ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈನಕಾಶಿಯಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕದ ಸಂಭ್ರಮ

|
Google Oneindia Kannada News

Recommended Video

ಮಹಾಮಸ್ತಕಾಭಿಷೇಕ 2018 : ಜೈನಕಾಶಿಯಲ್ಲಿ ಬಾಹುಬಲಿ ಸಂಭ್ರಾಮ ಇಂದಿನಿಂದ | Oneindia Kannada

ಶ್ರವಣಬೆಳಗೊಳ, ಫೆಬ್ರವರಿ 17: ಈ ಶತಮಾನದ ಎರಡನೇ ಮಹಾಮಸ್ತಕಾಭಿಷೇಕ ಇಂದು(ಫೆ.17) ಮಧ್ಯಾಹ್ನ 2 ಗಂಟೆಯಿಂದ ಅಧಿಕೃತವಾಗಿ ಆರಂಭವಾಗಿದ್ದು, ವಿವಿಧ ಬಣ್ಣಗಳಲ್ಲಿ ವಿರಾಗಿ ಬಾಹುಬಲಿ ಕಂಗೊಳಿಸಲಿದ್ದಾನೆ.

ಹಾಸನದ ಶ್ರವಣಬೆಳಗೊಳದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ಸಾಂಸ್ಕೃತಿಕ ಕಾರ್ಯಕ್ರಗಳು ಫೆ.7 ರಿಂದಲೇ ಆರಂಭವಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ ನೀಡಿದ್ದರು. ಇದೀಗ ಮಹಾಮಸ್ತಕಾಭಿಷೇಕದ ಸಂಭ್ರಮ ಇಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. 88ನೇ ಮಹಾಮಸ್ತಕಾಭಿಷೇಕ ಫೆ.26 ರವರೆಗೆ ನಡೆಯಲಿದೆ.

In Pics: ಮುಗಿಲೆತ್ತರಕ್ಕೆ ನಿಂತ ವಿರಾಗಿಗೆ ಮಹಾಮಸ್ತಕಾಭಿಷೇಕ

ಬಾಹುಬಲಿ ನೆಲೆಸಿರುವ ವಿಂಧ್ಯಗಿರಿಯಲ್ಲಿ ಈಗಾಗಲೇ ಮೆರವಣಿಗೆ ರಥೋತ್ಸವ ನೆರವೇರಿದೆ. ಇಂದು 108 ಕಲಶಗಳೊಂದಿಗೆ ಮಸ್ತಕಾಭಿಷೇಕ ಆರಂಭವಾಗುತ್ತಿದೆ.

Mahamastakabhisheka 2018 in Shravanabelagola will start today

ಮೊದಲ ದಿನದ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ಎಚ್ ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ನಲ್ಲಿ ಹೊರಟು ಶ್ರವಣಬೆಳಗೊಳ ತಲುಪಲಿದ್ದಾರೆ.

ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ: ಹಿನ್ನಲೆ, ಮಹತ್ವಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ: ಹಿನ್ನಲೆ, ಮಹತ್ವ

ಇಂದಿನ ಕಾರ್ಯಕ್ರಮಗಳು:
ಇಂದು ಬೆಳಿಗ್ಗೆ 5 ಗಂಟೆಯಿಂದ 2 ಗಂಟೆವರೆಗೆ ಧಾರ್ಮಿಕ ವಿಧಿ, ವಿಧಾನ ನಡೆದಿದೆ.
ಮಧ್ಯಾಹ್ನ 2 ರಿಂದ 3.30 ರವರೆಗೆ ಜಲಾಭಿಷೇಕ
ಮಧ್ಯಾಹ್ನ 3.30 ರಿಂದ 5.30 ರವರೆಗೆ ಪಂಚಾಮೃತಾಭಿಷೇಕ
ಸಂಜೆ 6 ರವರೆಗೆ ಅಷ್ಟದ್ರವ್ಯ ಪೂಜೆ
ಸಂಜೆ 6 ರಿಂದ 9ರವರೆಗೆ ಸಾರ್ವಜನಿಕ ಪ್ರವೇಶಾವಕಾಶ

English summary
Historical Mahamstakabhisheka in Shravanabelagola in Hassan district will be taking place today(Feb 17th) at 2 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X