ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ದೇವೇಗೌಡರ ಕುಟುಂಬಕ್ಕೆ ಎದುರಾಗಿ ಸ್ಪೀಡ್ ಬ್ರೇಕರ್ ಮಂಜು

By ಅನಿಲ್ ಆಚಾರ್
|
Google Oneindia Kannada News

Recommended Video

ದೇವೇಗೌಡರನ್ನೇ ಬಿಡದ ಮಂಜು ಪ್ರಜ್ವಲ್ ರನ್ನು ಅಷ್ಟು ಸುಲಭಕ್ಕೆ ಬಿಟ್ಟುಬಿಡ್ತಾರಾ..?

ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರು ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗುವುದು ಬಹುತೇಕ ಖಾತ್ರಿ ಆಗಿದೆ. ಅಂದ ಹಾಗೆ ಈ ಕ್ಷೇತ್ರವನ್ನು ದೇವೇಗೌಡರು ಪ್ರತಿನಿಧಿಸುತ್ತಿದ್ದರು. ಈಗ ಸಮಸ್ಯೆ ಆಗಿರುವುದೇನೆಂದರೆ, ದೇವೇಗೌಡರು ಸ್ಪರ್ಧೆ ಮಾಡುವುದಾದರೆ ನಮ್ಮ ಬೆಂಬಲ ಕೊಡ್ತೀವಿ. ಆದರೆ ಪ್ರಜ್ವಲ್ ರೇವಣ್ಣ ನಿಂತರೆ ನಮ್ಮ ಬೆಂಬಲ ನೀಡಲ್ಲ ಅನ್ನುತ್ತಿದ್ದಾರೆ ಕಾಂಗ್ರೆಸ್ಸಿಗರು.

ಹಾಸನ ಜಿಲ್ಲಾ ಕಾಂಗ್ರೆಸ್ ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ ಆಸಮಾಧಾನ. ಬಿಜೆಪಿಯಿಂದ ಬೇರೆ ಅಭ್ಯರ್ಥಿ ಕಣಕ್ಕೆ ಇಳಿದರೆ ಮಾತು ಬೇರೆ ಇತ್ತು. ಆದರೆ ಕಾಂಗ್ರೆಸ್ ತೊರೆದುಬಂದಿರುವ ಎ.ಮಂಜು ಅವರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆ ಅಂತಾದ ಮೇಲೆ ಇಡೀ ಚಿತ್ರಣವೇ ಬದಲಾಗಿದ್ದು, ಪ್ರಜ್ವಲ್ ರೇವಣ್ಣಗೆ ದೊಡ್ಡ ಸವಾಲು ಎದುರಾಗುವುದು ನಿಶ್ಚಿತ ಎನ್ನುತ್ತಾರೆ ಸ್ಥಳೀಯರು.

ಬಿಜೆಪಿ ಪಟ್ಟಿ ಬಿಡುಗಡೆ : ಕರ್ನಾಟಕದ ಅಭ್ಯರ್ಥಿಗಳುಬಿಜೆಪಿ ಪಟ್ಟಿ ಬಿಡುಗಡೆ : ಕರ್ನಾಟಕದ ಅಭ್ಯರ್ಥಿಗಳು

ಸಚಿವರಾದ ರೇವಣ್ಣ ತಮ್ಮ ಮಗ ಪ್ರಜ್ವಲ್ ನ ಗೆಲುವು ಸಲುವಾಗಿ ಹಾಸನದಲ್ಲಿ ತಮ್ಮ ರಾಜಕೀಯ ಕಡು ವಿರೋಧಿಗಳ ಮನೆಗೂ ಹೋಗಿಬರುತ್ತಿದ್ದಾರೆ. ಆದರೆ ಎ.ಮಂಜು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆ ಅಂತಾದ ಮೇಲೆ ಸ್ಪರ್ಧೆ ಜಿದ್ದಾಜಿದ್ದಿನ ಹೋರಾಟ ಕಾಣುವುದು ನಿಶ್ಚಿತ ಎಂದಾಗಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಮಂಜು ಅವರು ದೇವೇಗೌಡರ ವಿರುದ್ಧ ಸೋತಿದ್ದರು.

