ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆ ಮೇಲೆ ಐಟಿ ದಾಳಿ: ಸಚಿವ ಎಚ್‌ಡಿ ರೇವಣ್ಣ ಹೇಳಿದ್ದೇನು?

|
Google Oneindia Kannada News

ಹಾಸನ, ಮಾರ್ಚ್ 28: ಐಟಿ ದಾಳಿಯಿಂದ ಶಾಕೂ ಆಗಿಲ್ಲ ಏನೂ ಆಗಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಹೇಳಿದರು.

ಗುರುವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ, ಸಚಿವ ಸಿಎಸ್ ಪುಟ್ಟರಾಜು, ಜೆಡಿಎಸ್ ಎಂಎಲ್‌ಸಿ ಬಿಎಂ ಫಾರೂಕ್ ಮತ್ತು ಇತರೆ 10 ಪ್ರಭಾವಿಗಳ ಮನೆ ಮೇಲೆ ದಾಳಿ ನಡೆಸಿದ್ದರು.

It officers are agents of BJP and Narendra modi

ಐಟಿ ದಾಳಿ LIVE: ಶಾಕೂ ಇಲ್ಲ ಏನೂ ಇಲ್ಲ, ಇದಕ್ಕೆಲ್ಲ ನಾವು ಹೆದರುವುದಿಲ್ಲ: ರೇವಣ್ಣಐಟಿ ದಾಳಿ LIVE: ಶಾಕೂ ಇಲ್ಲ ಏನೂ ಇಲ್ಲ, ಇದಕ್ಕೆಲ್ಲ ನಾವು ಹೆದರುವುದಿಲ್ಲ: ರೇವಣ್ಣ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್‌ಡಿ ರೇವಣ್ಣ ಐಟಿ ದಾಳಿಯಿಂದ, ಶಾಕೂ ಆಗಿಲ್ಲ ಏನೂ ಆಗಿಲ್ಲ, ಇದಕ್ಕೆಲ್ಲಾ ನಾವು ಹೆದರುವವರೂ ಅಲ್ಲ, ಐಟಿ ದಾಳಿಯಿಂದ ದೇವೇಗೌಡರನ್ನು ಹೆದರಿಸಬಹುದು ಎಂದು ಅಂದುಕೊಂಡಿದ್ದರೆ ಅದು ಸುಳ್ಳು, ಇದೆಲ್ಲವೂ ಕೇಂದ್ರ ಕುತಂತ್ರ, ಐಟಿ ಅಧಿಕಾರಿಗಳು ಕೇಂದ್ರದ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎಚ್​.ಡಿ. ರೇವಣ್ಣ ಸಚಿವರಾಗಿರುವ ಲೋಕೋಪಯೋಗಿ ಇಲಾಖೆಯ ಹಾಸನ ಕಚೇರಿ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ಹಾಸನದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಅವರ ವಿಚಾರಣೆ ನಡೆಸಲಾಗುತ್ತಿದೆ. ಹಾಗೇ, ಇಲಾಖೆಗೆ ಸಂಬಂಧಿಸಿದ ಪ್ರಮುಖ ಕಡತಗಳ ಪರಿಶೀಲನೆ ಮಾಡಲಾಗುತ್ತಿದೆ.

ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ, ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಮತ್ತು ಅವರ ಸಂಬಂಧಿಕರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

English summary
Minister HD Revanna hit out at Central government that IT officers are acting as agent of Prime minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X