ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ರೇವಣ್ಣ ಮತದಾನ ಮಾಡಿದ್ದ ಬೂತ್ ಅಧಿಕಾರಿಗಳು ಅಮಾನತು

|
Google Oneindia Kannada News

ಹಾಸನ, ಏಪ್ರಿಲ್ 29 : ಅಕ್ರಮ ಮತದಾನಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಮೂವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಏಪ್ರಿಲ್ 18ರಂದು ಹಾಸನ ಲೋಕಸಭಾ ಕ್ಷೇತ್ರದ ಮತದಾನ ನಡೆದಿತ್ತು.

ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ ಕಾರ್ಯ ನಿರ್ವಹಿಸಿದ್ದ ಮೂವರನ್ನು ಅಮಾನತು ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಅಮಾನತು ಮಾಡಲಾಗಿದೆ.

ಅಕ್ರಮ ಮತದಾನ ಮಾಡಿಸಿದ ಆರೋಪ: ರೇವಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಅಕ್ರಮ ಮತದಾನ ಮಾಡಿಸಿದ ಆರೋಪ: ರೇವಣ್ಣ ವಿರುದ್ಧ ಕ್ರಮಕ್ಕೆ ಆಗ್ರಹ

ಪಿಆರ್‌ಓಎಲ್‌ವಿ ಪಾಲಿಟೆಕ್ನಿಕ್ ಉಪನ್ಯಾಸಕ ವಿ.ಯೋಗೇಶ್, ಪುರ್ಲೇಹಳ್ಳಿ ಪ್ರಾಥಮಿಕ ಶಾಲೆ ಶಿಕ್ಷಕ ಪಿ.ಸಿ.ರಾಮಚಂದ್ರ ಮತ್ತು ಚುನಾವಣಾ ಸಿಬ್ಬಂದಿ ದೊಡ್ಡಬ್ಯಾಗತವಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕ ದಿನೇಶ್ ಅಮಾನತುಗೊಂಡವರು.

ಬೆಂಗಾವಲು ವಾಹನದಲ್ಲಿ ಹಣ, ಬಿಜೆಪಿಯ ಕುತಂತ್ರ ಎಂದ ರೇವಣ್ಣಬೆಂಗಾವಲು ವಾಹನದಲ್ಲಿ ಹಣ, ಬಿಜೆಪಿಯ ಕುತಂತ್ರ ಎಂದ ರೇವಣ್ಣ

Hassan lok sabha elections 2019 : Three polling staff suspended

ಏ.18ರಂದು ಮತದಾನ ಮಾಡಲು ಬಂದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಮತದಾರರಲ್ಲದವರಿಂದಲೂ ಮತ ಹಾಕಿಸಿದ್ದಾರೆ. ಇದಕ್ಕೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ದೂರು ನೀಡಲಾಗಿತ್ತು.

ಹಾಸನದಲ್ಲಿ ಮತಚಲಾವಣೆ ಮಾಡಿದ ಶತಾಯುಷಿ ಕಾಳಮ್ಮಹಾಸನದಲ್ಲಿ ಮತಚಲಾವಣೆ ಮಾಡಿದ ಶತಾಯುಷಿ ಕಾಳಮ್ಮ

ಹೊಳೆನರಸೀಪುರ ತಾಲೂಕಿನ ಮಾರ್ಗೋಡನಹಳ್ಳಿಯ ಮಾಯಣ್ಣ, ಎಂ.ಎನ್.ರಾಜು ಅವರು ನೀಡಿದ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದ ಮತದಾನ ಮುಕ್ತಾಯಗೊಂಡಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ, ಬಿಜೆಪಿಯಿಂದ ಎ.ಮಂಜು ಅಭ್ಯರ್ಥಿಗಳು. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

English summary
Hassan deputy commissioner Priyanka Mary Francis suspended three polling staff who worked in Paduvalahippe village of Holenarasipura on April 18th lok sabha election voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X