ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ನೋಟಿಸ್; ಅಧಿಕಾರಿಗಳನ್ನು ಕಬ್ಬಿನ ಗದ್ದೆಗೆ ಆಹ್ವಾನಿಸಿದ ಎಚ್.ಡಿ. ರೇವಣ್ಣ

|
Google Oneindia Kannada News

ಹಾಸನ, ಮಾರ್ಚ್ 28: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮರಿಗೆ ಐಟಿಯಿಂದ ನೋಟಿಸ್ ನೀಡಿದ ವಿಚಾರವಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ, ಅದನ್ನು ನೋಡಬೇಕು. ಅದನ್ನು ನೋಡದೆ ನಮ್ಮ ತಾಯಿಗೆ ನೋಟಿಸ್ ಕೊಟ್ಟಿದ್ದಾರೆ. ಆರ್‌ಟಿಓದಲ್ಲಿ ನೂರು ಕೋಟಿ, ಇನ್ನೂರು ಕೋಟಿ ಲೂಟಿ ಹೊಡೆದಿದ್ದಾರೆ. ಅವರಿಗೇಕೆ ನೋಟಿಸ್ ನೀಡಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

IT Notice Issued to Former Prime Minister HD Deve Gowda Wife Chennamma

ಒಂದು ಎಕರೆ ಏನು, ಎಷ್ಟು ಬೆಳೆ ಬೆಳೆಯುತ್ತೇವೆ ಬಂದು ನೋಡಲಿ. ನಾನು ಜಿಲ್ಲಾಧಿಕಾರಿಗೆ ಹೇಳಿದ್ದೇನೆ, ನಾನು ಸರ್ವೆ ಮಾಡಿ‌ ಬಿಲ್ ಕೊಟ್ಟರೆ ಸರಿಯಾಗಲ್ಲ. ಆ್ಯಪ್‌ನಲ್ಲಿ ಸರ್ವೆ ಮಾಡಿಸಿ. ನಮ್ಮ ಅಪ್ಪ, ತಾಯಿ ಏನಾದರೂ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ನೋಟಿಸ್ ಕೊಟ್ಟಿದ್ದಾರೆ ಅದಕ್ಕೆ ನಾವು ಉತ್ತರ ಕೊಡುತ್ತೇವೆ. ನಮಗೂ ಕಾಲ ಬರುತ್ತೆ, ಇದೆನು ಶಾಶ್ವತವಾಗಿ ಇರಲ್ಲ. ಏನಾದರೂ ಕದ್ದು ವ್ಯವಸಾಯ ಮಾಡುತ್ತಿದ್ದೇವಾ? ಡ್ರೋಣ್ ಸರ್ವೆ ಮಾಡಲಿ, ದೊಡ್ಡಪುರ, ಪಡುವಲಹಿಪ್ಪೆ ಹತ್ತಿರ ಇದೆ ಎಂದು ಆಹ್ವಾನಿಸಿದರು.

ನಾನೇನು ಹೊಸದಾಗಿ ಆಸ್ತಿ ಮಾಡಲು ಹೋಗಿದ್ದೀನಾ? ನಾನೇನಾದರೂ ಸೈಟ್ ಬ್ಯುಸಿನೆಸ್ ಮಾಡಲು ಹೋಗಿದ್ದೇನಾ? ಹಾಸನ ನಗರದಲ್ಲಿ ನಗರಸಭೆಯಿಂದ ಸೈಟ್ ಮಾಡಲು ಹೋಗಿದ್ದೇನಾ? ಒಂದು ಪಕ್ಷವನ್ನು ಗುರಿ ಇಟ್ಟುಕೊಂಡು ರಾಜಕೀಯ ಮಾಡಲು ಹೋಗಬೇಡಿ ತಾಕೀತು ಮಾಡಿದರು.

ಕಾನೂನು ರೀತಿ ಏನಿದೆ ನೋಟಿಸ್ ಕೊಡಿ, ನನಗೂ ಕೊಡಿ. ಕೆಲವರು ಆರ್‌ಟಿಓನಲ್ಲಿ ಲೂಟಿ ಮಾಡಿ ಕೆಲಸಕ್ಕೆ ರಾಜೀನಾಮೆ ನೀಡಿ ಬಂದು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಎಲೆಕ್ಷನ್‌ಗೆ ನಿಲ್ಲುತ್ತಿದ್ದಾರೆ. ಅಂತಹವರಿಗೆ ನೋಟಿಸ್ ಏಕೆ ಕೊಡುತ್ತಿಲ್ಲ ಎಂದು ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ವಿಎಚ್‌ಪಿ ಕಾರ್ಯಕರ್ತರ ವಿರುದ್ಧ ರೇವಣ್ಣ ಗರಂ
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಿಂದೂಯೇತರ ದೇವಸ್ಥಾನ ಮತ್ತು ಜಾತ್ರೆಗಳಲ್ಲಿ ಮುಸ್ಲಿಂರಿಗೆ ಯಾವುದೇ ವ್ಯಾಪಾರ, ವಹಿವಾಟು ನಡೆಸದಂತೆ ನಿರ್ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಹಿನ್ನಲೆ ವಿಎಚ್‌ಪಿ ಕಾರ್ಯಕರ್ತರ ವಿರುದ್ಧ ರೇವಣ್ಣ ಗರಂ ಆದರು.

