ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಸ್‌ ಕ್ರೀಂ ಫ್ಯಾಕ್ಟರಿ ಉದ್ಘಾಟಿಸಿ, ಐಸ್ ಕ್ರೀಂ ಸವಿದ ಕುಮಾರಸ್ವಾಮಿ

|
Google Oneindia Kannada News

Recommended Video

ಹಾಸನದಲ್ಲಿ ಐಸ್ ಕ್ರೀಮ್ ಫ್ಯಾಕ್ಟರಿಯನ್ನ ಉದ್ಘಾಟಿಸಿದ ಎಚ್ ಡಿ ಕುಮಾರಸ್ವಾಮಿ | Oneindia Kannada

ಹಾಸನ, ಸೆಪ್ಟೆಂಬರ್ 23 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಹಾಸನದಲ್ಲಿ ಐಸ್ ಕ್ರೀಂ ಫ್ಯಾಕ್ಟರಿ ಉದ್ಘಾಟನೆ ಮಾಡಿದರು. ಬಳಿಕ ಐಸ್ ಕ್ರೀಂ ಸವಿದು ಸಂತಸ ಪಟ್ಟರು.

ಭಾನುವಾರ ಎಚ್.ಡಿ.ಕುಮಾರಸ್ವಾಮಿ ಅವರು ಹಾಸನ ಹಾಲು ಒಕ್ಕೂಟದ ವತಿಯಿಂದ ನಿರ್ಮಿಸಲಾದ ಐಸ್‌ ಕ್ರೀಂ ಫ್ಯಾಕ್ಟರಿ ಉದ್ಘಾಟನೆ ಮಾಡಿದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಸಚಿವರಾದ ಎಚ್.ಡಿ‌ ರೇವಣ್ಣ, ಜಿ.ಟಿ.ದೇವೇಗೌಡ, ಸಾ.ರಾ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

ಹಾಸನದಲ್ಲಿ ಜೆಡಿಎಸ್ ಶಾಸಕಾಂಗ ಸಭೆ, ಇಬ್ಬರು ಶಾಸಕರು ಗೈರುಹಾಸನದಲ್ಲಿ ಜೆಡಿಎಸ್ ಶಾಸಕಾಂಗ ಸಭೆ, ಇಬ್ಬರು ಶಾಸಕರು ಗೈರು

ಹಾಸನ ಹಾಲು ಒಕ್ಕೂಟದ ವತಿಯಿಂದ 556.20ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ಇದರಲ್ಲಿ 37 ಕೋಟಿ ರೂ. ವೆಚ್ಚದ ಐಸ್‌ ಕ್ರೀಂ ಘಟಕವೂ ಸೇರಿದೆ.

ಹಾಸನ : ಮಳೆ ತೀವ್ರತೆ, ಭೂಕುಸಿತ ಬಗ್ಗೆ ಕೇಂದ್ರ ತಂಡದ ಅಚ್ಚರಿಹಾಸನ : ಮಳೆ ತೀವ್ರತೆ, ಭೂಕುಸಿತ ಬಗ್ಗೆ ಕೇಂದ್ರ ತಂಡದ ಅಚ್ಚರಿ

HD Kumaraswamy

ರೂ. 279 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಮತ್ತು ಹಾಲಿನಪುಡಿ ಘಟಕ ಸಮುಚ್ಚಯ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ರೂ.136 ಕೋಟಿ ವೆಚ್ಚದಲ್ಲಿ ಯು.ಹೆಚ್.ಟಿ. ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು.

ರೂ. 23 ಕೋಟಿ ವೆಚ್ಚದಲ್ಲಿ ಹಾಸನ ಡೈರಿ ಸಂಸ್ಕರಣಾ ಸಾಮರ್ಥ್ಯದ 3 ರಿಂದ 5 ಲಕ್ಷ ಲೀ.ಗಳಿಗೆ ವಿಸ್ತರಣೆಗೆ ಶಂಕುಸ್ಥಾಪನೆ, ರೂ.4.5 ಕೋಟಿ ವೆಚ್ಚದಲ್ಲಿ ಎಸ್.ಎಂ.ಒಇ ಗೋದಾಮು ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ, ರೂ. 4.8 ಕೋಟಿ ವೆಚ್ಚದಲ್ಲಿ ಉಗ್ರಾಣ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ, ರೂ. 3.5 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಗಳು ಸೇರಿದ್ದವು.

English summary
Karnataka Chief Minister H.D.Kumaraswamy inaugurated the ice cream factory in Hassan. Ice cream factory set up by Hassan Co-operative Milk Producers' Societies Union Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X