ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಪುಂಡ ಗಂಡಾನೆಗೆ ರೇಡಿಯೋ ಕಾಲರ್

|
Google Oneindia Kannada News

ಹಾಸನ, ಜನವರಿ 27; ಹಾಸನ ವಿಭಾಗ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗಕ್ಕೆ ಯಶಸ್ವಿಯಾಗಿ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಮೂರು ಹೆಣ್ಣಾನೆಗಳಿಗೂ ಸಹ ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ಮತ್ತೂರು ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಒಂದು ಗಂಡು ಆನೆ ಸೆರೆ ಹಿಡಿದು ರೆಡಿಯೋ ಕಾಲರ್ ಅಳವಡಿಸಿ ದಟ್ಟ ಅರಣ್ಯದಲ್ಲಿ ಬಿಟ್ಟಿದೆ.

ನಾಗರಹೊಳೆಯಲ್ಲಿ ಆನೆ ದಾಳಿ; ಅರಣ್ಯ ವೀಕ್ಷಕ‌ ಸಾವು ನಾಗರಹೊಳೆಯಲ್ಲಿ ಆನೆ ದಾಳಿ; ಅರಣ್ಯ ವೀಕ್ಷಕ‌ ಸಾವು

"ಹೆಣ್ಣು ಆನೆಗೆ ರೆಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಬುಧವಾರ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ" ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಬಸವರಾಜ್ ಹೇಳಿದ್ದಾರೆ.

ಹಾಸನ; ಉಪಟಳ ನೀಡುತ್ತಿರುವ ಆನೆಗಳಿಗೆ ರೇಡಿಯೋ ಕಾಲರ್ ಹಾಸನ; ಉಪಟಳ ನೀಡುತ್ತಿರುವ ಆನೆಗಳಿಗೆ ರೇಡಿಯೋ ಕಾಲರ್

Male Elephant Radio Collared In Hassan

ಮತ್ತಿಗೋಡು ಆನೆ ಕ್ಯಾಂಪ್‌ನಿಂದ ಅಭಿಮನ್ಯು ಸೇರಿದಂತೆ ಮೂರು ಆನೆಗಳನ್ನು ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಕಾಡಾನೆಯನ್ನು ಸೆರೆ ಹಿಡಿದು ಅಭಿಮನ್ಯು ಸಹಾಯದಿಂದ ಎಳೆದುಕೊಂಡು ಬರುವ ವಿಡಿಯೋವನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.

ಈ ಕಾರ್ಯಾಚರಣೆಗೆ ಅಭಿಮನ್ಯು ಮಾತ್ರವಲ್ಲ ಮೂವತ್ತು ಅನೆಗಳನ್ನು ಅಣಿಗೊಳಿಸಲಾಗಿತ್ತು. ಕಾರ್ಯಾಚರಣೆಯ ಅವಧಿಯಲ್ಲಿ ನಿರ್ಧರಿಸಿದ ಸ್ಥಳಗಳಲ್ಲಿ ರೈತರು ಮತ್ತು ಜನರು ಸಹಕಾರ ನೀಡಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿತ್ತು.

ಒಂಟಿ ಸಲಗದ ಉಪಟಳ; ಹಾಸನ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಕಾಡಾನೆಗಳು ನಾಡಿಗೆ ಬಂದು ಜನರಿಗೆ ತೊಂದರೆ ಮಾಡುವುದು, ಬೆಳೆಗಳನ್ನು ನಾಶಗೊಳಿಸಿ ರೈತರಿಗೆ ತೊಂದರೆ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು.

ಕೆಲವು ಪುಂಡಾನೆಗಳನ್ನು ಆಯ್ಕೆ ಮಾಡಿ ಅವುಗಳ ಚಲನ-ವಲನಗಳನ್ನು ಕಂಡುಹಿಡಿದು ಹಾನಿ ಮಾಡುವುದನ್ನು ತಡೆಗಟ್ಟಲು ಅನುಕೂಲವಾಗುವಂತೆ ಅವುಗಳನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ.

Recommended Video

Bangalore: ಜನರೇ Alert..Alert-ಬೇಗೂರಿನಲ್ಲಿ ಮತ್ತೊಂದು ಚಿರತೆ ಪತ್ತೆ..? | Oneindia Kannada

ಈ ಹಿಂದೆ ರೇಡಿಯೋ ಕಾಲರ್ ಅಳವಡಿಸಿದ್ದ ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್‌ಗಳನ್ನು ಮರು ಅಳವಡಿಸಿ ನಂತರ ಸೆರೆಹಿಡಿದ ಸ್ಥಳದಲ್ಲಿಯೇ ಬಿಡಲು ಕಾರ್ಯಚರಣೆ ಕೈಗೊಳ್ಳಲಾಗಿದೆ.

English summary
Forest department team has successfully radio-collared a male tusker in Sakaleshpura taluk of Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X