ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ; ಕಾಳಿ ವಿಗ್ರಹಕ್ಕೆ ಹಾನಿ, ವರದಿ ಕೇಳಿದ ಪ್ರಧಾನಿ ಕಚೇರಿ

|
Google Oneindia Kannada News

ಹಾಸನ, ನವೆಂಬರ್ 22 : ಇತಿಹಾಸ ಪ್ರಸಿದ್ಧ ದೊಡ್ಡಗದ್ದವಳ್ಳಿ ಗ್ರಾಮದ ಲಕ್ಷ್ಮೀ ದೇವಿ ದೇವಾಲಯದ ಕಾಳಿ ವಿಗ್ರಹಕ್ಕೆ ಹಾನಿ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಪ್ರಧಾನಮಂತ್ರಿಗಳ ಕಾರ್ಯಾಲಯ ಸೂಚನೆ ನೀಡಿದೆ.

ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿ ಗ್ರಾಮದಲ್ಲಿರುವ ಲಕ್ಷ್ಮೀ ದೇವಿ ದೇವಾಲಯದಲ್ಲಿನ ಕಾಳಿ ವಿಗ್ರಹಕ್ಕೆ ಗುರುವಾರ ದುಷ್ಕರ್ಮಿಗಳು ಹಾನಿ ಮಾಡಿದ್ದರು. ಪ್ರಧಾನಿ ಕಚೇರಿ ಪುರಾತತ್ವ ಇಲಾಖೆಯಿಂದ ಈ ಬಗ್ಗೆ ವರದಿ ಕೇಳಿದೆ.

ಹಾಸನ: 906 ವರ್ಷಗಳ ಐತಿಹ್ಯದ ದೇವಿ ವಿಗ್ರಹ ಕೆಡವಿದ ದುಷ್ಕರ್ಮಿಗಳುಹಾಸನ: 906 ವರ್ಷಗಳ ಐತಿಹ್ಯದ ದೇವಿ ವಿಗ್ರಹ ಕೆಡವಿದ ದುಷ್ಕರ್ಮಿಗಳು

ಭಾರತ ಪುನರುತ್ಥಾನ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳ ಕಚೇರಿಗೆ ದೂರು ನೀಡಿತ್ತು. ಹೀಗಾಗಿ ಕಚೇರಿಯಿಂದ ಈ ಬಗ್ಗೆ ವರದಿ ನೀಡುವಂತೆ ಸೂಚನೆ ಕೊಡಲಾಗಿದೆ.

ದೇವಾಲಯ ಓಪನ್: ಶಬರಿಮಲೆ ಯಾತ್ರೆಗೆ ಹೋಗುವವರಿಗೆ ಈ ಮಾಹಿತಿ ತಿಳಿದಿರಲಿದೇವಾಲಯ ಓಪನ್: ಶಬರಿಮಲೆ ಯಾತ್ರೆಗೆ ಹೋಗುವವರಿಗೆ ಈ ಮಾಹಿತಿ ತಿಳಿದಿರಲಿ

Idol Of Goddess Kali Found Broken PM Office Seeks Report

ಸುಮಾರು 906 ವರ್ಷಗಳ ಇತಿಹಾಸ ಇರುವ ಪುರಾತನ ದೇವಾಲಯ ಇದಾಗಿತ್ತು. ಚಥುಷ್ಕೂಟ ಶೈಲಿಯಲ್ಲಿ ನಿರ್ಮಾಣಗೊಂಡ ದಕ್ಷಿಣ ಭಾರತದ ಮೊದಲ ದೇವಾಲಯ ಎಂಬ ಹೆಗ್ಗಳಿಕೆ ಲಕ್ಷ್ಮೀ ದೇವಿ ದೇವಾಲಯದ್ದಾಗಿದೆ.

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ: ಓರ್ವ ಬಂಧನ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ: ಓರ್ವ ಬಂಧನ

ಶುಕ್ರವಾರ ಅರ್ಚಕರು ಪೂಜೆಗಾಗಿ ಆಗಮಿಸಿದಾಗ ಕಾಳಿ ದೇವಿಯ ವಿಗ್ರಹ ನೆಲಕ್ಕೆ ಉರುಳಿತ್ತು. ಮೂರು ಭಾಗವಾಗಿತ್ತು. ನಿಧಿ ಆಸೆಗಾಗಿ ಕಳ್ಳರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸ್ ತನಿಖೆ ಮುಂದುವರೆದಿದೆ.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada

ಈ ದೇವಾಲಯದಲ್ಲಿ ನಾಲ್ಕು ಗರ್ಭಗುಡಿಗಳಿವೆ. ಕಾಳಿ ವಿಗ್ರಹದ ಮುಂದೆ ಕಾಲಬೈರವನ ವಿಗ್ರಹ ಇದೆ. ಲಕ್ಷ್ಮೀ ದೇವಾಲಯದ ಮುಂದೆ ಶಿವನ ಲಿಂಗವಿದೆ. ಇಂತಹ ಇತಿಹಾಸ ಪ್ರಸಿದ್ಧ ದೇವಾಲಯದಲ್ಲಿ ನಡೆದಿರುವ ಘಟನೆ ಈಗ ಪ್ರಧಾನಿ ಕಚೇರಿ ತಲುಪಿದೆ.

English summary
An idol of goddess Kali was found broken in the 12th century Lakshmi Devi temple in Doddagaddavalli village in Hassan district of Karnataka. Prime minister office seeks report on issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X