ಕಾಂಗ್ರೆಸ್ ಸ್ಥಳೀಯ ನಾಯಕರಿಂದ ವಿರೋಧ

ಕಾಂಗ್ರೆಸ್ ಸ್ಥಳೀಯ ನಾಯಕರಿಂದ ವಿರೋಧ

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ, ಹಾಸನ ಭದ್ರಕೋಟೆ ಎಂದು ಕರೆಸಿಕೊಂಡಿದ್ದರೂ ದೇವೇಗೌಡರು ಒಂದು ಲಕ್ಷ ಮತದ ಅಂತರದಿಂದ ಮಾತ್ರ ಗೆದ್ದಿದ್ದು ಅವರ ಇಡೀ ಕುಟುಂಬದ ಅಸಮಾಧಾನಕ್ಕೆ ಕಾರಣವಾಗಿತ್ತು. ಅಂಥದ್ದರಲ್ಲಿ ಈ ಸಲ ಪ್ರಜ್ವಲ್ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್ ನ ಸ್ಥಳೀಯ ನಾಯಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ದೇವೇಗೌಡರು ನನ್ನ ಹಂಗಲ್ಲಿ ಇದ್ದಾರೆಂದ ಸಚಿವ ಎ ಮಂಜು ದೇವೇಗೌಡರು ನನ್ನ ಹಂಗಲ್ಲಿ ಇದ್ದಾರೆಂದ ಸಚಿವ ಎ ಮಂಜು

ಮಂಜು ಸ್ಪರ್ಧಿಸಿದರೆ ಭಾರೀ ಜಿದ್ದಾಜಿದ್ದಿ

ಮಂಜು ಸ್ಪರ್ಧಿಸಿದರೆ ಭಾರೀ ಜಿದ್ದಾಜಿದ್ದಿ

ಸ್ಥಳೀಯರನ್ನು ಮಾತನಾಡಿಸಿದರೆ, ಈ ಬಾರಿ ಮಂಜು ಸ್ಪರ್ಧೆ ಮಾಡುವುದರಿಂದ ಭಾರೀ ಜಿದ್ದಾಜಿದ್ದಿ ಕಾಣಲಿದೆ ಎನ್ನುತ್ತಾರೆ. ಕಡೂರು, ಆಲೂರು, ಸಕಲೇಶಪುರ, ಹಾಸನ ನಗರ, ಅರಸೀಕೆರೆಯಲ್ಲಿ ಜಾತಿ ಲೆಕ್ಕಾಚಾರ, ಮೇಲ್ನೋಟದ ಕೆಲವು ವಿಚಾರಗಳನ್ನು ಗಮನಿಸಿದರೆ ಲಿಂಗಾಯತ ಸಮುದಾಯದ ಮತಗಳು ಬಿಜೆಪಿ ಕೈ ಹಿಡಿಯುವ ಸಾಧ್ಯತೆಗಳಿವೆ ಎನ್ನುತ್ತಾರೆ.

ಕಾಂಗ್ರೆಸ್‌ ಪಾಲಿಗೆ ಎ.ಮಂಜು ಹಳಸಿದ ಅನ್ನ: ಹಾಸನ ಬಿಜೆಪಿಕಾಂಗ್ರೆಸ್‌ ಪಾಲಿಗೆ ಎ.ಮಂಜು ಹಳಸಿದ ಅನ್ನ: ಹಾಸನ ಬಿಜೆಪಿ