ಮುಸ್ಲಿಂರಿಗೆ ಅಡೆತಡೆ ತಂದರೆ, ಯಾವ ಸಂಘ- ಸಂಸ್ಥೆಗಳಿದ್ದರು, ಯಾವ ಪಾರ್ಟಿಯವರಿದ್ದರೂ ಡಿಸಿ, ಎಸ್ಪಿ ಬಲಿ ಹಾಕಬೇಕು. ಈ ಜಿಲ್ಲೆಯಲ್ಲಿ ಹಿಂದೂಗಳು ಬೇರೆಯಲ್ಲ, ಮುಸ್ಲಿಮರು ಬೇರೆಯಲ್ಲ. ನಾವೆಲ್ಲ ಈ‌ ಜಿಲ್ಲೆಯಲ್ಲಿ ಐಕ್ಯತೆಯಿಂದ ಹೋಗುತ್ತಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.

ಒಂದು ಸಮಾಜವನ್ನು ಗುರಿ ಇಟ್ಟುಕೊಂಡು ಹೋಗುವುದಾದರೆ ನಮ್ಮದು ಖಂಡಿತ ವಿರೋಧವಿದೆ. ಹಿಂದೂಗಳಿರಲಿ, ಮುಸ್ಲಿಂರಿರಲಿ ಹಿಂದಿನಿಂದ ಹೇಗೆ ನಡೆದುಕೊಂಡು ಹೋಗುತ್ತಿತ್ತೋ ಅದಕ್ಕೆ ಅಡ್ಡಿತರಬಾರದು.

ಅಡ್ಡಿ ತಂದರೆ ಅವರ ಮೇಲೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಾವೆಲ್ಲ ಅಣ್ಣ-ತಮ್ಮಂದಿರ ತರ ಹೋಗಬೇಕು. ಪರಿಶಿಷ್ಟ, ಮುಸ್ಲಿಂ, ಕ್ರಿಶ್ಚಿಯನ್ ಸಮಾಜ ಇರಬಹುದು ಅದಕ್ಕೆ ಯಾವುದೇ ತರಹದ ಧಕ್ಕೆ ಬರದಂತೆ ನಡೆದುಕೊಳ್ಳಬೇಕು ಎಂದು ಸೂಚ್ಯವಾಗಿ ತಿಳಿಸಿದರು.

ಕೂಲಿ ಮಾಡಿಕೊಂಡು ಜೀವನ ಮಾಡುವವರಿಗೆ ಅಡೆತಡೆ ತಂದರೆ ಹೇಗೆ? ಯಾರೋ ನಾಲ್ಕು ಜನ ಕೇಸರಿ ಶಾಲು ಹಾಕಿಕೊಂಡು ಬಂದರೆ ಅದಕ್ಕೆ ಕೇರ್ ಮಾಡಲು ಆಗಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೇ ತ್ಯಾಗಕ್ಕೂ ನಾವು ಸಿದ್ಧವಿದ್ದೇವೆ. ಸಮಾಜದಲ್ಲಿ ಕಲ್ಮಶ ವಾತಾವರಣ ತರಬಾರದು ಎಂದರು.

ಸಾಬ್ರಾಗಿ ಹುಟ್ಟಿದರೆ ಅವರಿಗೆ ಜೀವನ ಮಾಡಬೇಡಿ ಅನ್ನಲು ಆಗುತ್ತಾ? ಪರಿಶಿಷ್ಟ ಸಮಾಜದವರು ವ್ಯಾಪಾರ ಮಾಡುತ್ತಾರೆ, ಅವರಿಗೆ ಮಾಡಬೇಡಿ ಅಂಥಾ ಹೇಳಲು ಆಗುತ್ತದಾ? ದೇವಸ್ಥಾನಕ್ಕೆ ಬರಬೇಡಿ ಎಂದು ಹೇಳಲು ಆಗುತ್ತದಾ ಎಂದು ಪ್ರಶ್ನೆಶಿದರು.

ಎಲ್ಲರನ್ನೂ ಐಕ್ಯತೆಯಿಂದ ತೆಗೆದುಕೊಂಡು ಹೋಗಬೇಕು. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಸಮಾಜಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ವ್ಯಾಪಾರಕ್ಕೆ ನಿರ್ಬಂಧ ಮಾಡಬಾರದು. ಬೇಲೂರು ಜಾತ್ರೆಯಲ್ಲಿ ಮುಸ್ಲಿಮರಿಗೆ ನಿರ್ಬಂಧ ಮಾಡಿದರೆ ನಮ್ಮ ಕಾರ್ಯಕರ್ತರಿಗೆ ಹೇಳುತ್ತೇನೆ. ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಕೊಡಬೇಡಿ, ಈ ವಿಚಾರವಾಗಿ ಜಿಲ್ಲಾಧಿಕಾರಿಗಳು, ಎಸ್ಪಿಯವರಲ್ಲಿ ಮನವಿ ಮಾಡುತ್ತೇನೆ ಎಂದು ಎಚ್ಚರಿಸಿದರು.

English summary
Hassan: Former Minister HD Revanna has Reacted to IT Notice Issued to Former Prime Minister HD Deve Gowda's wife Chennamma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X