ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನರು ಒಪ್ಪುವವರೆಗೆ ಮಾತ್ರ ರಾಜಕೀಯದಲ್ಲಿರ್ತೇವೆ: ರೇವಣ್ಣ

|
Google Oneindia Kannada News

Recommended Video

ರೇವಣ್ಣ ಎಲ್ಲಿಯವರೆಗೆ ರಾಜಕೀಯದಲ್ಲಿ ಇರುತ್ತಾರೆ ಗೊತ್ತಾ..? | HD Revanna | Oneindia Kannada

ಹಾಸನ, ಸೆಪ್ಟೆಂಬರ್ 19: ಜನರು ಒಪ್ಪುವವರೆಗೆ ರಾಜಕೀಯದಲ್ಲಿರುತ್ತೇವೆ ನಮ್ಮ ಕುಟುಂಬದಲ್ಲಿ ಉತ್ತರಾಧಿಕಾರಿ ನೇಮಕ ಪದ್ಧತಿ ಇಲ್ಲ ಎಂದು ಎಚ್‌ಡಿ ರೇವಣ್ಣ ಹೇಳಿದ್ದಾರೆ.

ಯಡಿಯೂರಪ್ಪ ಅವರು ಪುತ್ರ ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾರೆ, ಆದರೆ ನಮ್ಮ ಕುಟುಂಬದಲ್ಲಿ ಇಂತಹ ಪದ್ಧತಿಯೇ ಇಲ್ಲ ಎಂದರು. ರಾಜ್ಯದಲ್ಲಿ 15-20 ಸಾವಿರ ಕೋಟಿ‌ ರೂ.ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದೆ. ರೈತರ ಬೆಳೆ ಪರಿಹಾರಕ್ಕೆ ಹಣ ನೀಡಿಲ್ಲ. ರೈತರು ಈ ವರ್ಷ ಯಾವುದೇ ಬೆಳೆ ಬೆಳೆಯುವಂತಿಲ್ಲ.

ಹಾಸನ ಜಿಲ್ಲೆಯನ್ನು ಮಾರಾಟ ಮಾಡಿಲ್ಲ ಎಂದ ಸಚಿವ ಮಾಧುಸ್ವಾಮಿಹಾಸನ ಜಿಲ್ಲೆಯನ್ನು ಮಾರಾಟ ಮಾಡಿಲ್ಲ ಎಂದ ಸಚಿವ ಮಾಧುಸ್ವಾಮಿ

ಕೇಂದ್ರ‌ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ನೆರೆ ಸಂತ್ರಸ್ತರು ಕೈಹಿಡಿಯುವ ಆಶಾಭಾವನೆ ಹೊಂದಿದ್ದರು. ಈಗ ಅದಕ್ಕೆ ಅದಕ್ಕೆ ತಣ್ಣೀರು ಸುರಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

HD Revanna Reaction over Successor In Deve Gowda Family

ಹನ್ನೆರಡು ಜಿಲ್ಲೆಗಳಲ್ಲಿ ಮಳೆಯಿಂದ 38 ಸಾವಿರ ಕೋಟಿ ನಷ್ಟವಾಗಿದೆ. ಆದರೆ ಕೇಂದ್ರದಿಂದ ನೆರವು ಪಡೆಯಲು ಆಗದ ರಾಜ್ಯ ಸರ್ಕಾರ, 500 ಕೋಟಿ ರೂ. ರಸ್ತೆ ಹಾಗೂ 1,000 ಕೋಟಿ ರೂ. ಮನೆ ನಿರ್ಮಾಣಕ್ಕೆಂದು ಬಿಡುಗಡೆ ಮಾಡಿದೆ ಎಂದು ಕಿಡಿ ಕಾರಿದರು.

ಮೋದಿ, ಅಮಿತ್ ಷಾ ಅವರು ಭ್ರಷ್ಟಾಚಾರ ಮಾಡಲು ಎಪ್ಪತ್ತೈದು ವರ್ಷ ದಾಟಿದವರಿಗೆ ಹುದ್ದೆ ಇಲ್ಲ ಎಂಬ ಬಿಜೆಪಿ ನಿಯಮದಿಂದ ಬಿಎಸ್ವೈ ಗೆ ವಿನಾಯಿತಿ ನೀಡಿದ್ದಾರೆ. ಅವರಿಗೆ ದೇವರ ಶಿಕ್ಷೆ ಕೊಡುವ ಕಾಲ ಬರುತ್ತದೆ ಎಂದರು.

English summary
Former Minister HD Revanna Said that There is no System of successor politics in the Deve Gowda family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X