ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರವಣಬೆಳಗೊಳದಲ್ಲಿ ಹೆಲಿರೈಡ್ ಸೇವೆ ಆರಂಭ?

|
Google Oneindia Kannada News

ಹಾಸನ, ಅಕ್ಟೋಬರ್ 04 : ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ ಹೆಲಿರೈಡ್ ಸೇವೆ ಯಶಸ್ವಿಯಾಗಿದೆ. ಇದರಿಂದ ಸ್ಫೂರ್ತಿ ಪಡೆದಿರುವ ಹಾಸನ ಜಿಲ್ಲಾಡಳಿತ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಹೆಲಿರೈಡ್ ಸೇವೆ ಆರಂಭಿಸಲು ಚಿಂತನೆ ನಡೆಸಿದೆ.

2018ರ ಫೆಬ್ರವರಿಯಲ್ಲಿ ಹಾಸನದ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ. ಲಕ್ಷಾಂತರ ಪ್ರವಾಸಿಗರು ಈ ಸಂದರ್ಭದಲ್ಲಿ ಭೇಟಿ ನೀಡುತ್ತಾರೆ. ಆದ್ದರಿಂದ, ಹೆಲಿರೈಡ್ ಸೇವೆ ಆರಂಭಿಸಿ, ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ ಮುಂದಾಗಿದೆ.

ಮೈಸೂರು : ಹೆಲಿಕಾಪ್ಟರ್‌ಗೆ ಹಕ್ಕಿ ಡಿಕ್ಕಿ, ತುರ್ತು ಭೂ ಸ್ಪರ್ಶಮೈಸೂರು : ಹೆಲಿಕಾಪ್ಟರ್‌ಗೆ ಹಕ್ಕಿ ಡಿಕ್ಕಿ, ತುರ್ತು ಭೂ ಸ್ಪರ್ಶ

Helicopter ride service to come up in Shravanabelagola.

'ಹೆಲಿರೈಡ್ ಸೇವೆ ಆರಂಭಿಸುವ ಕುರಿತು ಪವನ್ ಹನ್ಸ್ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೇಳಿದ್ದಾರೆ. ಪವನ್ ಹನ್ಸ್ ಸಂಸ್ಥೆ ಮೈಸೂರಿನಲ್ಲಿ 10 ನಿಮಿಷಕ್ಕೆ 2,300 ರೂ. ದರದಲ್ಲಿ ಹೆಲಿರೈಡ್ ಸೇವೆ ಒದಗಿಸಿತ್ತು.

ಕಪ್ಪುಚುಕ್ಕೆ ಬರದಂತೆ ಮಹಾಮಸ್ತಕಾಭಿಷೇಕ : ರೇವಣ್ಣಕಪ್ಪುಚುಕ್ಕೆ ಬರದಂತೆ ಮಹಾಮಸ್ತಕಾಭಿಷೇಕ : ರೇವಣ್ಣ

ಮಹಾಮಸ್ತಕಾಭಿಷೇಕದ ವಿಶೇಷ ಅಧಿಕಾರಿ ವರಪ್ರಸಾದ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದು, 'ವಿವಿಧ ಮಾದರಿಯ ಪ್ರವಾಸಿ ಪ್ಯಾಕೇಜ್‌ಗಳ ಹೆಲಿರೈಡ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಪವನ್ ಹನ್ಸ್ ಸಂಸ್ಥೆ ಜೊತೆ ಮಾತುಕತೆ ನಡೆಸಿದ ಬಳಿಕ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಕೆಲವೇ ದಿನಗಳಲ್ಲಿ ಮಾತುಕತೆ ನಡೆಯಲಿದೆ' ಎಂದು ಹೇಳಿದ್ದಾರೆ.

ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿ ಕೀರ್ತಿಸ್ತಂಭ ಸ್ಥಾಪನೆಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿ ಕೀರ್ತಿಸ್ತಂಭ ಸ್ಥಾಪನೆ

ಶ್ರವಣಬೆಳಗೊಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವೀಕ್ಷಣೆಗೆ ಅವಕಾಶ ಕಲ್ಪಿಸುವಂತಹ ಪ್ಯಾಕೇಜ್ ಅನ್ನು ಜಿಲ್ಲಾಡಳಿತ ಅಂತಿಮಗೊಳಿಸಲಿದೆ. ಬೇಲೂರು, ಹಳೆಬೀಡು, ಹೇಮಾವತಿ ಡ್ಯಾಂ, ಶೆಟ್ಟಿಹಳ್ಳಿ ಚರ್ಚ್, ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಹೆಲಿಕಾಪ್ಟರ್ ಮೂಲಕ ಸವಿಯುವಂತಹ ಪ್ಯಾಕೇಜ್ ಸಿದ್ಧಪಡಿಸಲಾಗುತ್ತದೆ.

ಮಹಾಮಸ್ತಕಾಭಿಷೇಕ ಕಾಮಗಾರಿಗೆ ಸಿಎಂ ಶಿಲಾನ್ಯಾಸಮಹಾಮಸ್ತಕಾಭಿಷೇಕ ಕಾಮಗಾರಿಗೆ ಸಿಎಂ ಶಿಲಾನ್ಯಾಸ

'ಶ್ರವಣಬೆಳಗೊಳದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಮಹಾಮಸ್ತಕಾಭಿಷೇಕದ ಆಯೋಜಕರಾದ ಜೈನ ಮಠದವರು ಜಾಗ ನೀಡಿದರೆ. ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತದೆ' ಎಂದು ಸಚಿವ ಎ.ಮಂಜು ಹೇಳಿದ್ದಾರೆ.

English summary
Helicopter rides during the Dasara celebrations in Mysuru successful. Now Hassan district administration to experiment Helicopter ride during the Mahamastakabhisheka at Shravanabelagola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X