಗಾರಿ ವಹಿಸಲಾಗುತ್ತಿದೆ" ಎಂದರು.

ಕ್ರಿಯಾ ಯೋಜನೆ ತಯಾರಾಗಿದೆ

ಕ್ರಿಯಾ ಯೋಜನೆ ತಯಾರಾಗಿದೆ

ಈಗಾಗಲೇ 13 ಕಿ. ಲೋ. ಮೀಟರ್ ರಸ್ತೆ ಆಗಿದೆ. ಮಾರನಹಳ್ಳಿ-ಮಂಗಳೂರಿನ ನಡುವೆ ರಸ್ತೆ ಸುರಂಗ ಮಾರ್ಗ ವಿಸ್ತೃತ ಕ್ರಿಯಾ ಯೋಜನೆ ತಯಾರಾಗಿದೆ. 10 ಸಾವಿರ ಕೋಟಿ ರೂ. ಯೋಜನೆ ಶೀಘ್ರ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

English summary
Hassan district in-charge minister K.Gopalaiah directed officials to complete NH 75 national high way project. Road will connect Bengaluru and Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X