ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾದ ಪ್ರಜ್ವಲ್

|
Google Oneindia Kannada News

Recommended Video

ಪ್ರಜ್ವಲ್ ರೇವಣ್ಣ, ಜೂನ್ 4ರಂದು ಹಾಸನದ ಸಂಸದನಾಗಿ ಪ್ರಮಾಣವಚನ ಸ್ವೀಕಾರಕ್ಕೆ ಸಜ್ಜು | Oneindia Kannada

ಹಾಸನ, ಮೇ 27: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅರಕಲಗೂಡು ಮಂಜು ವಿರುದ್ಧ ಉತ್ತಮ ಅಂತರದಿಂದ ಜಯ ದಾಖಲಿಸಿ, ಜೆಡಿಎಸ್ ನ ಏಕೈಕ ಸಂಸದ ಎನಿಸಿರುವ ಪ್ರಜ್ವಲ್ ರೇವಣ್ಣ ಅವರು ಕೊನೆಗೂ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ನಿಗದಿ ಮಾಡಿದ್ದಾರೆ.

'ಮಾಜಿ‌ ಪ್ರಧಾನಿ ದೇವೇಗೌಡರು ಸೋತರೂ ಅವರ ಶಕ್ತಿ ಕುಗ್ಗಿಲ್ಲ. ಅವರ ಶಕ್ತಿ ನಮ್ಮ ಪಕ್ಷದ ಎಲ್ಲರ ಮೇಲಿದೆ. ಅವರ ಆಶೀರ್ವಾದ ಇದ್ದರೆ ನಾವು ಏನು ಬೇಕಾದರೂ ಜಯಿಸುತ್ತೇವೆ' ಎಂದಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರು ಈಗಲೂ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧ ಎಂದಿದ್ದಾರೆ.

ಚೊಚ್ಚಲ ಪ್ರಯತ್ನದಲ್ಲೇ ಸಂಸತ್ತಿಗೆ ಆಯ್ಕೆಯಾದ ದೇವೇಗೌಡರ ಮೊಮ್ಮಗಚೊಚ್ಚಲ ಪ್ರಯತ್ನದಲ್ಲೇ ಸಂಸತ್ತಿಗೆ ಆಯ್ಕೆಯಾದ ದೇವೇಗೌಡರ ಮೊಮ್ಮಗ

'ರಾಜೀನಾಮೆ ವಿಚಾರವನ್ನು ಅವರ ಮುಂದೆ ಇಟ್ಟು ಬಂದಿದ್ದೇನೆ. ನಾನು ಜೂನ್ 4 ರಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ. ಆ ನಂತರ ನಾನು ಹಾಗೂ ಜಿಲ್ಲಾ ನಾಯಕರು ಗೌಡರ ಬಳಿಗೆ ಹೋಗಿ ಮತ್ತೆ ಒತ್ತಡ ಹಾಕುತ್ತೇವೆ. ಸಂಸತ್ ಸ್ಥಾನಕ್ಕೆ ರಾಜೀನಾಮೆ ಕೊಡುವ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದು ಹೇಳಿದರು.

ಅನರ್ಹಗೊಳ್ಳುವ ಭೀತಿಯಿಂದ ಪ್ರಜ್ವಲ್ ರಾಜೀನಾಮೆಗೆ ಮುಂದಾದರೆ?ಅನರ್ಹಗೊಳ್ಳುವ ಭೀತಿಯಿಂದ ಪ್ರಜ್ವಲ್ ರಾಜೀನಾಮೆಗೆ ಮುಂದಾದರೆ?

ಮಾಜಿ ಪ್ರಧಾನಿ, ಹಾಸನದ ಹಾಲಿ ಸಂಸದರಾಗಿದ್ದ ದೇವೇಗೌಡ ಅವರು ಸ್ವಕ್ಷೇತ್ರವನ್ನು ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು, ನನ್ನ ರಾಜಕೀಯ ಉತ್ತರಾಧಿಕಾರಿ ಎಂದು ಹಾರೈಸಿದ್ದರು. ನಂತರ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮುದ್ದಹನುಮೇಗೌಡ ಬದಲಿಗೆ ದೇವೇಗೌಡ ಸ್ಪರ್ಧಿಸಿ, ಬಿಜೆಪಿಯ ಜಿಎಸ್ ಬಸವರಾಜು ವಿರುದ್ಧ ಸೋಲು ಕಂಡಿದ್ದಾರೆ.

