ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ಸಾವಿರ ಕೋಟಿ ರುಪಾಯಿ ಪರಿಹಾರ ಪ್ಯಾಕೇಜ್‌ಗೆ ಎಚ್‌ಡಿಕೆ ಆಗ್ರಹ

|
Google Oneindia Kannada News

ಹಾಸನ, ಮೇ 14: ಕೊರೊನಾ ಲಾಕ್‌ಡೌನ್ ಪರಿಹಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೊಷಿಸಿರುವ 2200 ಕೋಟಿ ರುಪಾಯಿ ಪರಿಹಾರ ಪ್ಯಾಕೇಜ್ ಏನಕ್ಕೂ ಸಾಲುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Recommended Video

Muthappa Rai ಅಪರೂಪದ ಚಿತ್ರಗಳು | unseen photos | Oneindia Kannada

ಶನಿವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಪರಿಹಾರವಾಗಿ ರಾಜ್ಯದಲ್ಲಿ ಕನಿಷ್ಟ ಹತ್ತು ಸಾವಿರ ಕೋಟಿ ರುಪಾಯಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಇದು ಯಾವ ರೀತಿಯ ಆತ್ಮನಿರ್ಭರ್‌ ಭಾರತ? ಪ್ರಧಾನಿ ಮೋದಿ ಅವರಿಗೆ ಎಚ್‌ಡಿಕೆ ಪ್ರಶ್ನೆ!ಇದು ಯಾವ ರೀತಿಯ ಆತ್ಮನಿರ್ಭರ್‌ ಭಾರತ? ಪ್ರಧಾನಿ ಮೋದಿ ಅವರಿಗೆ ಎಚ್‌ಡಿಕೆ ಪ್ರಶ್ನೆ!

ಕೋವಿಡ್ ಹಿನ್ನೆಲೆ ಕೇಂದ್ರ ಸರ್ಕಾರ ಹಲವು ಪ್ಯಾಕೇಜ್ ಘೋಷಣೆ ಮಾಡಿದೆ. ಆದ್ರೆ ಈ ಸಹಾಯ ಕೂಲಿಕಾರರು, ಮಹಿಳೆಯರು, ದಲಿತರಿಗೆ ಸಾಲದಾಗಿದೆ. ರಾಜ್ಯ ಸರ್ಕಾರದ 2200 ಕೋಟಿ ನೆರವೂ ಯಾವುದಕ್ಕೂ ಸಾಲಲ್ಲ. ಆಶಾ ಕಾರ್ಯಕರ್ತೆಯರು ಐವತ್ತು ದಿನ ಕೆಲಸ ಮಾಡಿದ್ದಾರೆ.

HD Kumaraswamy Demands For Rs 10 Thoussand Crore Rupees Lockdown Relief Fund

ಅವರಿಗೆ 3ಸಾವಿರ ಸಹಾಯ ಏನೂ ಅಲ್ಲ. ಆಶಾ ಕಾರ್ಯಕರ್ತೆ ಯರಿಗೆ ಕನಿಷ್ಟ 10 ಸಾವಿರ ಧನ ಸಹಾಯ ನೀಡಿ. ಎಲ್ಲಾ ವೃತ್ತಿಪರರಿಗೂ ನೆರವು ನೀಡಿ ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು.

ಕೇಂದ್ರದಿಂದಲೂ ಕೇವಲ ಮೂಗಿಗೆ ತುಪ್ಪ ಸವರೋ ಕೆಲಸ ಆಗಿದೆ ಅಷ್ಟೇ. ನಿರ್ದಿಷ್ಟವಾಗಿ ಯಾವುದೇ ಜನರಿಗೆ ಕೇಂದ್ರದ ಪ್ಯಾಕೇಜ್ ನಿಂದ ಅನುಕೂಲ ಆಗಿಲ್ಲ. ಯುಪಿಎ ಸರ್ಕಾರದ ಮಾದರಿಯಲ್ಲಿ ಮೋದಿಯವರು ಕೂಡ ರೈತರ ಸಾಲಾ ಮನ್ನಾ ಮಾಡಲಿ. ಕೇವಲ‌ ರೈತರ ಕಣ್ಣೊರೆಸೊ ತಂತ್ರ ಬಿಟ್ಟು ನಿಜವಾದ ಯೋಜನೆ ಜಾರಿ ಮಾಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

English summary
HD Kumaraswamy Demands For Rs 10 Thoussand Crore Rupees Lockdown Relief Fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X