ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಚೆ ವಿಮಾ ಗ್ರಾಮ ಯೋಜನೆ ಹಳ್ಳಿಗರಿಗೆ ಉಪಯುಕ್ತ : ಡಿಸಿ ರೋಹಿಣಿ

By Mahesh
|
Google Oneindia Kannada News

ಹಾಸನ, ಸೆಪ್ಟೆಂಬರ್ 02: ಭಾರತೀಯ ಅಂಚೆ ಇಲಾಖೆಯು ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಒದಗಿಸುತ್ತ ಬರುತ್ತಿದ್ದು, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬ್ಯಾಂಕಿಂಗ್ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸೆ.1 ರಿಂದ ಆಯ್ದು ಅಂಚೆ ಶಾಖೆಗಳ ಮೂಲಕ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಯನ್ನು ನೀಡುತ್ತಿದೆ ಜನತೆ ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಅಂಚೆ ಇಲಾಖೆಯು ಬ್ಯಾಂಕ್ ಸೇವೆಯನ್ನು ಹಳ್ಳಿಗಳಿಗೂ ವಿಸ್ತರಿಸುವುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಸಹಕಾರಿಯಾಗಲಿದೆ ಎಂದರು.

ಮೋದಿ ಕನಸು ನನಸು, ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಲಭ್ಯಮೋದಿ ಕನಸು ನನಸು, ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಲಭ್ಯ

ಅಂಚೆ ಇಲಾಖೆಯು ನೂತನ ನಿವೃತ್ತ ಯೋಜನೆ, ಸಂಪೂರ್ಣ ವಿಮಾ ಗ್ರಾಮ ಯೋಜನೆಗಳನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ ಇದರಿಂದ ಹಳ್ಳಿಗಳ ಜನರ ಜೀವನ ಮಟ್ಟ ಸುಧಾರಣೆಗೆ ಹಾಗೂ ಉಳಿತಾಯ ಪ್ರೋತ್ಸಾಹಕ್ಕೆ ಸದಾವಕಾಶವಾಗಲಿದೆ ಎಂದರು.

ಇಂಡಿಯಾ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಎಂದರೇನು? ಇದರ ಲಾಭಗಳೇನು?ಇಂಡಿಯಾ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಎಂದರೇನು? ಇದರ ಲಾಭಗಳೇನು?

ಹಿಮ್ಸ್ ನಿರ್ದೇಶಕರಾದ ಡಾ. ಬಿ.ಸಿ ರವಿಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಚ್.ಮಂಜುನಾಥ್, ಸಹಾಯಕ ಅಂಚೆ ಅಧೀಕ್ಷಕರಾದ ರೇಖಾ ಮತ್ತಿತರರು ಉಪಸ್ಥಿತರಿದ್ದರು.

ಕುಟುಂಬದ ಭದ್ರತೆಗೆ ಅನುಕೂಲಕಾರಿಯಾಗಿದೆ

ಕುಟುಂಬದ ಭದ್ರತೆಗೆ ಅನುಕೂಲಕಾರಿಯಾಗಿದೆ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜಗದೀಶ್ ಅವರು ಮಾತನಾಡಿ ಅಂಚೆ ಇಲಾಖೆ ದೇಶಾದ್ಯಂತ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆ ಪ್ರಾರಂಭಿಸಿರುವುದು ಹಳ್ಳಿಗಳ ಆರ್ಥಿಕ ಸಾಮಥ್ರ್ಯವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ದೂರದ ಬ್ಯಾಂಕ್‍ಗೆ ಅಲೆಯುವಿಕೆ ತಪ್ಪಿಸಿ ಗ್ರಾಮದಲ್ಲೇ ಉಳಿತಾಯ ಪ್ರೋತ್ಸಾಹಿಸಲು ಹಾಗೂ ಕುಟುಂಬದ ಭದ್ರತೆಗೆ ಅನುಕೂಲಕಾರಿಯಾಗಿದೆ ಸಾರ್ವಜನಿಕರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ ಅಂಚೆ ವಿಮಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲೆಯ ಎಲ್ಲಾ ಶಾಖೆಗಳಲ್ಲಿ ಈ ಸೇವೆ ದೊರೆಯಲಿದೆ

