ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ : 10 ವರ್ಷದ ರೈಲ್ವೇ ಮೇಲ್ಸೇತುವೆ ಯೋಜನೆಗೆ ಮರುಜೀವ

|
Google Oneindia Kannada News

ಹಾಸನ, ಅಕ್ಟೋಬರ್ 12 : ಹಾಸನ ನಗರದ ಎನ್.ಆರ್ ವೃತ್ತದಿಂದ ನೂತನ ಬಸ್ ನಿಲ್ದಾಣದ ವರೆಗಿನ ರೈಲ್ವೇ ಮೇಲ್ಸೇತುವೆ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದೆ. ಸುಮಾರು 10 ವರ್ಷಗಳ ಹಿಂದೆ ಈ ಯೋಜನೆ ರೂಪಿಸಿದ್ದು, ಈಗ ಕಾರ್ಯರೂಪಕ್ಕೆ ಬರುತ್ತಿದೆ.

ಲೋಕೋಪಯೋಗಿ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಹಾಸನ ನಗರ ಸಂಚಾರ ನಡೆಸಿ, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಕುರಿತು ಮಾಹಿತಿ ನೀಡಿದರು.

ಬೇಲೂರು ಹಳೇಬೀಡಿಗೆ ಸಿಕ್ತು ಕೇಂದ್ರ ಸರ್ಕಾರದ ಕಿರೀಟಬೇಲೂರು ಹಳೇಬೀಡಿಗೆ ಸಿಕ್ತು ಕೇಂದ್ರ ಸರ್ಕಾರದ ಕಿರೀಟ

'ನಗರದ ಎನ್.ಆರ್ ವೃತ್ತದಿಂದ ನೂತನ ಬಸ್ ನಿಲ್ದಾಣದ ವರೆಗಿನ ಮೇಲ್ಸೇತುವೆ ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಮುಂದಿನ 20 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು' ಎಂದು ಎಚ.ಡಿ.ರೇವಣ್ಣ ತಿಳಿಸಿದರು.

ಬೆಂಗಳೂರು-ಸಕಲೇಶಪುರ ರೈಲು ಸಂಚಾರ ಆರಂಭಬೆಂಗಳೂರು-ಸಕಲೇಶಪುರ ರೈಲು ಸಂಚಾರ ಆರಂಭ

'ಹೊಳೆನರಸೀಪುರ ಫ್ಲೈ ಓವರ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಆದಷ್ಟು ಬೇಗ ಕಾಮಗಾರಿ ನಡೆಯಲಿದೆ. ರಾಜ್ಯದ ಯೋಜನೆಗಳಿಗೆ ಕೇಂದ್ರ ರೈಲ್ವೆ ಇಲಾಖೆಯೂ ಸಹಕಾರ ನೀಡುವ ಭರವಸೆ ನೀಡಿದೆ' ಎಂದು ಹೇಳಿದರು.

ಉದ್ಘಾಟನೆಗೂ ಮೊದಲೇ 3ನೇ ಬಾರಿಗೆ ಕುಸಿದ ಬಿದ್ದ ಸೇತುವೆಉದ್ಘಾಟನೆಗೂ ಮೊದಲೇ 3ನೇ ಬಾರಿಗೆ ಕುಸಿದ ಬಿದ್ದ ಸೇತುವೆ

ಸ್ಥಳ ಪರಿಶೀಲನೆ ನಡೆದಿ ರೇವಣ್ಣ

ಸ್ಥಳ ಪರಿಶೀಲನೆ ನಡೆದಿ ರೇವಣ್ಣ

ಹಾಸನ ನಗರದ ಎನ್.ಆರ್ ವೃತ್ತದಿಂದ ನೂತನ ಬಸ್ ನಿಲ್ದಾಣದ ತನಕ ರೈಲ್ವೇ ಮೇಲ್ಸೇತುವೆ ನಿರ್ಮಿಸಲು ಎಚ್.ಡಿ.ರೇವಣ್ಣ ಅವರು ಸ್ಥಳ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಜೊತೆ ಈಗಾಗಲೇ ನಿಗದಿಯಾಗಿರುವ ಹಾಗೂ ಆಗಬೇಕಿರುವ ಹೊಸ ರೈಲ್ವೇ ಯೋಜನೆಗಳ ಕುರಿತು ಚರ್ಚಿಸಿದರು.

