ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಲೂರು, ಹಳೆಬೀಡಿನ ದೇಗುಲಗಳ ಸೌಂದರ್ಯ ಕಣ್ತುಂಬಿಗೊಂಡ ಗೆಹ್ಲೋಟ್

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜೂನ್ 17: ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ದೇಗುಲ ಹಾಗೂ ಹಳೇಬೀಡು ಹೊಯ್ಸಳೇಶ್ವರ ದೇವಾಲಯಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಶುಕ್ರವಾರ ಭೇಟಿ ನೀಡಿದರು. ಹೊಯ್ಸಳರ ಕಾಲದ ಶಿಲ್ಪಕಲಾ ಸೌಂದರ್ಯವನ್ನು ವೀಕ್ಷಿಸಿ ಕಣ್ತುಂಬಿಕೊಂಡದರು.

ರಾಜ್ಯಪಾಲರ ಆಗಮನದ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ದೇವಾಲಯದ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸಸ್ವಾಮಿ ಭಟ್ಟರ್ ಮತ್ತು ಅರ್ಚಕರು ರಾಜಗೋಪುರದಿಂದ ರಾಜ್ಯಪಾಲರಿಗೆ ಸಂಪ್ರದಾಯದಂತೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.

ಶಾಮನೂರು ಮೊಮ್ಮಗಳ ಮದುವೆ: ಸಿಎಂ ಬೊಮ್ಮಾಯಿ ಭಾಗಿ ಶಾಮನೂರು ಮೊಮ್ಮಗಳ ಮದುವೆ: ಸಿಎಂ ಬೊಮ್ಮಾಯಿ ಭಾಗಿ

ನಂತರ ಚನ್ನಕೇಶವಸ್ವಾಮಿ ದೇಗುಲದ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಮತ್ತು ಮಂಗಳಾರತಿ ನೆರವೇರಿಸಿ ದೇಗುಲದ ಶಲ್ಯ ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಗಿರೀಶ್ ಮತ್ತು ತಹಸೀಲ್ದಾರ್ ಮೋಹನಕುಮಾರ್ ರಾಜ್ಯಪಾಲರಿಗೆ ಕಂಚಿನ ಪ್ರತಿಮೆ ನೀಡಿದರು. ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಹಾಗೂ ಸದಸ್ಯರು ಪುರಸಭೆ ವತಿಯಿಂದ ರಾಜ್ಯಪಾಲರನ್ನು ಸನ್ಮಾನಿಸಿದರು.

Karnataka Governor Thawar Chand Gehlot Visits Belur-Halebidu

ದೇಗುಲ ವೀಕ್ಷಿಸಿ ಹೊರಡುವ ಸಂದರ್ಭದಲ್ಲಿ ಮಾರ್ಗದರ್ಶಿಗಳು ದೇಗುಲದ ಮುಂಭಾಗದ ವಿಜಯ ದೀಪ ಸ್ತಂಭದ ಬಗ್ಗೆ ಮಾಹಿತಿ ನೀಡಿದರು. ರಾಜ್ಯಪಾಲರು ಕುತೂಹಲದಿಂದ ಆಲಿಸಿದರು. ದೀಪ ಸ್ತಂಭದ ಬಳಿ ಮಾರ್ಗದರ್ಶಿ ತಮ್ಮ ಕರ ವಸ್ತ್ರವನ್ನು ದೀಪ ಸ್ತಂಭದ ಕೆಳ ಭಾಗಕ್ಕೆ ಹಾಸಿ ಗುರುತ್ವಾಕರ್ಷಣೆ ಮೇಲೆ ನಿಂತಿರುವ ಬಗ್ಗೆ ಪ್ರಾತ್ಯಕ್ಷತೆ ತೋರಿಸಿದಾಗ ಅಚ್ಚರಿಗೊಳಗಾದ ರಾಜ್ಯಪಾಲರು, ಎಲ್ಲಾ ದೇವರ ಲೀಲೆ ಎಂದು ಕೈಮುಗಿದು ತೆರಳಿದರು.

