• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾಸನ: 200 ಕೋಟಿ ವೆಚ್ಚದಲ್ಲಿ14 ಎಕರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ

|
Google Oneindia Kannada News

ಹಾಸನ, ಜನವರಿ 26: ''ಹಾಸನದ ಡೈರಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿನ ಮೈಸೂರು ಮಿನರಲ್ಸ್ ಸ್ವಾಮ್ಯದ 14 ಎಕರೆ ಜಾಗದಲ್ಲಿ ಐಟಿ ಪಾರ್ಕ್ ಹಾಗೂ ವಾಣಿಜ್ಯ ಉದ್ದೇಶಕ್ಕೆ ಮಳಿಗೆಗಳನ್ನು ಸ್ಥಾಪಿಸಲಾಗುವುದು'' ಎಂದು ಕರ್ನಾಟಕ ರಾಜ್ಯ ಖನಿಜ ನಿಗಮದ ಅದ್ಯಕ್ಷ ಲಿಂಗಮೂರ್ತಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರದೇಶದಲ್ಲಿ ಗ್ರಾನೈಟ್ ಉದ್ಯಮವೂ ಸ್ಥಗಿತವಾಗಿದ್ದು ವಾಣಿಜ್ಯ ಕ್ಷೇತ್ರಕ್ಕೆ ಪುನಶ್ಚೇತನ ನೀಡುವ ಉದ್ದೇಶದಿಂದ ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದರು.

ವಿಮಾನ ನಿಲ್ದಾಣ; ಹಾಸನ ಜಿಲ್ಲೆಯ ಜನರಿಗೆ ಸಿಹಿಸುದ್ದಿವಿಮಾನ ನಿಲ್ದಾಣ; ಹಾಸನ ಜಿಲ್ಲೆಯ ಜನರಿಗೆ ಸಿಹಿಸುದ್ದಿ

ಈ ಯೋಜನೆಗೆ ಸುಮಾರು 200 ಕೋಟಿ ವೆಚ್ಚವಾಗಲಿದ್ದು ಮೊದಲ ಹಂತವಾಗಿ 60 ಕೋಟಿ ಬಿಡುಗಡೆಗೊಳಿಸಲಾಗುವುದು ಮುಂದಿನ ಕೆಲ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ವಾಗಲಿದೆ ಎಂದರು.ಇದರಿಂದ ಸ್ಥಳೀಯವಾಗಿ ಐಟಿಐ, ಇಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಎಂದರು.

 ವಿಶೇಷ ಅರ್ಥಿಕ ವಲಯದಲ್ಲಿ ಕೈಗಾರಿಕೆ ಸ್ಥಾಪನೆ

ವಿಶೇಷ ಅರ್ಥಿಕ ವಲಯದಲ್ಲಿ ಕೈಗಾರಿಕೆ ಸ್ಥಾಪನೆ

ಗ್ರಾನೈಟ್ ಉದ್ಯಮ ಸ್ಥಗಿತವಾಗಿದ್ದು ವಹಿವಾಟು ಸ್ಥಗಿತಗೊಂಡಿದ್ದರಿಂದ ಉಳಿದ 14 ಸಾವಿರ ಚ.ಮೀ ಗ್ರಾನೈಟ್ ಅನ್ನು ಹರಾಜು ಹಾಕಲಾಗುವುದು ಹಾಗೂ 280 ಎಕರೆ ವಿಶೇಷ ಅರ್ಥಿಕ ವಲಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದು ಎಂದು ಕರ್ನಾಟಕ ರಾಜ್ಯ ಖನಿಜ ನಿಗಮದ ಅದ್ಯಕ್ಷ ಲಿಂಗಮೂರ್ತಿ ಮಾಹಿತಿ ನೀಡಿದರು.

 ಶಾಸಕರಾದ ಪ್ರೀತಂ ಜೆ ಗೌಡ ಅವರು ಮಾತನಾಡಿ

ಶಾಸಕರಾದ ಪ್ರೀತಂ ಜೆ ಗೌಡ ಅವರು ಮಾತನಾಡಿ

ಶಾಸಕರಾದ ಪ್ರೀತಂ ಜೆ ಗೌಡ ಅವರು ಮಾತನಾಡಿ ನಗರದ ಹೊರವಲಯದಲ್ಲಿ ಮೈಸೂರು ಮಿನರಲ್ಸ್ ನ ಜಾಗದಲ್ಲಿ ಐ.ಟಿ ಪಾರ್ಕ್ ಮಾಡಲಾಗುವುದು.ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಆಧ್ಯತೆ ನೀಡಲಾಗುವುದು .ಹೊಸದಾಗಿ ಪ್ರಾರಂಭಿಸುವ ಕಂಪನಿಗಳಿಗೆ ಈ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಜಾಗ ಒದಗಿಸಲಾಗುವುದು ಎಂದರು.

 ಎಸ್.ಇ.ಜೆಡ್ ಯೋಜನೆಯಡಿಯಲ್ಲಿರುವ 280ಎಕರೆ

ಎಸ್.ಇ.ಜೆಡ್ ಯೋಜನೆಯಡಿಯಲ್ಲಿರುವ 280ಎಕರೆ

ಎಸ್.ಇ.ಜೆಡ್ ಯೋಜನೆಯಡಿಯಲ್ಲಿರುವ 280ಎಕರೆ ಜಮೀನನ್ನು ಹಿಂಪಡೆದು ಇತರ ಕೈಕಾರಿಕೆಗಳ ಸ್ಥಾಪನೆಗೆ ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಕೈಗಾರಿಕಾ ಸಚಿವರ ನೇತೃತ್ವದಲ್ಲಿ ನಿಯಮಗಳ ರಚನೆಯಾಗುತ್ತಿದೆ .ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ ಎಂದರು.

  ಗಣರಾಜ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಬ್ರೇಕ್- ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ | Oneinda Kannada
   ಕೈಗಾರಿಕೆ ಪ್ರಾರಂಭ ಮಾಡುವವರಿಗೆ ಜಾಗ ಮಂಜೂರು

  ಕೈಗಾರಿಕೆ ಪ್ರಾರಂಭ ಮಾಡುವವರಿಗೆ ಜಾಗ ಮಂಜೂರು

  ಕೈಗಾರಿಕಾ ಬಡಾವಣೆಯಲ್ಲಿ ಜಾಗ ಪಡೆದು ಹಲವು ವರ್ಷಗಳಾದರೂ ಯಾವುದೇ ಚಟುವಟಿಕೆಗಳನ್ನು ನಡೆಸದೇ ಇರುವವರನ್ನು ಗುರುತಿಸಿ ನೋಟೀಸ್ ನೀಡಿ ಜಮೀನು ಹಿಂಪಡೆದು ನಿಜವಾಗಿಯೂ ಕೈಗಾರಿಕೆ ಪ್ರಾರಂಭ ಮಾಡುವವರಿಗೆ ಮಂಜೂರು ಮಾಡಲಾಗುವುದು ಎಂದು ಪ್ರೀತಂ ಗೌಡ ಹೇಳಿದರು.

  ಅಲ್ಲದೆ ರಾಜ್ಯ ಖನಿಜ ನಿಗಮದ ವತಿಯಿಂದ 25 ಲಕ್ಷ ನೀಡಲಾಗುತ್ತಿದ್ದು ಇತರ ದಾನಿಗಳ ಹಣವನ್ನೂ ಬಳಸಿ ದೇವಾಲಯವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

  English summary
  Hassan IT Park will be built in 14 Acres, around Rs 200 Cr is the Project Cost said Karnataka State Minerals Corporation Limited (KSMCL)president Lingamurthy.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X