ಪ್ರಯಾಣಿಕರಿಗೆ ಅನುಕೂಲ

ಪ್ರಯಾಣಿಕರಿಗೆ ಅನುಕೂಲ

ಹಾಸನ ನೂತನ ಬಸ್ ನಿಲ್ದಾಣದ ಬಳಿ ಫ್ಲೈ ಓವರ್ ನಿರ್ಮಾಣದಿಂದಾಗಿ ಜನರಿಗೆ ಅನುಕೂಲವಾಗಲಿದೆ. ಬಸ್‌ ಹಾಗೂ ರೈಲ್ವೆ ನಿಲ್ದಾಣದಿಂದ ನೇರವಾಗಿ ಬಿ.ಎಂ ರಸ್ತೆ ಮತ್ತು ಜಿಲ್ಲಾ ಆಸ್ಪತ್ರೆ ಬಳಿಗೆ ಸುಲಭವಾಗಿ ಹೋಗಲು ಅನುಕೂಲವಾಗಲಿದೆ. ಕಳೆದ 10 ವರ್ಷಗಳ ಹಿಂದೆಯೆ ರೂಪಿಸಿದ್ದ ಯೋಜನೆ ಇದಾಗಿದ್ದು, ಈಗ ಕಾರ್ಯರೂಪಕ್ಕೆ ಬರುತ್ತಿದೆ.

ಮಾದರಿ ಸಾರಿಗೆ ವ್ಯವಸ್ಥೆ

ಮಾದರಿ ಸಾರಿಗೆ ವ್ಯವಸ್ಥೆ

'ಹಾಸನ ನಗರದ ಸಾರಿಗೆ ವ್ಯವಸ್ಥೆಯನ್ನು ಮಾದರಿಯಾಗುವಂತೆ ರೂಪಿಸುವುದು ನನ್ನ ಕನಸಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಕೆಲವು ಸಂಪರ್ಕ ರಸ್ತೆಗಳ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ರೈಲ್ವೆ ಇಲಾಖೆಯಿಂದ ಗರಿಷ್ಠ ಸಹಕಾರ ನಿರೀಕ್ಷಿಸಲಾಗುತ್ತಿದೆ' ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ತ್ರಿವಳಿ ಕೆರೆಗಳ ಸೌಂದರ್ಯಾಭಿವೃದ್ದಿಗೆ ಕ್ರಮ: ರೋಹಿಣಿ ಸಿಂಧೂರಿತ್ರಿವಳಿ ಕೆರೆಗಳ ಸೌಂದರ್ಯಾಭಿವೃದ್ದಿಗೆ ಕ್ರಮ: ರೋಹಿಣಿ ಸಿಂಧೂರಿ

ಕೇಂದ್ರ ಸಚಿವರ ಭೇಟಿ

ಕೇಂದ್ರ ಸಚಿವರ ಭೇಟಿ

'ಹಾಸನ ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮುಂದಿನ 20 ತಿಂಗಳೊಳಗೆ ಪೂರ್ಣಗೊಳ್ಳಬೇಕಿದೆ. ಈಗಾಗಲೇ ಕೇಂದ್ರ ರೈಲ್ವೇ ಸಚಿವರನ್ನು ಭೇಟಿ ಮಾಡಿದಾಗ ಜಿಲ್ಲೆಯ ಎಲ್ಲಾ ಯೋಜನೆಗಳಿಗೆ ಪೂರಕ ಪ್ರತಿಕ್ರಿಯೆ ನೀಡಿದ್ದಾರೆ' ಎಂದು ರೇವಣ್ಣ ಹೇಳಿದರು.

English summary
Hassan district in-charge minister H.D.Revanna said that, Railway flyover between NR circle and New bus stand Hassan city will complete in 20 months. 10 years old project work will began soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X