ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೊಚ್ಚಲ ಪ್ರಯತ್ನದಲ್ಲೇ ಸಂಸತ್ತಿಗೆ ಆಯ್ಕೆಯಾದ ದೇವೇಗೌಡರ ಮೊಮ್ಮಗ

|
Google Oneindia Kannada News

Recommended Video

ದೇವೇಗೌಡರ ಸೋಲಿಗೆ ಪ್ರಜ್ವಲ್ ಸ್ಪರ್ಧೆ ಕಾರಣನಾ..?

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕರ್ಮಭೂಮಿ ಹಾಸನದಲ್ಲಿ ಈ ಬಾರಿ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ಸಿನಿಂದ ಮುನಿಸಿಕೊಂಡು ಬಿಜೆಪಿ ಸೇರಿರುವ ಮಾಜಿ ಸಚಿವ ಅರಕಲಗೂಡು ಮಂಜು ಅವರು ಸವಾಲು ಹಾಕಿದ್ದರು. ಆದರೆ, ಚೊಚ್ಚಲ ಪ್ರಯತ್ನದಲ್ಲೇ ಪ್ರಜ್ವಲ್ ರೇವಣ್ಣ ಅವರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

ಹಾಸನ : ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ, ಸಾಲ ವಿವರಹಾಸನ : ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ, ಸಾಲ ವಿವರ

ಹಾಸನ ಲೋಕಸಭೆ ಚುನಾವಣೆ ಏಪ್ರಿಲ್ 18ರಂದು ಮತದಾನ ನಡೆದಿತ್ತು, ಮೇ 23ರಂದು ಅಂತಿಮ ಫಲಿತಾಂಶ ಇಲ್ಲಿದೆ. ಈ ಸಮಯಕ್ಕೆ ಲಭ್ಯವಿರುವ ಗೆದ್ದವರು ಹಾಗೂ ಸೋತ ಪ್ರಮುಖ ಅಭ್ಯರ್ಥಿಗಳ ವಿವರ ನೀಡಲಾಗಿದೆ. ಚುನಾವಣಾ ಆಯೋಗದಿಂದ ಅಂತಿಮ ಫಲಿತಾಂಶ ಪ್ರಕಟವಾದ ಬಳಿಕ ಮತಗಳ ಗಳಿಕೆ ಸಂಖ್ಯೆಯಲ್ಲಿ ವ್ಯತ್ಯಾಸ ಕಾಣಬಹುದು.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಈ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಯನ್ನು ಒಳಗೊಂಡ ಕ್ಷೇತ್ರದಲ್ಲಿ ಹೇಮಾವತಿ ಜೀವನದಿಯಾಗಿದೆ.

ಫಲಿತಾಂಶ 2019:

ಫಲಿತಾಂಶ 2019:

ಫಲಿತಾಂಶ 2019:
ಒಟ್ಟು ಎಣಿಕೆಯಾದ 12,77,552 ಮತಗಳ ಪೈಕಿ 12,74,438 ಇವಿಎಂ ಮತಗಳು ಹಾಗೂ 3114 ಅಂಚೆ ಮತಗಳು.

ಪ್ರಜ್ವಲ್ ರೇವಣ್ಣ(ಜೆಡಿಎಸ್) : ಗಳಿಸಿದ ಮತ 6,76,606(52.96%)
ಎ ಮಂಜು (ಬಿಜೆಪಿ): 535282 ಮತಗಳು(41.9%)
ವಿನೋದ್ ರಾಜ್ (ಬಿಎಸ್ ಪಿ) : 38761 ಮತಗಳು(3.03%)

2014ರ ಫಲಿತಾಂಶ

2014ರ ಫಲಿತಾಂಶ

2014ರಲ್ಲಿ ಕಾಂಗ್ರೆಸ್ಸಿನ ಅರಕಲಗೂಡು ಮಂಜು (409,379ಮತಗಳು) ವಿರುದ್ಧ 100462 ಮತಗಳ ಅಂತರದಿಂದ ದೇವೇಗೌಡರು(509841 ಮತಗಳು) ಜಯ ಗಳಿಸಿದ್ದರು. 2014ರಲ್ಲಿ ಶೇ 73ರಷ್ಟು ಮತದಾನವಾಗಿತ್ತು. ಒಟ್ಟು 11,47,172 ಮತಗಳ ಪೈಕಿ 5,86,090 ಪುರುಷರು, 5,61,082 ಮಹಿಳಾ ಮತಗಳು ದಾಖಲಾಗಿತ್ತು.

1980ರಿಂದ ಜೆಡಿಎಸ್ 5 ಬಾರಿ ಗೆಲುವು

1980ರಿಂದ ಜೆಡಿಎಸ್ 5 ಬಾರಿ ಗೆಲುವು

ದೇವೇಗೌಡ ಅವರು ಹಾಸನ ಜಿಲ್ಲೆಯಿಂದ ರಾಜಕೀಯ ಆರಂಭಿಸಿ, ಪ್ರಧಾನಿ ಪಟ್ಟಕ್ಕೇರಿದವರು. ಎರಡು ಬಾರಿ ಇಲ್ಲಿ ಸೋಲು ಕಂಡಿದ್ದು ಬಿಟ್ಟರೆ, ಹಾಸನದಲ್ಲಿ 85 ವರ್ಷ ವಯಸ್ಸಿನ 24/7 ರಾಜಕಾರಣಿ ದೇವೇಗೌಡರದ್ದೇ ದರ್ಬಾರು. 1980ರಿಂದ ಇಲ್ಲಿ ತನಕ ಸ್ಟ್ರೈಕ್ ರೇಟ್ ನೋಡಿದರೆ ಜೆಡಿಎಸ್ 5 ಬಾರಿ ಗೆಲುವು ಸಾಧಿಸಿ ಶೇ56ರಷ್ಟು ಗೆಲುವಿನ ಸರಾಸರಿ ಹೊಂದಿದ್ದರೆ, ಕಾಂಗ್ರೆಸ್ 4 ಬಾರಿ ಗೆಲುವು ಸಾಧಿಸಿ ಶೇ 44ರಷ್ಟು ಗೆಲುವನ್ನು ಕಂಡಿದೆ.

ಜಾತಿ ಲೆಕ್ಕಾಚಾರದಲ್ಲೂ ಗೆದ್ದ ರೇವಣ್ಣ

ಜಾತಿ ಲೆಕ್ಕಾಚಾರದಲ್ಲೂ ಗೆದ್ದ ರೇವಣ್ಣ

ಕುರುಬರು ಹೆಚ್ಚಿರುವ ಕಡೂರು ಕ್ಷೇತ್ರ ಸೇರಿರುವುದರಿ೦ದ ಜಾತಿ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಒಕ್ಕಲಿಗರು, ಲಿಂಗಾಯತರು, ಕುರುಬರು, ಎಸ್ ಟಿ, ಎಸ್ಟಿ, ಮುಸ್ಲಿಮರು ಹಾಗೂ ಇತರರು ಕ್ರಮವಾಗಿ ಇಲ್ಲಿ ಏರಿಕೆಯಿಂದ ಇಳಿಕೆ ಪ್ರಮಾಣದಲ್ಲಿ ಗುರುತಿಸಿಕೊಂಡಿದ್ದಾರೆ.

English summary
Hassan Lok Sabha (MP) Election Result 2019: Prajwal Revanna vs Arakalgud Manju fight decided today(May 23). Prajwal secured victory with 52.06% of votes against BJP candidate A Manju(41.9% votes)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X