ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ಹಯ್ಯ ಹತ್ಯೆ ಬಗ್ಗೆ ಮುಸ್ಲಿಂ ಸಂಘಟನೆಗಳು ತುಟಿ ಬಿಚ್ಚುತ್ತಿಲ್ಲ ಏಕೆ?: ಆರ್. ಅಶೋಕ್ ಪ್ರಶ್ನೆ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜೂ20: ರಾಜಸ್ಥಾನದಲ್ಲಿ ನಡೆದ ಕನ್ಹಯ್ಯ ಲಾಲ್‌ ಹತ್ಯೆ ಪ್ರಕರಣವನ್ನು ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ, ಇಲ್ಲದಿದ್ದರೆ ಇದು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಮುಸ್ಲಿಂ ಸಂಘಟನೆ, ಓವೈಸಿ ಸಂಘಟನೆಯವರು ಘಟನೆ ಬಗ್ಗೆ ಏಕೆ ತುಟಿ ಬಿಚ್ಚುತ್ತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, "ಮುಸ್ಲಿಂ ಸಂಘಟನೆಗಳು ಹೊರಬಂದು ಮಾತನಾಡಬೇಕು, ಬಿಜೆಪಿ ನಾಯಕಿ ನೂಪುರ್ ಶರ್ಮ ಹೇಳಿಕೆ ಬೆಂಬಲಿಸಿದ್ದವನ ಶಿರಚ್ಛೇಧ ಮಾಡಿರುವ ಘಟನೆ ಮಾತನಾಡಿದ ಅವರು, ಆರೋಪಿಗಳ ವಿರುದ್ಧ ಆಕ್ರೋಶ ಹೊರಹಾಕಿದರು‌. ಮುಸ್ಲಿಂ ಸಂಘಟನೆಗಳು ಹೊರಬಂದು ಮಾತನಾಡಬೇಕು, ಮುಸ್ಲಿಂ ನಾಯಕರು ಮಾತನಾಡುತ್ತಿಲ್ಲ, ಬಟ್ಟೆ ಹೊಲಿಯಲು ಕೊಡುತ್ತೀನಿ ಎಂದು ಚಾಕು ಹಾಕಿದ್ದಾರೆ. ಇವರಿಗೆ ದಮ್ ಇಲ್ಲ, ಇದನ್ನೆಲ್ಲ ಹೇಡಿಗಳು ಮಾಡುವ ಕೆಲಸ," ಎಂದು ಕಿಡಿಕಾರಿದರು.

ಪ್ರಧಾನಿ ಮೋದಿ ಮಾತು ಕೇಳದೇ ಎಚ್‌ಡಿಕೆ ತಪ್ಪು ಮಾಡಿದರು': ಎಚ್.ಡಿ.ರೇವಣ್ಣಪ್ರಧಾನಿ ಮೋದಿ ಮಾತು ಕೇಳದೇ ಎಚ್‌ಡಿಕೆ ತಪ್ಪು ಮಾಡಿದರು': ಎಚ್.ಡಿ.ರೇವಣ್ಣ

ಇನ್ನು ಭಯೋತ್ಪಾದನೆ ಮುಸ್ಲಿಂ ಸಂಘಟನೆ ಅವರು ಹೀಗೆ ಮಾಡುತ್ತಾರೆ, ಹಿಂದೆ ಸಾಕಷ್ಟು ಸಂಘಟನೆಗಳನ್ನ ಬ್ಯಾನ್ ಮಾಡಿದ್ದೇವೆ, ಬ್ಯಾನ್ ಮಾಡಿದರೆ ಇನ್ನೊಂದು ಹೆಸರಲ್ಲಿ ಬರ್ತಾ ಇದ್ದಾರೆ. ರಾಜಸ್ಥಾನ ಸರ್ಕಾರ ತಪ್ಪು ಮಾಡಿದ್ದರೆ ಸರ್ಕಾರ ಉಳಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ದೇಶದಲ್ಲಿ 4 ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ‌

