ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ: ಮೈದುಂಬಿದ ಹೇಮಾವತಿ

By Nayana
|
Google Oneindia Kannada News

ಹಾಸನ, ಜೂನ್ 11: ರಾಜ್ಯಾದ್ಯಂತ ಮುಂಗಾರು ಮಳೆ ಚುರುಕಾಗಿದೆ, ಚಿಕ್ಕಮಗಳೂರು, ಹಾಸನ, ಮಂಗಳೂರು, ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಸನ ಜಿಲ್ಲೆಯ ಮಲೆನಾಡಿನಲ್ಲಿ ಭಾರಿ ವರ್ಷಧಾರೆಯಿಂದ ಹೇಮಾವತಿ ನದಿ ತುಂಬಿ ತುಳುಕುತ್ತಿದೆ.

ಹಾಸನ ಜಿಲ್ಲೆಯ ಸಕಲೇಶಪುರ ಆಲೂರು ತಾಲೂಕುಗಳ ಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ.ಹೇಮಾವತಿ ನದಿಯ ಗರಿಷ್ಠ ಮಟ್ಟ 2922 ಅಡಿ ಇದೆ, ಇಂದು 2874 ಅಡಿಗಳಷ್ಟು ಭರ್ತಿಯಾಗಿದೆ. ಒಳಹರಿವು 9115 ಕ್ಯೂಸೆಕ್‌ ಇದೆ, ಹೊರಹರಿವು 200 ಕ್ಯೂಸೆಕ್‌ ಇದೆ. ಕಳೆದ ಎರಡು ದಿನಗಳ ನಿರಂತರ ಮಳೆಗೆ ಹೇಮಾವತಿ ತುಂಬಿ ಹರಿಯುತ್ತಿದ್ದಾಳೆ.

Heavy rain in Hassan district: Holiday declared for schools

ಮುಂಗಾರು: ಮಹಾರಾಷ್ಟ್ರ, ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಸಂಭವಮುಂಗಾರು: ಮಹಾರಾಷ್ಟ್ರ, ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಸಂಭವ

ಭಾಗಮಂಡಲ, ಕಾರವಾರ, ನಾಪೊಕ್ಲು, ಮುಲ್ಕಿ, ಕೋರಾ, ಕಡೂರು, ಹಾಸನ, ಬೇಗೂರು, ಕುಶಾಲನಗರ, ಅಜ್ಜಂಪುರ, ಚೆನ್ನಗಿರಿ ಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇನ್ನು 48 ಗಂಟೆಗಳ ಕಾಲ ಮುಂಗಾರು ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

English summary
Due to heavy rainfall for the last three days Hemavati river is overflowing in Hassan district and authorities have declared school holidays in Alur and Sakleshpur taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X