2019ರಲ್ಲಿ ಹಾಸನ ಲೋಕಸಭೆ ಫಲಿತಾಂಶ

2019ರಲ್ಲಿ ಹಾಸನ ಲೋಕಸಭೆ ಫಲಿತಾಂಶ

ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶ 2019ರಂತೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು 6,76,606 ಮತ(52.96%) ಪಡೆದು ಜಯಭೇರಿ ಬಾರಿಸಿದರೆ, ಮಂಜು ಅವರು 5,35,282 ಮತ(41.9%) ಗಳಿಸಿ ಸೋಲು ಕಂಡರು. ಆದರೆ, ತುಮಕೂರಿನಲ್ಲಿ ತಾತಾ ದೇವೇಗೌಡರು ಸೋಲು ಕಂಡಿದ್ದರಿಂದ ಮನನೊಂದು ಹಾಸನದ ಸ್ಥಾನ ಬಿಟ್ಟುಕೊಡುವೆ ಎಂದು ಪ್ರಜ್ವಲ್ ಹೇಳಿದ್ದು, ಇಂದಿಗೂ ಚರ್ಚೆಯಲ್ಲಿದೆ

ಶಾಸಕ ಪ್ರೀತಂಗೌಡ ವಿರುದ್ಧ ಪ್ರಜ್ವಲ್ ಗರಂ

ಶಾಸಕ ಪ್ರೀತಂಗೌಡ ವಿರುದ್ಧ ಪ್ರಜ್ವಲ್ ಗರಂ

'ನಾನು ಹಾಸನ ತಾಲೂಕಿನಲ್ಲಿ ಲೀಡ್ ಪಡೆಯದೇ ಹೋದ್ರೆ ಪಪ್ಪು ಎನಿಸಿಕೊಳ್ಳುವೆ ಎಂದಿದ್ದೆ. ಈಗ 15 ಸಾವಿರ ಲೀಡ್ ಪಡೆದಿದ್ದೇನೆ. ಪ್ರೀತಂಗೌಡ ಪಪ್ಪು ಆಗ್ತಾರಾ ಎಂದು ಪ್ರಶ್ನಿಸಿದರು. ಸಮ್ಮಿಶ್ರ ಸರಕಾರ ಪತನವಾಗಲಿದೆ ಎನ್ನುವುದು ಊಹಾಪೋಹ. ರಾಜ್ಯದ ಹಿತದೃಷ್ಟಿಯಿಂದ ಸಿಎಂ ಮತ್ತು ಡಿಸಿಎಂ ಆಡಳಿತ ನಡೆಸುತ್ತಿದ್ದಾರೆ. ಉಭಯ ಪಕ್ಷಗಳ ನಡುವೆ ಯಾವುದೇ ಲೋಪದೋಷ ಇಲ್ಲ ಎಂದು ಹೇಳಿದರು.

ರಾಜೀನಾಮೆ ನೀಡಲು ಮುಂದಾಗಿರುವುದೇಕೆ?

ರಾಜೀನಾಮೆ ನೀಡಲು ಮುಂದಾಗಿರುವುದೇಕೆ?

ರಾಜ್ಯ ಮತ್ತು ರೈತರ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಕೇಂದ್ರಮಟ್ಟದಲ್ಲಿ ಅವರಿಗೆ ದೊಡ್ಡ ಗೌರವ ಇದೆ. ಇದರಿಂದ ರಾಜ್ಯಕ್ಕೆ ಹಲವು ರೀತಿಯ ಅನುದಾನ ತರಲು ಸಹಕಾರಿಯಾಗಲಿದೆ' ಎಂದು ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡುತ್ತಾ ಹೇಳಿದರು.

ಸಾಮಾಜಿಕ ಜಾಲ ತಾಣಗಳಲ್ಲಿ ಟ್ರಾಲ್

ಸಾಮಾಜಿಕ ಜಾಲ ತಾಣಗಳಲ್ಲಿ ಟ್ರಾಲ್

ಚೊಚ್ಚಲ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಮೊದಲ ಪ್ರಯತ್ನದಲ್ಲೇ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿದ್ದಾರೆ. ಕರ್ನಾಟಕದ ಯುವ ಸಂಸದರ ಪೈಕಿ ಒಬ್ಬರೆನಿಸಿದ್ದಾರೆ. ಆದರೆ, ಭಾವನಾತ್ಮಕವಾಗೋ, ಮೂರ್ಖತನದಿಂದಲೋ, ಜನಾದೇಶವನ್ನು ಬದಿಗೊತ್ತಿ, ತಾತನ ಮೇಲಿನ ಪ್ರೀತಿಯನ್ನು ತೋರಿಸಲು ಹೋಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಸಿಟ್ಟಿಗೇಳುವಂತೆ ಮಾಡಿದೆ.

'ಇದು ಬಿಎಂಟಿಸಿ ಸೀಟಲ್ಲ, ಹಿರಿಯರಿಗೆ ಬಿಟ್ಟುಕೊಡೋಕೆ' ಟ್ವೀಟ್ ತಪರಾಕಿ'ಇದು ಬಿಎಂಟಿಸಿ ಸೀಟಲ್ಲ, ಹಿರಿಯರಿಗೆ ಬಿಟ್ಟುಕೊಡೋಕೆ' ಟ್ವೀಟ್ ತಪರಾಕಿ


English summary
Newly elected Hassan MP Prajwal Revanna said he will take oath on June 04. He rejected BJP's claim that him offering resignation was a gimmick.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X