ದೇಶದಲ್ಲಿ 4 ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ‌

ಕಾಂಗ್ರೆಸ್ ಬಿ ಟೀಮಾ, ಜೆಡಿಎಸ್ ಬಿ ಟೀಮಾ ತಿಳಿಯುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಮೊನ್ನೆ ರಾಜ್ಯಸಭೆ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಕಾಲು ಹಿಡಿಯೋದೊಂದೇ ಬಾಕಿ ಇತ್ತು, ಜೆಡಿಎಸ್ ಕಾಂಗ್ರೆಸ್ ಕಾಲು ಹಿಡಿಯುವ ಹಂತಕ್ಕೆ ಹೋದರು ಕೇಂದ್ರದ ನಾಯಕರು. ಇದರಿಂದ ಸ್ಪಷ್ಟವಾಗಿ ಅರ್ಥ ಆಗುತ್ತೆ ಇವರಿಬ್ಬರ ನಡುವೆ ಏನು ಒಪ್ಪಂದ ಇದೆ ತಿಳಿಯುತ್ತಿಲ್ಲ. ಎಚ್ ಡಿ ಕುಮಾರಸ್ವಾಮಿ ನಾನೇ ಮುಖ್ಯಮಂತ್ರಿ ಎನ್ನುತ್ತಾರೆ. ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಬೆಂಬಲ ನೀಡದೇ 120 ಸೀಟು ಗೆದ್ದು ಸಿಎಂ ಆಗುತ್ತೇವೆ ಅಂತಾ ಕಾಂಗ್ರೆಸ್ ನವರು ಹೇಳ್ತಾರೆ. ನಾವು ಯಾವುದೇ ಕಾರಣಕ್ಕೂ ಯಾರಿಗೂ ಬೆಂಬಲ ನೀಡಲ್ಲ , ನಾವೇ ಸ್ವತಂತ್ರವಾಗಿ ಬಿಜೆಪಿ ಗೆಲ್ಲುತ್ತದೆ ಎಂದರು. ಈಗಾಗಲೇ ದೇಶದಲ್ಲಿ 4 ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ‌. ಇನ್ನೆನು ಮೂರ್ನಾಲ್ಕು ದಿನಗಳಲ್ಲಿ ಮಹಾರಾಷ್ಟ್ರದಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

ನೂಪುರ್ ಶರ್ಮಾ ಅವರಿಗೆ ಬೆಂಬಲ

ನೂಪುರ್ ಶರ್ಮಾ ಅವರಿಗೆ ಬೆಂಬಲ

ಉದಯಪುರದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಕನ್ಹಯ್ಯ ಲಾಲ್ ಸೋಷಿಯಲ್ ಮೀಡಿಯಾದಲ್ಲಿ ನೂಪುರ್ ಶರ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿ ಹಲವು ಪೋಸ್ಟ್‌ಗಳನ್ನು ಹಾಕಿದ್ದರು. ಇದೇ ಕಾರಣಕ್ಕೆ ಹಿಂದೊಮ್ಮೆ ಅವರನ್ನು ಪೊಲೀಸರು ಬಂಧಿಸಿಯೂ ಇದ್ದರು. ಆದರೆ, ಗೋಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತಾರಿ ಇಬ್ಬರೂ ಗ್ರಾಹಕರ ಸೋಗಿನಲ್ಲಿ ದರ್ಜಿಯ ಅಂಗಡಿಗೆ ಹೋಗುತ್ತಾರೆ. ಕನ್ಹಯ್ಯ ಲಾಲ್ ಇವರ ಬಟ್ಟೆ ಹೊಲಿಯಲು ಮೈ ಅಳತೆ ತೆಗೆದುಕೊಳ್ಳುವಾಗ ಹಂತಕರು ಕತ್ತು ಸೀಳಿ ಸಾಯಿಸುತ್ತಾರೆ. ನಂತರ ಕನ್ಹಯ್ಯನ ಕತ್ತು ಕತ್ತರಿಸುವ ಪ್ರಯತ್ನನ್ನೂ ಮಾಡುತ್ತಾರೆ. ಈ ಘಟನೆಯ ವಿಡಿಯೋ ರೆಕಾರ್ಡ್ ಮಾಡಿದ ಇವರು ಅದನ್ನು ಇಂಟರ್ನೆಟ್ ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಕತ್ತು ಸೀಳಿದ ಚಾಕುವನ್ನು ವಿಡಿಯೋದಲ್ಲಿ ತೋರಿಸುತ್ತಾ ಪ್ರಧಾನಿ ನರೇಂದ್ರ ಮೋದಿಗೂ ಬೆದರಿಕೆ ಹಾಕಿದ್ದಾರೆ. ಸದ್ಯ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ. ವಿಶೇಷ ತನಿಖಾ ತಂಡ ರಚನೆಯಾಗಿ ತನಿಖೆ ನಡೆಸುತ್ತಿದೆ. ಕೇಂದ್ರದಿಂದ ಎನ್‌ಐಎ ಕೂಡ ಅಖಾಡಕ್ಕೆ ಇಳಿದಿದ್ದು ಇದನ್ನು ಭಯೋತ್ಪಾದಕಾ ಕೃತ್ಯದ ಪ್ರಕರಣವೆಂದು ಪರಿಗಣಿಸಿ ತನಿಖೆ ಮಾಡಲಿದೆ. ಈ ಎನ್‌ಐಎ ತಂಡದಲ್ಲಿ ಒಬ್ಬ ಡಿಐಜಿ ಮಟ್ಟದ ಅಧಿಕಾರಿಯೂ ಇದ್ದಾರೆನ್ನಲಾಗಿದೆ.

