• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಡಿಯೂರಪ್ಪ ಏನು ಶಾಶ್ವತವಾಗಿ ಇರ್ತಾನಾ: ಏಕವಚನದಲ್ಲಿ ವಾಗ್ದಾಳಿ

|

ಹಾಸನ, ಜೂನ್ 13: ಹಾಸನಕ್ಕೆ ನಿಗದಿಯಾಗಿದ್ದ ತೋಟಗಾರಿಕಾ ಕಾಲೇಜ್ ಅನ್ನು ಸರಕಾರ ರದ್ದು ಪಡಿಸಿರುವುದಕ್ಕೆ ಶಾಸಕ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ, ಸಿಎಂ ಯಡಿಯೂರಪ್ಪನವರ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

   Haveri people neglect all the rules and participate in Bandi Run | Haveri | Oneindia Kannada

   "ಯಡಿಯೂರಪ್ಪ ರದ್ದು ಮಾಡಿದರೆ ಏನಾಯಿತು, ನನಗೆ ಹೇಗೆ ಕೆಲಸ ಮಾಡಬೇಕು ಗೊತ್ತು ಕಣಯ್ಯಾ, ನಾನೇನು ಸುಮ್ಮನೆ ಕೂತಿಲ್ಲ. ಯಡಿಯೂರಪ್ಪ ಏನು ಶಾಶ್ವತವಾಗಿ ಇರ್ತಾನಾ"ಎಂದು ರೇವಣ್ಣ ಕಿಡಿಕಾರಿದ್ದಾರೆ.

   ಬಿಜೆಪಿ ಯುವ ಮೋರ್ಚಾದಿಂದ ರೇವಣ್ಣಗೆ ಕ್ಯಾಂಡಲ್ ಸ್ಪೀಡ್ ಪೋಸ್ಟ್

   "ನಾನು ಬದುಕಿದ್ದಾಗಲೇ ಹಾಸನಕ್ಕೆ ಕಾಲೇಜು ತಂದೇ ತರುತ್ತೇನೆ. ಈ ದೇವೇಗೌಡರ ಕುಟುಂಬದ ಬಗ್ಗೆ ಗೊತ್ತಿಲ್ಲವೇ" ಎಂದು ಪ್ರಶ್ನಿಸಿರುವ ರೇವಣ್ಣ, "ಕಾಲೇಜು ರದ್ದು ಮಾಡಿದರೆ, ನಾನೇನು ಹೆದರಿಕೊಂಡು ಓಡಿ ಹೋಗುತ್ತೀನಾ"ಎಂದು ರೇವಣ್ಣ ಸವಾಲು ಎಸೆದಿದ್ದಾರೆ.

   "ಹಾಸನ ಬಜೆಟ್, ಮಂಡ್ಯ ಬಜೆಟ್ ಎಂದು ವ್ಯಂಗ್ಯವಾಡುತ್ತಿದ್ದವರು ಈಗ ಎಲ್ಲಿದ್ದಾರೆ. ಇದು ಯಡಿಯೂರಪ್ಪನವರಿಗೆ ಒಳ್ಳೆಯದಲ್ಲ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ, ಈಗ ಮಾಡುತ್ತಿರುವುದೇನು"ಎಂದು ರೇವಣ್ಣ ಗರಂ ಆಗಿದ್ದಾರೆ.

   "ನಾನು ಹೆದರಿಕೊಂಡು ಸುಮ್ಮನೆ ಕೂತಿದ್ದೀನಿ ಎಂದು ಅವನು ಅಂದುಕೊಂಡಿರಬಹುದು. ಆದರೆ, ನನಗೆ ಇದನ್ನೆಲ್ಲಾ ಎದುರಿಸುವ ಶಕ್ತಿ ಭಗವಂತ ಕೊಟ್ಟಿದ್ದಾನೆ"ಎಂದು ರೇವಣ್ಣ, ಸಿಎಂ ಬಿಎಸ್ವೈ ವಿರುದ್ದ ಏಕವಚನದಲ್ಲಿ ಹರಿಹಾಯ್ದಿದಿದ್ದಾರೆ.

   "ಯಡಿಯೂರಪ್ಪನವರಿಗೆ ವಯಸ್ಸಾಗಿರುವ ಈ ಕಾಲದಲ್ಲಿ ಯಾಕೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಪಂಚಾಯತಿಗೆ 23 ಕೋಟಿ ಅನುದಾನ ಬಂದು, ಆಮೇಲೆ ಸ್ಟಾಪ್ ಆಯಿತು. ಈ ದ್ವೇಷ ಹಾಸನ ಜಿಲ್ಲೆಯ ಮೇಲೆ ಯಾಕೆ"ಎಂದು ರೇವಣ್ಣ, ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.

   English summary
   JDS Leader HD Revanna Angry On CM Yediyurappa For Cancelling Horticulture College Allotted To Hassan,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X