ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಜಾಪ್ರಭುತ್ವದ ಪ್ರಸ್ತುತ ಸ್ಥಿತಿ ಬಗ್ಗೆ ಕುಮಾರಸ್ವಾಮಿ ಕಳವಳ

|
Google Oneindia Kannada News

ಹಾಸನ, ಅಕ್ಟೋಬರ್ 22: ದೇಶದ ಪ್ರಜಾಪ್ರಭುತ್ವದ ಸದ್ಯದ ಪರಿಸ್ಥಿತಿ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲೂ ಇಂತಹ ಸ್ಥಿತಿಯನ್ನು ದೇಶ ನೋಡಿರಲಿಲ್ಲ ಎಂದು ಆತಂಕ ಹೊರಹಾಕಿದ್ದಾರೆ.

ಸಿಬಿಐ, ಐಟಿ, ಇಡಿಯಲ್ಲ, ಅವರಪ್ಪನಿಗೂ ಹೆದರುವುದಿಲ್ಲ: ಎಚ್‌ಡಿಕೆಸಿಬಿಐ, ಐಟಿ, ಇಡಿಯಲ್ಲ, ಅವರಪ್ಪನಿಗೂ ಹೆದರುವುದಿಲ್ಲ: ಎಚ್‌ಡಿಕೆ

ಕೆಲವೊಮ್ಮೆ ನಾವು ತೆಗೆದುಕೊಂಡ ನಿರ್ಧಾರಗಳು ತಪ್ಪಾಗಿರಬಹುದು ಆದರೆ ಯಾವುದೇ ಕಾರಣಕ್ಕೂ ದೇಶ ಅಥವಾ ರಾಜ್ಯಕ್ಕೆ ಅಪಾಯವಾಗುವಂತೆ ನಿರ್ಧಾರವನ್ನು ಎಂದೂ ತೆಗದುಕೊಂಡಿಲ್ಲ.

Kumaraswamy Concerns About The Current State Of Democracy

ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸಿದ್ದರೆ ಕರ್ನಾಟಕದ ಪರವಾಗಿ ದೆಹಲಿಯಲ್ಲಿ ಒಂದು ಧ್ವನಿ ಇರುತ್ತಿತ್ತು. ಕಾಶ್ಮೀರದವರಿಗೆ ಸಂಬಂಧಿಸಿದ ಆರ್ಟಿಕಲ್ 370 ಕಟ್ಟಿಕೊಂಡು ನಮ್ಮ ರಾಜ್ಯದ ಜನರಿಗೆ ಏನಾಗಬೇಕಿದೆ ಎಂದರು.

ಅಲ್ಲಿ ಜನರೇ ಅಹಿಂಸಾತ್ಮಕ ಪ್ರತಿಭಟನೆಯಾಗಿದೆ ಎನ್ನುತ್ತಾರೆ. ಚುನಾವಣೆ ಬಂದಾಗಲೆಲ್ಲ ಸರ್ಜಿಕಲ್ ಸ್ಟ್ರೈಕ್ ಗಳಾಗುತ್ತವೆ. ಎಷ್ಟು ದಿನ ಕಾಶ್ಮೀರದಲ್ಲಿ ಸೇನೆ ಇರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಚಿನ್ಮಯಾನಂದ ಸ್ವಾಮಿ ಅವರ ಶಿಕ್ಷಣ ಸಂಸ್ಥೆಗಳಿವೆ. ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆರೋಪಿ ಚಿನ್ಮಯಾನಂದ ಸ್ವಾಮಿ ಎಸಿ ಕೋಣೆಯಲ್ಲಿದ್ದರೆ, ಸಂತ್ರಸ್ತೆಯನ್ನು ಕೂಡ ಜೈಲಿಗಟ್ಟಲಾಗಿದೆ ಎಂತಹ ವಿಪರ್ಯಾಸ ಎಂದಿದ್ದಾರೆ.

English summary
Former Chief Minister HD Kumaraswamy has issued a statement on the current state of democracy in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X