ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಹಾಫ್ ಹೆಲ್ಮೆಟ್ ಹಾಕೊಹಂಗಿಲ್ಲ, ದಂಡ ಇಲ್ಲ ಇನ್ನೇನು?

|
Google Oneindia Kannada News

ಹಾಸನ, ನವೆಂಬರ್ 10: ಇಷ್ಟು ದಿನ ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸುತ್ತಿದ್ದ ಸಂಚಾರ ಪೊಲೀಸರು ಇದೀಗ ಹಾಫ್ ಹೆಲ್ಮೆಟ್ ಧರಿಸಿದರೆ ಹೆಲ್ಮೆಟ್‌ನ್ನು ವಶಕ್ಕೆ ಪಡೆಯುತ್ತಿದ್ದಾರೆ.

ಇದರಲ್ಲಿ ಪೊಲೀಸರ ಸ್ವಾರ್ಥವೇನಿಲ್ಲ, ಹಾಫ್ ಹೆಲ್ಮೆಟ್ ಧರಿಸುವುದರಿಂದ ಅಪಾಯ ಹೆಚ್ಚುಹಾಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಸನ ಸಂಚಾರ ಪೊಲೀಸರು ಸನ್ನದ್ಧರಾಗಿದ್ದಾರೆ.

ಇದೇನಿದು ಕಚೇರಿಯ ಒಳಗೂ ಹೆಲ್ಮೆಟ್ ಕಡ್ಡಾಯವೇ? ಇದೇನಿದು ಕಚೇರಿಯ ಒಳಗೂ ಹೆಲ್ಮೆಟ್ ಕಡ್ಡಾಯವೇ?

ಹಾಫ್ ಹೆಲ್ಮೆಟ್ ಬೇಡ ಫುಲ್ ಹೆಲ್ಮೆಟ್ ಧರಿಸಿ ಎಂದು ಹೇಳುತ್ತಾ ಹಾಫ್ ಹೆಲ್ಮೆಟ್‌ನ್ನು ಒಡೆದು ಹಾಕುತ್ತಿದ್ದಾರೆ.

Hassan Police Banned Half Helmet

ಹಾಸನ ನಗರ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಆಪರೇಷನ್ ಪ್ರಾರಂಭಿಸಿದ್ದು, ಸಿಕ್ಕ ಸಿಕ್ಕ ಸವಾರರ ಹಾಫ್ ಹೆಲ್ಮೆಟ್‍ಗಳನ್ನು ಕಸಿದು ಕಸಕ್ಕೆ ಎಸೆಯುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸದೆ ಕೇವಲ ದಂಡ ತಪ್ಪಿಸಿಕೊಳ್ಳಲು ಹಾಕುತ್ತಿದ್ದ ಹೆಲ್ಮೆಟ್ ಗಳು ಇದೀಗ ತಿಪ್ಪೆ ಸೇರುತ್ತಿವೆ.

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಖರೀದಿಸುತ್ತೇವೆ. ಆದರೆ ಇಂತಹ ಹೆಲ್ಮೆಟ್‍ಗಳಿಗೆ ಪೊಲೀಸರು ಮುಕ್ತಿ ಕಾಣಿಸುತ್ತಿದ್ದು, ಇನ್ನು ಮುಂದೆ ಕಡ್ಡಾಯವಾಗಿ ಐಎಸ್‍ಐ ಗುರುತಿರುವ ಗುಣಮಟ್ಟದ ಫುಲ್ ಹೆಲ್ಮೆಟ್‍ಗಳನ್ನು ಧರಿಸಬೇಕಿದೆ. ಹಾಫ್ ಹೆಲ್ಮೆಟ್ ಎಲ್ಲವನ್ನೂ ಪೊಲೀಸರು ಕಿತ್ತುಕೊಂಡು ಒಡೆದು ಹಾಕುತ್ತಿದ್ದು, ಹೊಸ ಹೆಲ್ಮೆಟ್ ಖರೀದಿಸುವಂತೆ ಸೂಚನೆ ನೀಡುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಪೊಲೀಸರು ಈ ಕಾರ್ಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಲ್ಲೂ ಇದೇ ರೀತಿ ಕ್ರಮವನ್ನು ಪೊಲೀಸರು ಕೈಗೊಂಡರೆ ಆಶ್ಚರ್ಯವೇನಿಲ್ಲ. ಆದರೆ ಪೊಲೀಸರು ಕೂಡ ಸಾಮಾನ್ಯವಾಗಿ ಹಾಫ್ ಹೆಲ್ಮೆಟ್‌ನ್ನೇ ಧರಿಸುತ್ತಾರೆ ಎನ್ನುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

English summary
Traffic police who have been fined for not wearing a helmet for a long time are now seizing the helmet if they wear a Half Helmet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X