ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ ಜಿಲ್ಲೆ ದೇವಾಲಯದ ಅಭಿವೃದ್ಧಿಗೆ ಆದ್ಯತೆ: ಶಾಸಕ ಪ್ರೀತಂ

|
Google Oneindia Kannada News

ಹಾಸನ ಜ.26: ಗಣರಾಜ್ಯೋತ್ಸವಕ್ಕೂ ಮುನ್ನ ದಿನ ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿ ಕೊಂಡಜ್ಜಿ ಗ್ರಾಮದ ಪ್ರಸಿದ್ಧ ಹಾಗೂ ಪುರಾತತ್ವ ಇಲಾಖೆಗೆ ಒಳಪಡುವ ವರದರಾಜು ಸ್ವಾಮಿ ದೇವಸ್ಥಾನಕ್ಕೆ ಶಾಸಕರಾದ ಪ್ರೀತಮ್ ಗೌಡ ಹಾಗೂ ಮೈಸೂರು ಮಿನರಲ್ಸ್‍ನ ಅಧ್ಯಕ್ಷರಾದ ಲಿಂಗ ಮೂರ್ತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಬ್ಬ, ಶುಭ ಸಂದರ್ಭಗಳಲ್ಲಿ ಜಿಲ್ಲೆಯ ದೇಗುಲಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಗಮನಹರಿಸಲಾಗುತ್ತಿದೆ ಎಂದರು.

ನಂತರ ಮಾತನಾಡಿದ ಅವರು ಸುಮಾರು 10 ವರ್ಷಗಳಿಂದ ದೇವಾಲಯದ ಅಭಿವೃದ್ಧಿ ಸ್ಥಗಿತ ಗೊಂಡು ಪಾಳು ಬಿದ್ದಿದ್ದು ಗ್ರಾಮಸ್ಥರು ಮಾಹಿತಿ ನೀಡ್ಡಿದರಿಂದ ಇಂದು ಭೇಟಿ ನೀಡಿ ಪರಿಶೀಲಿಸುತ್ತಿರುವುದಾಗಿ ಹೇಳಿದರು.

ಹಾಸನ: 200 ಕೋಟಿ ವೆಚ್ಚದಲ್ಲಿ14 ಎಕರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆಹಾಸನ: 200 ಕೋಟಿ ವೆಚ್ಚದಲ್ಲಿ14 ಎಕರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ

ಮುಜರಾಯಿ ಇಲಾಖೆ ಹಾಸನಾಂಬ ದೇವಸ್ಥಾನದ ಅಭಿವೃದ್ಧಿ ಹಣ ಹಾಗೂ ದಾನಿಗಳಿಂದ ಹಣವನ್ನು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

 ಹಾಸನಾಂಬ ದೇವಸ್ಥಾನವು ‘ಎ’ ಶ್ರೇಣಿ ಯಲ್ಲಿದೆ

ಹಾಸನಾಂಬ ದೇವಸ್ಥಾನವು ‘ಎ’ ಶ್ರೇಣಿ ಯಲ್ಲಿದೆ

ಹಾಸನಾಂಬ ದೇವಸ್ಥಾನವು ‘ಎ' ಶ್ರೇಣಿಯನ್ನು ಪಡೆದಿದ್ದು ಅದರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದತ್ತು ಪಡೆದು ಈ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ದೇವಸ್ಥಾನದ ಅಭಿವೃದ್ಧಿಗೆ ಮೈಸೂರು ಮಿನರಲ್ಸ್‍ನ ಅಧ್ಯಕ್ಷರಾದ ಲಿಂಗ ಮೂರ್ತಿಯವರು ನಮ್ಮೊಂದಿಗೆ ಭೇಟಿ ನೀಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 25 ಲಕ್ಷ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಹಣವನ್ನು ಬಳಸಿಕೊಂಡು ಕಾಮಗಾರಿ ಶೀಘ್ರ ಮುಗಿಸುತ್ತೇವೆ ಎಂದರು.

 ಸೀಗೆ ಗುಡ್ಡ, ದೊಡ್ಡಗದ್ದವಳ್ಳಿ ಹಾಗೂ ಕೊಂಡಜ್ಜಿ ದೇವಸ್ಥಾನ

ಸೀಗೆ ಗುಡ್ಡ, ದೊಡ್ಡಗದ್ದವಳ್ಳಿ ಹಾಗೂ ಕೊಂಡಜ್ಜಿ ದೇವಸ್ಥಾನ

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸೀಗೆ ಗುಡ್ಡ, ದೊಡ್ಡಗದ್ದವಳ್ಳಿ ಹಾಗೂ ಕೊಂಡಜ್ಜಿ ದೇವಸ್ಥಾನಗಳ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಸದ ವೇಳೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ 25 ಲಕ್ಷಣವನ್ನು ದೇವಸ್ಥಾನದ ಅಭಿವೃದ್ಧಿಗೆ ನೀಡಿದ್ದರು ಆ ಹಣದಿಂದ ದೇವಾಲಯ ಈ ಹಂತದ ವರೆಗೆ ಕಾಮಗಾರಿಯಾಗಿದೆ ಎಂದರು.

 ದೇವಸ್ಥಾನದ ಕಾಮಗಾರಿಯನ್ನು ಪೂರ್ಣಗೊಳಿಸಿ

ದೇವಸ್ಥಾನದ ಕಾಮಗಾರಿಯನ್ನು ಪೂರ್ಣಗೊಳಿಸಿ

2022ರ ಜನವರಿ 25 ರ ವೇಳೆಗೆ ದೇವಸ್ಥಾನದ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಉದ್ಘಾಟನೆ ಮಾಡಿಸಲಾಗುಹುದು ಎಂದು ಶಾಸಕ ಪ್ರೀತಂ ಗೌಡ ತಿಳಿಸಿದರು.

Recommended Video

ಬೆಂಗಳೂರು: ನೆಲಮಂಗಲದಲ್ಲಿ ಅನ್ನದಾತರ ಬೃಹತ್ ಪ್ರೊಟೆಸ್ಟ್..! | Oneindia Kannada
 ವಿವಿಧ ಅಧಿಕಾರಿಗಳು ಭಾಗಿ

ವಿವಿಧ ಅಧಿಕಾರಿಗಳು ಭಾಗಿ

ಈ ವೇಳೆಯಲ್ಲಿ ಮೈಸೂರು ಮಿನರಲ್ಸ್ ನ ಅಧ್ಯಕ್ಷರಾದ ಲಿಂಗಮೂರ್ತಿ, ತಹಸಿಲ್ದಾರ್ ಶಿವಶಂಕರಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಸಂಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸುದರ್ಶನ್ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

English summary
Hassan MLA Preeathm Gowda visited on temple in Kondajji and said restoring Heritage temples in the district is the priority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X