ಜೆಡಿಎಸ್ ಪಾಲಿಗೆ ಹಲವು ಸಮಸ್ಯೆಗಳು

ಜೆಡಿಎಸ್ ಪಾಲಿಗೆ ಹಲವು ಸಮಸ್ಯೆಗಳು

ಎ.ಮಂಜು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಿದ್ದಾರೆ. ಬಿಜೆಪಿಯ ವೋಟ್ ಬ್ಯಾಂಕ್ ಕೈ ಹಿಡಿದು, ಜತೆಗೆ ಕಾಂಗ್ರೆಸ್ ನ ಅಸಮಾಧಾನವು ಬುಗಿಲೆದ್ದರೆ ಆಗ ಪ್ರಜ್ವಲ್ ರೇವಣ್ಣಗೆ ಕಷ್ಟವಾಗುವುದಂತೂ ಸತ್ಯ. ಅಂಥ ಸನ್ನಿವೇಶದಲ್ಲಿ ಜೆಡಿಎಸ್ ಪಾಲಿಗೆ ಹಲವು ಸಮಸ್ಯೆಗಳಿವೆ. ಕಾಂಗ್ರೆಸ್ ಮುಖಂಡರು ಪ್ರಜ್ವಲ್ ರೇವಣ್ಣ ಅವರಿಗೆ ಕೈ ಕೊಟ್ಟರೆ ಹಾಸನ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

ಹಾಸನದಲ್ಲಿ ಮಗನ ಗೆಲುವಿಗಾಗಿ ಟೊಂಕಕಟ್ಟಿ ನಿಂತ ರೇವಣ್ಣ..!ಹಾಸನದಲ್ಲಿ ಮಗನ ಗೆಲುವಿಗಾಗಿ ಟೊಂಕಕಟ್ಟಿ ನಿಂತ ರೇವಣ್ಣ..!

ಚುನಾವಣೆ ಪ್ರಚಾರ ಒಟ್ಟಿಗೆ ಶುರು ಮಾಡಿಲ್ಲ

ಚುನಾವಣೆ ಪ್ರಚಾರ ಒಟ್ಟಿಗೆ ಶುರು ಮಾಡಿಲ್ಲ

ಈಗಿನ್ನೂ ಜೆಡಿಎಸ್-ಕಾಂಗ್ರೆಸ್ ಸೇರಿ ಲೋಕಸಭಾ ಚುನಾವಣೆ ಪ್ರಚಾರವನ್ನು ಒಟ್ಟಿಗೆ ಶುರು ಮಾಡಿಲ್ಲ. ಇನ್ನು ರೇವಣ್ಣ ಒಂದು ಕಡೆಯಿಂದ ಹಾಸನದ ಕಾಂಗ್ರೆಸ್ ನ ಪ್ರಮುಖ ನಾಯಕರನ್ನು ಬೆಂಬಲ ಕೋರುತ್ತಾ ಬರುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಅಸಮಾಧಾನ ತಮಣಿಯಾಗಿ, ಪ್ರಜ್ವಲ್ ಬಗ್ಗೆ ಜನರಲ್ಲಿ ಇರುವ ಕೆಲವು ಆಕ್ಷೇಪಗಳಿಗೆ ಸಮಾಧಾನ ಆಗುವಂಥ ಸಮಜಾಯಿಷಿ ಸಿಕ್ಕರೆ ಈಗಿನ ಪರಿಸ್ಥಿತಿ ಬದಲಾಗಬಹುದು.

ವಿಡಿಯೋ: ಗಳಗಳನೇ ಅತ್ತ ದೊಡ್ಡಗೌಡ್ರು, ಜೊತೆಯಾದ ಮೊಮ್ಮಗ!ವಿಡಿಯೋ: ಗಳಗಳನೇ ಅತ್ತ ದೊಡ್ಡಗೌಡ್ರು, ಜೊತೆಯಾದ ಮೊಮ್ಮಗ!

English summary
Lok sabha elections 2019: A Manju become BJP candidate from Hassan constituency. Now it's like speed breaker for HDD family in Hassan. Here is an analysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X