ಜಿಲ್ಲೆಯ ಎಲ್ಲಾ ಶಾಖೆಗಳಲ್ಲಿ ಈ ಸೇವೆ ದೊರೆಯಲಿದೆ

ಜಿಲ್ಲಾ ಅಂಚೆ ಕಚೇರಿಯ ಅಧೀಕ್ಷಕರಾದ ಬದ್ರಿನಾಥ್ ಅವರು ಮಾತನಾಡಿ ಜಿಲೆಯಲ್ಲಿ ಇದೀಗ ಹಾಸನ ಶಾಖೆ, ಸಂತೆಪೇಟೆ ಉಪ ಅಂಚೆ ಕಚೇರಿ ಹಾಗೂ ಕಂದಲಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆ ಪ್ರಾರಂಭಿಸಲಾಗಿದೆ. ಮುಂದಿನ ಡಿಸೆಂಬರ್ ವೇಳೆಗೆ ಜಿಲ್ಲೆಯ ಎಲ್ಲಾ ಶಾಖೆಗಳಲ್ಲಿ ಈ ಸೇವೆ ದೊರೆಯುವಂತಾಗುತ್ತದೆ ಎಂದರು.

ಬ್ಯಾಂಕ್ ಗಳಲ್ಲಿರುವಂತೆ ಪೇಮೆಂಟ್ ಸೇವೆ

ಬ್ಯಾಂಕ್ ಗಳಲ್ಲಿರುವಂತೆ ಪೇಮೆಂಟ್ ಸೇವೆ

ಬ್ಯಾಂಕ್ ಗಳಲ್ಲಿರುವಂತೆ ಆರ್.ಟಿ.ಜಿ.ಎಸ್., ನೆಫ್ಟ್, ಸೇರಿದಂತೆ ಆನ್ ಲೈನ್ ಪೇಮೆಂಟ್ ಸೇವೆಗಳನ್ನು ಅಂಚೆ ಕಚೇರಿಯಲ್ಲಿಯೂ ಲಭ್ಯವಾಗಲಿದೆ. ಸದ್ಯ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದವರು, ಎನ್.ಇ.ಎಫ್.ಟಿ, ಆರ್.ಟಿ.ಜಿ.ಎಸ್, ಐ.ಎಂ.ಪಿ.ಎಸ್. ಹಾಗೂ ಬಿಲ್ ಪಾವತಿಗೆ ಸೇವೆಗಳನ್ನು ಪಡೆಯಬಹುದು.

ಪ್ರಧಾನಿ ಮೋದಿ ಕನಸಿನ ಯೋಜನೆ

ಪ್ರಧಾನಿ ಮೋದಿ ಕನಸಿನ ಯೋಜನೆ

ದೇಶದ 1.55 ಲಕ್ಷ ಅಂಚೆ ಕಚೇರಿಗಳಿಗೆ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಲಿಂಕ್ ಮಾಡಲು ಕೇಂದ್ರ ಹಣಕಾಸು ಸಚಿವಾಲಯ ಸಮ್ಮತಿಸಿದೆ. ಇನ್ನು ಕೆಲ ತಿಂಗಳುಗಳಲ್ಲಿ 3,500ಕ್ಕೂ ಅಧಿಕ ಸಿಬ್ಬಂದಿ ನೇಮಕಾತಿ ನಡೆಸಲಾಗುತ್ತಿದೆ. ದೇಶದ ಪ್ರತಿ ಜಿಲ್ಲೆಗಳಲ್ಲಿ ಒಂದು ಪೇಮೆಂಟ್ ಬ್ಯಾಂಕ್ ಶಾಖೆ ಅಥವಾ ಎಟಿಎಂ ಮಾದರಿ ಆಕ್ಸೆಸ್ ಪಾಯಿಂಟ್ ಸ್ಥಾಪಿಸುವುದು ಮೋದಿ ಅವರ ಕನಸಾಗಿತ್ತು. ಕಳೆದ ಎರಡು ವರ್ಷಗಳಿಂದ ಈ ಯೋಜನೆ ಪ್ರಾಯೋಗಿಕ ಹಂತದಲ್ಲಿ ಜಾರಿಯಲ್ಲಿತ್ತು.

English summary
Hassan DC Rohini Sindhuri launched India Post Payments Bank at a function held at Dr. Ambedkar Bhavan in Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X