ಪಕ್ಷ ತೊರೆಯುವ ವದಂತಿ, ಸ್ಪಷ್ಟನೆ ಕೊಟ್ಟ ಶಾಸಕ ಶಿವಲಿಂಗೇ ಗೌಡಪಕ್ಷ ತೊರೆಯುವ ವದಂತಿ, ಸ್ಪಷ್ಟನೆ ಕೊಟ್ಟ ಶಾಸಕ ಶಿವಲಿಂಗೇ ಗೌಡ

ಹಂತಕರು ಐಸಿಸ್ ಜೊತೆ ಸಂಬಂಧ ಶಂಕೆ

ಹಂತಕರು ಐಸಿಸ್ ಜೊತೆ ಸಂಬಂಧ ಶಂಕೆ

ರಾಜಸ್ಥಾನದ ಉದಯಪುರ್ ನಲ್ಲಿ ಸಂಭವಿಸಿದ ಪೈಶಾಚಿಕ ಹತ್ಯೆ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸುವಂತಿದೆ. ಸಾಮಾಜಿಕ ಜಾಲತಾಣದಲ್ಲಿ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದ ದರ್ಜಿ ಕನ್ಹಯ್ಯ ಲಾಲ್ ಎಂಬುವರನ್ನು ಇಬ್ಬರು ವ್ಯಕ್ತಿಗಳು ಭೀಕರವಾಗಿ ಕೊಂದುಹಾಕಿದ್ದಾರೆ. ಈ ಘಟನೆಯನ್ನು ಕೇಂದ್ರ ಸರಕಾರ ಭಯೋತ್ಪಾದನಾ ಘಟನೆ ಎಂಬಂತೆ ಪರಿಗಣಿಸಿ ತನಿಖೆ ನಡೆಸಲು ಮುಂದಾಗಿದೆ.

ಕನ್ಹಯ್ಯ ಲಾಲ್ ಅವರನ್ನು ಕೊಂದ ಗೋಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತಾರಿ ಅವರಿಬ್ಬರನ್ನೂ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಘಟನೆಯ ತನಿಖೆ ನಡೆಸಲು ರಾಜ್ಯ ಸರಕಾರ ಕೂಡ ವಿಶೇಷ ತಂಡವೊಂದನ್ನು ರಚಿಸಿದೆ.

ಕೇಂದ್ರ ಸರಕಾರ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ತಂಡವೊಂದನ್ನು ಉದಯಪುರಕ್ಕೆ ಕಳುಹಿಸಿದೆ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಐಸಿಸ್ ಮಾದರಿಯಲ್ಲಿ ತಲೆ ಕತ್ತರಿಸಿ ಹತ್ಯೆಗೈಯ್ಯಲು ಹಂತಕರು ಪ್ರಯತ್ನಿಸಿದ್ದಾರೆ. ವಿಡಿಯೋ ಕೂಡ ಮಾಡಿ ಬಿಡುಗಡೆ ಮಾಡಿದ್ದಾರೆ. ಈ ಹಂತಕರು ಐಸಿಸ್ ಜೊತೆ ಸಂಬಂಧ ಹೊಂದಿರಬಹುದು ಎಂದು ಶಂಕಿಸಲಾಗಿದೆ.

ಹಿಂದೂಗಳೇನೂ ಕೈಗೆ ಬಳೆ ತೊಟ್ಟಿಲ್ಲ

ಹಿಂದೂಗಳೇನೂ ಕೈಗೆ ಬಳೆ ತೊಟ್ಟಿಲ್ಲ

ರಾಜಸ್ಥಾನದ ಉದಯಪುರ್ದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ್ದ ಟೈಲರ್‌ ಕನ್ನಯ್ಯ ಲಾಲ್‌ ಎಂಬುವವರನ್ನು ದುಷ್ಕರ್ಮಿಗಳು ಕ್ರೂರವಾಗಿ ಕೊಲೆ ಮಾಡಿದ್ದನ್ನು ಖಂಡಿಸಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಂತಕರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದಾವಣಗೆರೆ ನಗರದಲ್ಲಿ ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ರೇಣುಕಾಚಾರ್ಯ, "ಹಿಂದೂಗಳೇನೂ ಕೈಗೆ ಬಳೆ ತೊಟ್ಟಿಲ್ಲ. ಹಿಂದೂಗಳನ್ನು ಸೀಳಿದವರನ್ನು ನಾವು ಸೀಳಬೇಕು. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಆಗಲೇಬೇಕು, ಈ ಪ್ರತ್ಯುತ್ತರ ಕೊಟ್ಟಾಗ ಮಾತ್ರ ಎಲ್ಲರೂ ಸುಮ್ಮನಿರುತ್ತಾರೆ. ಇಂತ ಅಯೋಗ್ಯರನ್ನು ಮಟ್ಟ ಹಾಕಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recommended Video

ಶಿವಸೇನೆ ಉರುಳಿಸಲು ಒಂದಾದ ಶಿಂದೆ ಬಣ ಮತ್ತು BJP ಈಗ ಖಾತೆ ಕ್ಯಾತೆಯಿಂದ ದೂರವಾಗ್ತಾರಾ? | Oneindia Kannada

English summary
central government has taken the Kanhaiya murder case seriously, otherwise it will lead to a big disaster. Revenue Minister R Ashok expressed outrage as to why Muslim organizations and Owaisi organizations are not talking about the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X