ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಕ್ಕೆ ಶಾಸಕ ಎಚ್.ಡಿ.ರೇವಣ್ಣ ಖಡಕ್ ಆವಾಜ್

By Manjunatha
|
Google Oneindia Kannada News

ಹಾಸನ, ಫೆಬ್ರವರಿ 27: ಹೇಮಾವತಿ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸಲು ಸರ್ಕಾರಕ್ಕೆ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಮಾರ್ಚ್‌ 5 ರವರೆಗೆ ಗಡುವು ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು ಮಾರ್ಚ್‌ 5 ರವರೆಗೆ ಹೇಮಾವತಿ ನಾಲೆಗಳಿಗೆ ನೀರು ಬಿಡದಿದ್ದಲ್ಲಿ, ನಾವೇ ರೈತರೊಂದಿಗೆ ಸೇರಿ ಡ್ಯಾಂ ಗೇಟ್ ತೆರೆದು ನೀರು ಬಿಡುತ್ತೇವೆ, ನಮ್ಮ ಮೇಲೆ ಫೈರಿಂಗ್ ಆದರೂ ಮಾಡಲಿ, ಅರೆಸ್ಟ್ ಆದರೂ ಮಾಡಲಿ ಎಂದು ಅವರು ಆವಾಜ್ ಹಾಕಿದ್ದಾರೆ.

ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ತೀವ್ರ ನೀರಿನ ಅಭಾವ ಇದ್ದು, ಜನ, ಜಾನುವಾರುಗಳೂ ಸಹ ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಹೀಗಾಗಿ ಒಂದು ವಾರವಾದ್ರೂ ನಾಲೆಗಳಿಗೆ ನೀರು ಹರಿಸಲೇಬೇಕು ಎಂದು ಆಗ್ರಹಿಸಿದ್ದಾರೆ.

MLA Revanna demands release Hemavathi water to canel

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಹರಿಹಾಯ್ದಿರುವ ಅವರು ಈವರೆಗೆ ರೈತರ ಅನ್ನ ಕಿತ್ತುಕೊಂಡಿದ್ದಾರೆ, ಕನಿಷ್ಟ ‌ಕುಡಿಯಲು ನೀರು ಕೊಡಲಿ ಎಂದು ಆವೇಶ ಭರತಿವಾಗಿ ಹೇಳಿದ್ದಾರೆ.

ಮಾರ್ಚ್‌ 5 ರ ಒಳಗೆ ನಾಲೆಗೆ ನೀರು ಬಿಡಲಿಲ್ಲವೆಂದರೆಸಾವಿರಾರು ಜನ ರೈತರು ಡ್ಯಾಂ ಗೆ ಮುತ್ತಿಗೆ ಹಾಕಿ ನಾವೇ ಗೇಟ್‌ಗಳನ್ನು ತೆರೆದು ನೀರು ಬಿಡುತ್ತೇವೆ ಎಂದು ಸವಾಲ್ ಹಾಕಿದ್ದಾರೆ.

English summary
JDS MLA Revanna demands to release Hemavathi water to canel. IF government fails to release water till march 5 farmers will attack Hemavathi dam and open gates and release water themselves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X