ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಮತದಾನ ಮಾಡಲು ಬರಿಗಾಲಲ್ಲಿ ಬಂದ ರೇವಣ್ಣ!

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಡಿಸೆಂಬರ್ 10; ಅಪಾರ ದೈವ ಭಕ್ತರು, ಜ್ಯೋತಿಷ್ಯವನ್ನು ನಂಬವ ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್.‌ ಡಿ. ರೇವಣ್ಣ ಬರಿಗಾಲಿನಲ್ಲಿ ಬಂದು ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಿದರು. ರೇವಣ್ಣ ಪುತ್ರ ಡಾ. ಸೂರಜ್ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ.

ಶುಕ್ರವಾರ ವಿಧಾನ ಪರಿಷತ್ ಚುನಾವಣೆ ಮತದಾನ ನಡೆಯುತ್ತಿದೆ. ಹಾಸನ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ಎಚ್. ಡಿ. ರೇವಣ್ಣ ಮತದಾನ ಮಾಡಿದರು.

ಮತಕೇಂದ್ರಕ್ಕೆ ಚಪ್ಪಲಿ ಧರಿಸದೇ ಬಂದಿದ್ದ ರೇವಣ್ಣ ಮೊದಲು 5 ಮಹಿಳಾ ಸದಸ್ಯರಿಂದ ಮತದಾನ ಮಾಡಿಸಿದರು. ಬಳಿಕ ತಾವು ಮತದಾನ ಮಾಡಿದರು. ಈ ಲೆಕ್ಕಾಚಾರದ ಹಿಂದೆ ಯಾವ ಜ್ಯೋತಿಷ್ಯ ಅಡಗಿದೆ? ಎಂದು ರೇವಣ್ಣ ಅವರೇ ಹೇಳಬೇಕು.

Legislative Council Election HD Revanna Comes For Voting With Barefoot

ಬಳಿಕ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತದಾನ ಮಾಡಲು ಆಗಮಿಸಿದರು. ಆದರೆ ಅವರು ಸಂಖ್ಯೆ 7 ಆಗಿತ್ತು. ಇನ್ನೂ ಇಬ್ಬರು ಸದಸ್ಯರು ಆಗಮಿಸುವ ತನಕ ಕಾಯುವಂತೆ ಎಚ್. ಡಿ. ರೇವಣ್ಣ ಸೂಚಿಸಿದರು. ಇಬ್ಬರು ಬಂದ ಬಳಿಕ 9ನೇ ಮತದಾರರಾಗಿ ಪ್ರಜ್ವಲ್ ರೇವಣ್ಣ ಮತ ಚಲಾವಣೆ ಮಾಡಿದರು.

ಎಚ್. ಡಿ. ರೇವಣ್ಣ ಹೇಳಿಕೆ; ಮತದಾನ ಮಾಡಿದ ಬಳಿಕ ಮಾತನಾಡಿದ ಎಚ್. ಡಿ. ರೇವಣ್ಣ, "ಹೊಳೆನರಸೀಪುರ ಪುರಸಭೆ ಮತಗಟ್ಟೆಯಲ್ಲಿ ಮತದಾನ ಮಾಡಿದ್ದೇನೆ. ಅತ್ಯಧಿಕ ಮತದಿಂದ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ.

ಒಳ್ಳೆಯ ಕೆಲಸ, ದೈವ ಭಕ್ತಿ, ಜಿಲ್ಲೆಯಲ್ಲಿ ದೇವೇಗೌಡರ ಆಶೀರ್ವಾದ. ಹದಿನಾಲ್ಕು ತಿಂಗಳಲ್ಲಿ ಕುಮಾರಸ್ವಾಮಿ ಮಾಡಿದ ಕೆಲಸದಿಂದಾಗಿ ಗೆಲುವು ಸಾಧಿಸಲಿದ್ದಾರೆ" ಎಂದರು.

"ದೇವೇಗೌಡರು, ಕುಮಾರಸ್ವಾಮಿ ರಾಜ್ಯಕ್ಕೆ, ಜಿಲ್ಲೆಗೆ ಅವರದ್ದೇ ಆದ ಕೊಡುಗೆ ಕೊಟ್ಟಿದ್ದಾರೆ. ಆದ್ದರಿಂದ ಸೂರಜ್ ರೇವಣ್ಣ ಗೆಲ್ಲುತ್ತಾರೆ ಅನ್ನುವ ವಿಶ್ವಾಸವಿದೆ. 7 ವಿಧಾನಸಭಾ ಕ್ಷೇತ್ರದಲ್ಲೂ ಲೀಡ್ ಬರುತ್ತದೆ. ಅತ್ಯಧಿಕ ಮತದಿಂದ ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜ್ವಲ್ ರೇವಣ್ಣ ಮತದಾನದ ಬಗ್ಗೆ ಮಾತನಾಡಿದ ರೇವಣ್ಣ, "ಒಂಭತ್ತು ಲಕ್ಕಿ ನಂಬರ್ ಏನು ಗೊತ್ತಿಲ್ಲ.
ಒಂಭತ್ತನೇ ಮತದಾರನಾಗಿ ಓಟು ಹಾಕುತ್ತೀನಿ ಅಂದರು. ಹಾಕಪ್ಪ‌ ಅಂದೆ" ಎಂದು ಸ್ಪಷ್ಟಪಡಿಸಿದರು.

Recommended Video

ಮೊಸರು ಖರೀದಿಗಾಗಿ ರೈಲನ್ನೇ ನಿಲ್ಲಿಸಿದ ಪಾಕಿಸ್ತಾನದ ರೈಲ್ವೇ ಚಾಲಕ:ನಂತ್ರ ಆಗಿದ್ದೇನು? | Oneindia Kannada

English summary
JD(S) leader and former minister H. D. Revanna come to vote for legislative council election with barefoot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X