ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ಯಾಸ್ ಪೈಪ್‍ಲೈನ್; ಭೂಮಿ ಕಳೆದುಕೊಂಡವರಿಗೆ ಸಿಹಿ ಸುದ್ದಿ

|
Google Oneindia Kannada News

ಹಾಸನ, ಅಕ್ಟೋಬರ್ 29 : ಹಾಸನ ಜಿಲ್ಲೆಯಲ್ಲಿ ಹೆ. ಪಿ. ಸಿ. ಎಲ್. ಗ್ಯಾಸ್ ಪೈಪ್‍ಲೈನ್ ಯೋಜನೆಗೆ ಭೂಮಿ ನೀಡಿದ ರೈತರಿಗೆ ಒಂದು ತಿಂಗಳಿನಲ್ಲಿ ಪರಿಹಾರ ತಲುಪಲಿದೆ. ಜಮೀನು ಹಾಗೂ ಬೆಳೆಹಾನಿಗೆ ಸರ್ಕಾರದ ನಿರ್ದೇಶನದಂತೆ ಬೆಲೆ ನಿಗದಿಪಡಿಸಿ ಒಂದು ತಿಂಗಳಲ್ಲಿ ಪರಿಹಾರ ನೀಡಲು ಸೂಚನೆ ನೀಡಲಾಗಿದೆ.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರ ನೇತೃತ್ವದಲ್ಲಿ ಹೆ. ಪಿ. ಸಿ. ಎಲ್. ಗ್ಯಾಸ್ ಪೈಪ್‍ಲೈನ್‍ಗೆ ಒಳಪಡುವ ರೈತರ ಜಮೀನಿನ ಬೆಲೆ ನಿಗದಿ ಕುರಿತು ಸಭೆ ನಡೆಯಿತು. ಹಾಸನ ಹಾಗೂ ಅರಸೀಕೆರೆ ತಾಲೂಕಿನಲ್ಲಿ ಈ ಯೋಜನೆಗೆ ಒಳಪಡುವ ಜಮೀನು ಹಾಗೂ ಬೆಳೆಗೆ ನಿಯಮಾನುಸಾರ ಪರಿಹಾರ ನೀಡುವಂತೆ ಭೂಸ್ವಾಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

 ಶಿವಾಜಿ ಪುತ್ಥಳಿ ಸ್ಥಾಪನೆಗೆ ಶಾಸಕ ಸತೀಶ್​ ಜಾರಕಿಹೊಳಿ ಭೂಮಿ ಪೂಜೆ ಶಿವಾಜಿ ಪುತ್ಥಳಿ ಸ್ಥಾಪನೆಗೆ ಶಾಸಕ ಸತೀಶ್​ ಜಾರಕಿಹೊಳಿ ಭೂಮಿ ಪೂಜೆ

ಹೆಚ್‌. ಪಿ. ಸಿ. ಎಲ್ ಕೇಂದ್ರ ಸರ್ಕಾರದ ಗ್ಯಾಸ್ ಪೈಪ್‌ಲೈನ್ ಯೋಜನೆಯಾಗಿದೆ. ಹಾಸನ ತಾಲೂಕಿನಲ್ಲಿ 25 ಕಿ. ಮೀ. ಹಾಗೂ ಅರಸೀಕೆರೆ ತಾಲೂಕಿನಲ್ಲಿ 25 ಕಿ. ಮೀ. ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 50 ಕಿ. ಮೀ. ಪೈಲ್ ಲೈನ್ ಹಾದು ಹೋಗಿದೆ.

ಎಕ್ಸ್‌ಪ್ರೆಸ್ ವೇಗಳ ಜೊತೆ ರೈಲು ಮಾರ್ಗ; ಕೇಂದ್ರ ಹೊಸ ಚಿಂತನೆ ಎಕ್ಸ್‌ಪ್ರೆಸ್ ವೇಗಳ ಜೊತೆ ರೈಲು ಮಾರ್ಗ; ಕೇಂದ್ರ ಹೊಸ ಚಿಂತನೆ

HPCL Gas Pipeline Project Farmers To Get Compensation In November

ಯೋಜನೆಯಿಂದ ಆಗಿರುವ ಬೆಳೆಹಾನಿ, ತೋಟಗಾರಿಕೆಗೆ ಬೆಳೆ ಹಾನಿ ಮುಂತಾದವುಗಳನ್ನು ಗುರುತಿಸಿ ಪ್ರತಿಯೊಬ್ಬ ರೈತರಿಗೂ ಸರ್ಕಾರದ ಮಾರ್ಗಸೂಚಿ ಹಾಗೂ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುತ್ತದೆ.

ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ 335 ಹೆಕ್ಟೇರ್ ಭೂ ಸ್ವಾಧೀನ ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ 335 ಹೆಕ್ಟೇರ್ ಭೂ ಸ್ವಾಧೀನ

ನವೆಂಬರ್ ಮೊದಲ ವಾರದಲ್ಲಿ ಪಂಚನಾಮೆಯನ್ನು ಪೂರ್ಣಗೊಳಿಸಿ ರೈತರಿಗೆ ಪರಿಹಾರ ವಿತರಣೆ ಮಾಡಲಾಗುತ್ತದೆ. ಬಳಿಕ ಕಾಮಗಾರಿ ಆರಂಭ ಮಾಡಲಾಗುತ್ತದೆ. ರೈತರಿಗೆ ಪರಿಹಾರ ನಿಗದಿ ಮಾಡಲು ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಜಿ. ಎನ್. ಮಂಜುನಾಥ್ ನೇಮಕಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮಗಳು ಹಾಗೂ ಇತರ ಗ್ರಾಮಗಳ ರೈತರ ಜಮೀನಿಗೆ ಸರ್ಕಾರದ ನಡಾವಳಿಯನ್ನು ಅನುಸರಿಸಿ ಬೆಲೆ ನಿಗದಿ ಪಡಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ.

English summary
Farmers who lost land for HPCL gas pipeline project will get compensation in the month of November. Project work will began on after land acquisition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X