ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಔಟ್‍ರೀಚ್ ಸ್ಪೆಷಾಲಿಟಿ ಕ್ಲಿನಿಕ್ ಆರಂಭಿಸಿದ ಮಂಗಳೂರಿನ ಕೆಎಂಸಿ

|
Google Oneindia Kannada News

ಹಾಸನ, ಆಗಸ್ಟ್ 31: ಹಾಸನ ಹಾಗೂ ಸುತ್ತ ಮುತ್ತಲ ಭಾಗಗಳ ಜನರಿಗೆ ಗುಣಮಟ್ಟದ ಆರೋಗ್ಯ ಕಾಳಜಿ ಸೇವೆಯು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಂಗಳೂರಿನ ಕೆಎಂಸಿ ಹಾಸ್ಪಿಟಲ್ಸ್, ಔಟ್‍ರೀಚ್ ಸ್ಪೆಷಾಲಿಟಿ ಕ್ಲಿನಿಕ್ ಒಂದನ್ನು ಇತ್ತೀಚೆಗಷ್ಟೇ ಆರಂಭಿಸಿದೆ. ಮಲ್ಟಿ-ಡಿಸಿಪ್ಲಿನರಿ (ಬಹು ಶಿಸ್ತಿನ) ಸೇವೆಗಳನ್ನು ಈ ಕ್ಲಿನಿಕ್ ಒದಗಿಸಲಿದ್ದು, ಈ ಕೆಳಗೆ ನೀಡಿರುವ ದಿನ ಹಾಗೂ ಸಮಯದಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರು ಕ್ಲಿನಿಕ್‍ಗೆ ಭೇಟಿ ನೀಡಲಿದ್ದಾರೆ.

ಡಾ. ಹರೂನ್ ಹೆಚ್, ಮಧುಮೇಹ, ಕೊಲೆಸ್ಟ್ರಾಲ್ (ಕೊಬ್ಬು) ಮತ್ತು ಅಧಿಕ ರಕ್ತದೊತ್ತಡ ನಿರ್ವಹಣೆ, ಥೈರಾಯ್ಡ್, ವಯೋ ಸಂಬಂಧಿ ಆರೋಗ್ಯ ಸಮಸ್ಯೆಗಳು; ಡಾ. ಸಮೀನಾ ಹೆಚ್, ಗರ್ಭಧಾರಣೆ, ಬಂಜೆತನ, ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ; ಡಾ. ಸತ್ಯನಾರಾಯಣ, ಪಿತ್ತಕೋಶದ ಕಲ್ಲುಗಳು, ಮೇದೋಜ್ಜೀರಕ ಗ್ರಂಥಿಯ ಕಲ್ಲುಗಳು ಅಥವಾ ಗ್ಯಾಸ್ಟ್ರೋಯೆಂಟರಾಲಾಜಿಕಲ್‍ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಬಂಧಿಸಿದಂತೆ; ಡಾ. ಯೋಗೇಶ್ ಡಿ. ಕಾಮತ್, ಸೊಂಟ (ಚಪ್ಪೆ) ಮತ್ತು ಮಂಡಿ ಹಾಗೂ ಕ್ರೀಡೆ ವೇಳೆ ಉಂಟಾಗುವ ಗಾಯಗಳ ವಿಶೇಷ ತಜ್ಞರು; ಡಾ. ಈಶ್ವರಕೀರ್ತಿ, ಬೆನ್ನುಮೂಳೆ ಶಸ್ತ್ರಚಿಕಿತ್ಸಕರು; ಡಾ. ಸನ್ಮಾನ್ ಗೌಡ ಪ್ರಾಸ್ಟೇಟ್ ಮತ್ತು ಮೂತ್ರಶಾಸ್ತ್ರ ಸಂಬಂಧಿ ಸಮಸ್ಯೆಗಳ ಕುರಿತಂತೆ ರೋಗಗಿಗಳ ಜೊತೆ ಸಮಾಲೋಚನೆ ನಡೆಸಿ ಸಲಹೆಗಳನ್ನು ನೀಡುವರು.

KMC Hospital with Secure Hospital opens Specialty Clinic at Hassan

ವೈದ್ಯರನ್ನು ಭೇಟಿ ಮಾಡಲು ಇಚ್ಛಿಸುವ ಸಾರ್ವಜನಿಕರು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 97410 32526 ಈ ಸಂಖ್ಯೆಗೆ ಕರೆ ಮಾಡಿ, ವೈದ್ಯರನ್ನು ಭೇಟಿಯಾಗುವ ಸಮಯವನ್ನು ಕಾಯ್ದಿರಿಸಬಹುದು.