ಗಲಭೆ, ಹಿಂಸಾಚಾರ ನಡೆದರೆ ಕೇಂದ್ರ ಸರ್ಕಾರವೇ ಹೊಣೆ: ಹೆಚ್.‌ಬಿ. ಮಂಜಪ್ಪ ಎಚ್ಚರಿಕೆ ಗಲಭೆ, ಹಿಂಸಾಚಾರ ನಡೆದರೆ ಕೇಂದ್ರ ಸರ್ಕಾರವೇ ಹೊಣೆ: ಹೆಚ್.‌ಬಿ. ಮಂಜಪ್ಪ ಎಚ್ಚರಿಕೆ

ಹೊಯ್ಸಳ ಕಾಲದ ವಾಸ್ತು ಶಿಲ್ಪ ಶೈಲಿ ಕಂಡು ರಾಜ್ಯಪಾಲರು ವಿಸ್ಮಿತರಾದರು. ಗೈಡ್ ಅಸ್ಲಾಮ್ ಷರೀಫ್ ಅವರು ಬೇಲೂರು-ಹಳೇಬೀಡು ಶಿಲ್ಪ ಶೈಲಿ ಕುರಿತು ರಾಜ್ಯಪಾಲರಿಗೆ ವಿವರಿಸಿದರು. ನಂತರ ಚೆನ್ನಕೇಶವ ಹಾಗೂ ಹೊಯ್ಸಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಾಪಸ್ ತೆರಳಿದರು.

ವಿದ್ಯಾರ್ಥಿಗಳ ಪರದಾಟ
ರಾಜ್ಯಪಾಲರು ಬೇಲೂರು ದೇಗುಲಕ್ಕೆ ಅಧಿಕೃತ ಭೇಟಿ ಹಿನ್ನೆಲೆ ಪೊಲೀಸರು ರಸ್ತೆಗಳಲ್ಲಿ ಜೀರೋ ಟ್ರಾಫಿಕ್ ಮಾಡಿದ್ದರು. ಇದರಿಂದ ಶಾಲಾ ವಿದ್ಯಾರ್ಥಿಗಳು ಪರದಾಡಿದರು. ನೆಹರು ನಗರದಿಂದ ಪಟ್ಟಣಕ್ಕೆ, ಮೂಡಿಗೆರೆ ರಸ್ತೆಯಲ್ಲಿರುವ ಪೂರ್ಣಪ್ರಜ್ಞ ಶಾಲೆ, ನಿಡುಗೋಡು ಯುನೈಟೆಡ್ ಅಕಾಡೆಮಿ ಶಾಲೆಗಳಿಗೆ ತೆರಳಲು ಶಾಲಾವಾಹನ ಮತ್ತು ಬೈಕ್‌ಗಳನ್ನು ಬಿಡದ ಕಾರಣ ವಿದ್ಯಾರ್ಥಿಗಳು ಕಾಲುನಡಿಗೆಯಲ್ಲೇ ತೆರಳಬೇಕಾಯಿತು. ಇಂದು ಸಿಇಟಿ ಹಾಗೂ ಇತರೆ ಪರೀಕ್ಷೆ ಎದುರಿಸುತ್ತಿದ್ದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದರು. ಇದೇ ವೇಳೆ ಚನ್ನಕೇಶವಸ್ವಾಮಿ ದೇಗುಲದ ಒಳಗೆ ವ್ಯವಸ್ಥಾಪನಾ ಸಮಿತಿಯ ಕೆಲ ಸದಸ್ಯರಿಗೆ ಮಾತ್ರ ಅವಕಾಶ ನೀಡಿ, ಉಳಿದವರಿಗೆ ಪ್ರವೇಶ ನೀಡಿಲ್ಲ ಎಂದು ಸಮಿತಿ ಸದಸ್ಯರಾದ ಪ್ರಮೋದ್, ಶ್ರೀನಿವಾಸ ಅಸಮಾಧಾನ ವ್ಯಕ್ತಪಡಿಸಿದರು.

English summary
Karnataka Governor Thawar Chand Gehlot on friday visits Belur Chennakeshava Temple and Hoysaleshwar Temle in Halebidu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X