ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ಡೌನ್ 5.0: ಲಿಂಗರಸನ ಹಳ್ಳಿಯ ಕಲ್ಯಾಣಿಯ ಪುನಶ್ಚೇತನ

|
Google Oneindia Kannada News

ಹಾಸನ,ಜೂ 02: ಹಾಸನ ತಾಲ್ಲೂಕಿನ ಕುದುರುಗುಂಡಿ ವ್ಯಾಪ್ತಿಯಲ್ಲಿ ಬರುವ ಲಿಂಗರಸನಹಳ್ಳಿ ಗ್ರಾಮದಲ್ಲಿ ಊರ ಮುಂದಿನ ಕಲ್ಯಾಣಿಯ ಸ್ವಚ್ಛತಾ ಕಾರ್ಯವನ್ನು ಹಸಿರುಭೂಮಿ ಪ್ರತಿಷ್ಠಾನ, ಕುದುರುಗುಂಡಿ ಪಂಚಾಯಿತಿ ಹಾಗೂ ಊರಿನ ಗ್ರಾಮಸ್ಥರು ಶ್ರಮದಾನ ಮೂಲಕ ಮಾಡಿದ್ದಾರೆ.

ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಚ್.ಅಪ್ಪಾಜಿಗೌಡ ಅವರು ಸ್ವಚ್ಛತಾ ವೇಳೆ ಹಾಜರಿದ್ದು ಗ್ರಾಮಸ್ಥರಿಗೆ ಜಲ ಮೂಲಗಳಾದ ಕೆರೆ ಕಟ್ಟೆ ಕಲ್ಯಾಣಿಗಳನ್ನು ಉಳಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಟ್ಟರು, ಇದಕ್ಕೆ ಸ್ಪಂದಿಸಿದ ಗ್ರಾಮಸ್ಥರು ಇನ್ನೂ ಮುಂದೆ ನಾವು ಕೂಡಾ ನಮ್ಮ ಹಳ್ಳಿಯ ಕೆಲಸ ಕಾರ್ಯಗಳನ್ನು ಒಗ್ಗಟ್ಟಾಗಿ ಮಾಡಿಕೊಳ್ಳುವುದಾಗಿ ಮಾತು ಕೊಟ್ಟರು.

ನರೇಗಾದಿಂದ ಪುನಶ್ಚೇತನದತ್ತ ಹಾಸನದ ಸಂತೇಕೊಪ್ಪಲು ಐತಿಹಾಸಿಕ ಕಲ್ಯಾಣಿನರೇಗಾದಿಂದ ಪುನಶ್ಚೇತನದತ್ತ ಹಾಸನದ ಸಂತೇಕೊಪ್ಪಲು ಐತಿಹಾಸಿಕ ಕಲ್ಯಾಣಿ

ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಸುಬ್ಬುಸ್ವಾಮಿ, ಹಿರಿಯ ಸದಸ್ಯರಾದ ಪುಟ್ಟಯ್ಯ, ರೂಪಹಾಸನರವರು ಪಾಲ್ಗೊಂಡಿದ್ದರು.

Hassan: Lingarasanahalli Kalyani revive Kuduregundi Panchayat

ಹಸಿರುಭೂಮಿ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿಗಳಾದ ಡಾ.ಮಂಜುನಾಥ್ ಅವರು ಬಹಳ ಶ್ರಮವಹಿಸಿ ಕಲ್ಯಾಣಿಯ ಪುನಶ್ಚೇತನಗೊಳಿಸಿದರು, ಕುದುರುಗುಂಡಿ ಪಂಚಾಯಿತಿ ಪಿ.ಡಿ.ಓ ಶಿವರಾಜು ಕೂಡ ಆಸಕ್ತಿವಹಿಸಿ ಕಲ್ಯಾಣಿಯ ಸ್ವಚ್ಚತೆ ಮಾಡಿಸಿದರು.

Hassan: Lingarasanahalli Kalyani revive Kuduregundi Panchayat

ಸ್ವಚ್ಛತಾ ಕಾರ್ಯದಲ್ಲಿ ಗ್ರಾಮಸ್ಥರಾದ ಬಸವೇಗೌಡ,s ಸಿದ್ದೇಗೌಡ, ಶಿವಣ್ಣ, ಗಂಗಾಧರ್, ರವಿ, ಬೂದೇಶ್ವರಸ್ವಾಮಿ ಮಠದ ಕಾರ್ಯದರ್ಶಿ ಕುಮಾರ್, ಪಂಚಾಯಿತಿಯ ಸಿಬ್ಬಂದಿವರ್ಗದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

English summary
Hassan: Lingarasanahalli Kalyani revived by Hasirubhumi Trust, Kuduregundi Panchayat and villagers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X