ಈ ಸಹಭಾಗಿತ್ವದ ಕುರಿತು ಮಾತನಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾಂತೀಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾಗಿರುವ ಡಾ. ಸಘೀರ್ ಸಿದ್ದಿಕಿ ಅವರು, ''ಔಟ್‍ರೀಚ್ ಸ್ಪೆಷಾಲಿಟಿ ಕ್ಲಿನಿಕ್ ಅನ್ನು ಆರಂಭಿಸುವ ನಿಟ್ಟಿನಲ್ಲಿ ಸೆಕ್ಯೂರ್ ಹಾಸ್ಪಿಟಲ್ (ವಾತ್ಸಲ್ಯ ಹಾಸ್ಪಿಟಲ್‍ನ ಒಂದು ಘಟಕ) ಜೊತೆ ಸಹಭಾಗಿತ್ವ ಸಾಧಿಸಿರುವುದು ನಮಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಇಂದಿನ ಅನಿಶ್ಚಿತ ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿ ಗುಣಮಟ್ಟದ ಆರೋಗ್ಯ ಕಾಳಜಿ ಸೇವೆಯನ್ನು ಪಡೆಯುವುದು ಬಹುಮುಖ್ಯ ಅಗತ್ಯವಾಗಿದ್ದು, ಈ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ಈ ನೂತನ ಔಟ್‍ರೀಚ್ ಸ್ಪೆಷಾಲಿಟಿ ಕ್ಲಿನಿಕ್ ಬಹುಮುಖ್ಯ ಪಾತ್ರವನ್ನು ನಿರ್ವಹಿಸಲಿದೆ. ಈ ಮೂಲಕ ಹಾಸನ ಭಾಗದ ಜನತೆ ಗುಣಮಟ್ಟದ ಚಿಕಿತ್ಸೆಗಾಗಿ ರಾಜ್ಯದ ಇತರೆ ನಗರಗಳು ಅಥವಾ ಬೇರೆ ರಾಜ್ಯಗಳಿಗೆ ಪ್ರಯಾಣಿಸುವ ಅನಿವಾರ್ಯತೆ ತಪ್ಪಲಿದ್ದು, ಹಾಸನ ನಗರದಲ್ಲಿಯೇ ಮಲ್ಟಿ ಡಿಸಿಪ್ಲಿನರಿ ಆರೋಗ್ಯ ಸೇವೆಗಳು ಲಭ್ಯವಾಗಲಿವೆ,'' ಎಂದು ಹೇಳಿದರು.

ಮಣಿಪಾಲ್ ಆಸ್ಪತ್ರೆ: 'ಕಸ್ತೂರಬಾ ವೈದ್ಯಕೀಯ ಕಾಲೇಜು, ಮಣಿಪಾಲ(ಕೆಎಂಸಿ-ಮಣಿಪಾಲ) ಇದು 1951ರಲ್ಲಿ ಭಾರತದ ಪ್ರಥಮ ಖಾಸಗಿ ವೈದ್ಯಕೀಯ ಕಾಲೇಜಾಗಿ ಸ್ಥಾಪನೆಯಾಯಿತು. ಮೊದಲಿಗೆ ಇದು ಮಂಗಳೂರು ವಿಶ್ವವಿದ್ಯಾಲಯದ ಆಧೀನದಲ್ಲಿದ್ದರೂ 1993ರಿಂದ ವಿಶ್ವವಿದ್ಯಾಲಯವೆಂದು ಪರಿಗಣಿಸಲ್ಪಟ್ಟ ಮಣಿಪಾಲ ವಿಶ್ವವಿದ್ಯಾಲಯದ ಆಧೀನದಲ್ಲಿದೆ.

