ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಬಳಿ ದಾಖಲೆ ಇದ್ದರೆ ಕೊಡಲಿ, ನಾನೂ ಕೊಡುವೆ: ಎ. ಮಂಜು ಸವಾಲು

|
Google Oneindia Kannada News

ಹಾಸನ, ಜನವರಿ 26 : ಸಚಿವ ಎ.ಮಂಜು, ಎಚ್.ಡಿ. ದೇವೇಗೌಡ ಅವರ ಮಧ್ಯೆ ಕೆಲ ದಿನಗಳಿಂದ ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇದೆ. ಅದೂ ಶುಕ್ರವಾರವೂ ಮುಂದುವರೆದಿದೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅರೋಪದ ವಿರುದ್ಧ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಉತ್ತರ ನೀಡುತ್ತೇನೆ ಎಂದು ಪಶುಸಂಗೋಪನೆ ಸಚಿವ ಎ. ಮಂಜು ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಸ್ತಕಾಭಿಷೇಕ ಕಾಮಗಾರಿಯಲ್ಲಿ ನಾನು ಕಮಿಷನ್ ಪಡೆದಿದ್ದೇನೆ ಎಂದು ಆರೋಪ ಮಾಡಿದ್ದಾರೆ ಅದೆಲ್ಲದಕ್ಕೂ ತಕ್ಕ ಉತ್ತರ ನೀಡುತ್ತೇನೆ ಎಂದರು.

ದೇವೇಗೌಡರು ನನ್ನ ಹಂಗಲ್ಲಿ ಇದ್ದಾರೆಂದ ಸಚಿವ ಎ ಮಂಜುದೇವೇಗೌಡರು ನನ್ನ ಹಂಗಲ್ಲಿ ಇದ್ದಾರೆಂದ ಸಚಿವ ಎ ಮಂಜು

ಕಾಮಗಾರಿಯ ಎಲ್ಲಾ ದಾಖಲೆ ಬಿಡುಗಡೆ ಮಾಡುತ್ತೇನೆ, 2006ರ ಮಸ್ತಕಾಭಿಷೇಕ ಕಾಮಗಾರಿ ದಾಖಲೆಯನ್ನು ಅವರು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ದೇವೇಗೌಡರ ಆರೋಪ ನನಗೆ ನೋವು ತಂದಿದೆ. ಪತ್ರಿಕಾಗೋಷ್ಠಿಯಲ್ಲಿ ನಾನು ನಡೆದು ಬಂದ ದಾರಿ, ಹಿನ್ನೆಲೆ ಎಲ್ಲವನ್ನೂ ವಿವರಿಸುತ್ತೇನೆ.

Minister Manju challenges Devegowda to release documents

ಎ ಮಂಜು ಬಗ್ಗೆ ಮುಖ್ಯಮಂತ್ರಿಗೆ ಏನೋ ದಾಕ್ಷಿಣ್ಯ ಇದೆ: ಎಚ್ ಡಿ ದೇವೇಗೌಡಎ ಮಂಜು ಬಗ್ಗೆ ಮುಖ್ಯಮಂತ್ರಿಗೆ ಏನೋ ದಾಕ್ಷಿಣ್ಯ ಇದೆ: ಎಚ್ ಡಿ ದೇವೇಗೌಡ

ಚುನಾವಣೆ ಸಂದರ್ಭದಲ್ಲಿ ಸಣ್ಣ ವಿಷಯಕ್ಕೆ ಖ್ಯಾತೆ ತೆಗೆಯುತ್ತಿದ್ದಾರೆ, ನಾನು ರಾಜಕೀಯದಲ್ಲಿದ್ದಾಗ ಕುಮಾರಸ್ವಾಮಿ ರಾಜಕೀಯದಲ್ಲಿ ಇರಲಿಲ್ಲ, ಅನಾಗರಿಕ ನಾಗಿ ನಾನು ಮಾತನಾಡಿಲ್ಲ, ಅವರಂತೆ ಛಿ, ಥೂ ಅಂತ ಮಾತನಾಡಿಲ್ಲ, ಇದು ದೇಶಕ್ಕೆ, ಮತದಾರರಿಗೆ ನಾಚಿಗೇಡಿನ ವಿಷಯ, ದೇವೇಗೌಡರು ಬಾರದೇ ಹೋದರೆ ಮಸ್ತಕಾಭಿಷೇಕ ನಿಂತು ಹೋಗುತ್ತಾ ಎಂದು ಟಾಂಗ್ ನೀಡಿದರು. ಇಂಥ ಮಾತಾಡುವುದನ್ನು ನಿಲ್ಲಿಸಬೇಕು, ಇಲ್ಲವಾದರೆ ನನಗೂ ಮಾತನಾಡುವುದು ಗೊತ್ತಿದೆ ಎಂದು ತಿರುಗೇಟು ನೀಡಿದರು.

English summary
Hassan district in charge minister A.Manju challenged former prime minister H.D. Devegowda to release documents regarding misappropriation in preparation work of Maha Mastakabhisheka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X