ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎ.ಮಂಜು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ: ಎಂ.ಬಿ.ಪಾಟೀಲ್

|
Google Oneindia Kannada News

Recommended Video

38 ಸ್ಥಾನ ಪಡೆದಿರೋ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿಲ್ವ ನಾವು..!? | Oneindia Kannada

ಹಾಸನ, ಏಪ್ರಿಲ್ 15: ದೊಡ್ಡದ್ದನ್ನು ಪಡೆದುಕೊಳ್ಳಲು ಸಣ್ಣ-ಪುಟ್ಟ ರಾಜಿ ಮಾಡಿಕೊಳ್ಳಬೇಕಾಗುತ್ತದೆ, ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮೈತ್ರಿಯ ಅನಿವಾರ್ಯತೆಯ ಬಗ್ಗೆ ಗೃಹಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದರು.

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಎಂ.ಬಿ.ಪಾಟೀಲ್ ಅವರು 'ಒನ್‌ಇಂಡಿಯಾ ಕನ್ನಡ'ದ ಜೊತೆ ಮೈತ್ರಿ ಅನಿವಾರ್ಯತೆ, ಪ್ರಜ್ವಲ್ ರೇವಣ್ಣ ಅವರ ಅರ್ಹತೆ, ಹಾಸನ ಕ್ಷೇತ್ರದ ಬಗ್ಗೆ ಚುಟುಕಾಗಿ ಮಾತನಾಡಿದರು.

ಬಿಜೆಪಿ ಶಾಸಕ ನಡಹಳ್ಳಿ ಮೇಲೆ ಎಂಬಿ ಪಾಟೀಲ್ ಬೆಂಬಲಿಗರಿಂದ ಹಲ್ಲೆ ಯತ್ನಬಿಜೆಪಿ ಶಾಸಕ ನಡಹಳ್ಳಿ ಮೇಲೆ ಎಂಬಿ ಪಾಟೀಲ್ ಬೆಂಬಲಿಗರಿಂದ ಹಲ್ಲೆ ಯತ್ನ

ಹಾಸನ ಕ್ಷೇತ್ರದ ಮೈತ್ರಿ ಪ್ರಜ್ವಲ್ ರೇವಣ್ಣ ಅವರು ಹಠಾತ್ತನೆ ಚುನಾವಣೆಗೆ ಬಂದವರಲ್ಲ, ಈ ಮುಂಚೆಯೂ ಅವರು ಕ್ಷೇತ್ರದಲ್ಲಿ ಸಾಕಷ್ಟು ಓಡಾಡಿದ್ದಾರೆ, ಇಲ್ಲಿನ ಸಮಸ್ಯೆಗಳನ್ನು ಅರಿತುಕೊಂಡಿದ್ದಾರೆ, ಆ ನಂತರವೇ ಚುನಾವಣೆಗೆ ಬಂದಿದ್ದಾರೆ ಎಂದು ಹೇಳಿದರು.

JDS-Congress made coalition to keep communal party out: MB Patil

ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಮಾತನಾಡಿದ ಪಾಟೀಲರು, ರೇವಣ್ಣ ಅವರು ಹಾಸನಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹಾಸನದ ಬಗ್ಗೆ ಅವರಿಗೆ ವಿಶೇಷ ಮಮತೆ, ಇದೇ ಕಾರಣಕ್ಕೆ ನಾವು ಅವರೊಂದಿಗೆ ಜಗಳ ಸಹ ಆಡಿದ್ದೇವೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಎಂ.ಬಿ.ಪಾಟೀಲ್ ವಾಗ್ದಾಳಿಗೆ ಡಿ.ಕೆ.ಶಿವಕುಮಾರ್ ಸಮಾಧಾನದ ಉತ್ತರಎಂ.ಬಿ.ಪಾಟೀಲ್ ವಾಗ್ದಾಳಿಗೆ ಡಿ.ಕೆ.ಶಿವಕುಮಾರ್ ಸಮಾಧಾನದ ಉತ್ತರ

ಎ.ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಗ್ಗೆ ಮಾತನಾಡಿದ ಎಂ.ಬಿ.ಪಾಟೀಲ್, ಮಂಜು ನಾನು ಸ್ನೇಹಿತರೇ, ಅವರು ಮೈತ್ರಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು, ಕೋಮುವಾದಿ ಶಕ್ತಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ 80 ಸೀಟು ಗೆದ್ದಿದ್ದರು ಸಹ ಸಿಎಂ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ ಎಂದು ಅವರು ಹೇಳಿದರು.

ಲಿಂಗಾಯತ ಧರ್ಮ: ಡಿಕೆಶಿ ವಿರುದ್ಧ ಏಕವಚನದ ವಾಗ್ದಾಳಿ ಮಾಡಿದ MB.ಪಾಟೀಲ್ಲಿಂಗಾಯತ ಧರ್ಮ: ಡಿಕೆಶಿ ವಿರುದ್ಧ ಏಕವಚನದ ವಾಗ್ದಾಳಿ ಮಾಡಿದ MB.ಪಾಟೀಲ್

ಹಾಸನದ ಕ್ಷೇತ್ರದ ಬಗ್ಗೆ ಮಾತನಾಡಿದ ಎಂ.ಬಿ.ಪಾಟೀಲ್, ಹಾಸನ ಕ್ಷೇತ್ರಗಳಲ್ಲಿ ಸಮಸ್ಯೆಗಳ ಬಗ್ಗೆ ಪ್ರಜ್ವಲ್‌ಗೆ ಅರಿವಿದೆ. ನೀರಾವರಿ, ರೈಲ್ವೆ ಯೋಜನೆಗಳು, ಏರೋಡ್ರಂ ನಿರ್ಮಾಣ, ಉದ್ಯೋಗ ಇಂತಹುವೇ ಕೆಲವು ಸಮಸ್ಯೆಗಳು ಕ್ಷೇತ್ರದಲ್ಲಿವೆ ಅದನ್ನು ಪ್ರಜ್ವಲ್ ರೇವಣ್ಣ ಗುರುತಿಸಿದ್ದಾರೆ, ಪ್ರಜ್ವಲ್ ಅವರು ಯುವಕರಾಗಿದ್ದು ಅವರಿಗೆ ಕೆಲಸ ಮಾಡುವ ಹುಮ್ಮಸ್ಸಿದೆ ಮತ್ತು ಅವರು ಕ್ಷೇತ್ರದ ಜನರಿಗೆ ಸುಲಭವಾಗಿ ಕೈಗೆ ಸಿಗುತ್ತಾರೆ ಎಂದು ಹೇಳಿದರು.

English summary
Home minister MB Patil today did campaign in Hassan for candidate Prajwal Revanna. He said Prajwal in young and he will win by minimum 2 lakh votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X