ಆರೋಗ್ಯ ಕಾಳಜಿ ಕ್ಷೇತ್ರದಲ್ಲಿ ಮುಂಚುಣಿಯಲ್ಲಿರುವ ಮಣಿಪಾಲ್ ಹಾಸ್ಪಿಟಲ್ಸ್, ವಾರ್ಷಿಕ ಸುಮಾರು 3 ಮಿಲಿಯನ್ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುವ ಮುಲಕ ಭಾರತದ ಅಗ್ರ ಕ್ರಮಾಂಕದ 5 ಆರೋಗ್ಯ ಕಾಳಜಿ ಪ್ರದಾಯಕರಲ್ಲಿ ಒಂದೆನಿಸಿಕೊಂಡಿದೆ. ತನ್ನ ಮಲ್ಟಿಸ್ಪೆಷಾಲಿಟಿ ಹಾಗೂ ತೃತೀಯ ಆರೈಕೆ ವಿತರಣಾ ಜಾಲದ ಮೂಲಕ ಅತ್ಯುನ್ನತ ಗುಣಮಟ್ಟದ ಆರೋಗ್ಯ ಕಾಳಜಿ ಒದಗಿಸುವುದು ಹಾಗೂ ಆಸ್ಪತ್ರೆ ಕಾಳಜಿಯಿಂದ ಆಚೆಗೆ ತನ್ನ ಸೇವೆಗಳನ್ನು ವಿಸ್ತರಿಸುವ ಗುರಿಯನ್ನು ಮಣಿಪಾಲ್ ಹಾಸ್ಪಿಟಲ್ಸ್ ಹೊಂದಿದೆ.

ಭಾರತ ಮತ್ತು ವಿದೇಶಗಳಲ್ಲಿ ಒಟ್ಟು 11 ತೃತೀಯ\ಕ್ವಾರ್ಟೆನೆರಿ ಕಾಳಜಿ ಸೌಲಭ್ಯಗಳು ಮತ್ತು 4 ಪೂರಕ ಕಾಳಜಿ (ಸೆಕೆಂಡರಿ ಕೇರ್) ಆಸ್ಪತ್ರೆಗಳನ್ನು ಹೊಂದಿರುವ ಮಣಿಪಾಲ್ ಹಾಸ್ಪಿಟಲ್ಸ್, ಇಂದು 15 ಆಸ್ಪತ್ರೆಗಳಾದ್ಯಂತ 6,000 ಹಾಸಿಗೆಗಳನ್ನು ನಿರ್ವಹಿಸುತ್ತಿದೆ.

Recommended Video

Team India ಬಗ್ಗೆ ಎಚ್ಚರಿಕೆ ಕೊಟ್ಟ England ಆಟಗಾರ | Oneindia Kannada

ಜಗತ್ತಿನಾದ್ಯಂತ ಇರುವ ವಿವಿಧ ರೀತಿಯ ರೋಗಿಗಳಿಗೆ ಸಮಗ್ರ ರೋಗ ನಿವಾರಕ ಮತ್ತು ರೋಗ ತಡೆಗಟ್ಟುವ ಸೇವೆಗಳನ್ನು ಮಣಿಪಾಲ್ ಹಾಸ್ಪಿಟಲ್ಸ್ ಒದಗಿಸುತ್ತಿದೆ. ಮಣಿಪಾಲ್ ಹಾಸ್ಪಿಟಲ್ಸ್ ಎನ್‍ಎಬಿಹೆಚ್, ಎಎಹೆಚ್‍ಆರ್‍ಪಿಪಿ ಮಾನ್ಯತೆ ಪಡೆದಿದೆ ಮತ್ತು ಇದರ ವ್ಯಾಪ್ತಿಯಲ್ಲಿರುವ ಬಹುತೇಕ ಆಸ್ಪತ್ರೆಗಳು ಎನ್‍ಎಬಿಎಲ್, ಇಆರ್, ರಕ್ತ ನಇಧಿ ಮಾನ್ಯತೆ ಪಡೆದಿವೆಯಲ್ಲದೆ, ಶ್ರೇಷ್ಠ ಮಟ್ಟದ ಶುಶ್ರೂಷಣೆಯಿಂದಾಗಿ ಜಗತ್ತಿನಾದ್ಯಂತ ಗುರುತಿಸಲ್ಪಡುತ್ತವೆ. ಇದರೊಂದಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆ ಎಂದೆನಿಸಿರುವ ಮಣಿಪಾಲ್ ಹಾಸ್ಪಿಟಲ್ಸ್, ರೋಗಿಗಳು ಇತರರಿಗೆ ಹೆಚ್ಚಾಗಿ ಶಿಫಾರಸು ಮಾಡುವ ಆಸ್ಪತ್ರೆಯಾಗಿದೆ ಎಂಬುದನ್ನು ವಿವಿಧ ಸಮೀಕ್ಷೆಗಳು ದೃಢಪಡಿಸಿವೆ.

English summary
KMC Hospital, Mangalore in association with Secure Hospital(A unit of Vaatsalya Hospital) has opened outreach Specialty Clinic at Hassan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X