ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ, 10 ಸಾವಿರ ರೂ. ತುರ್ತು ಪರಿಹಾರ

|
Google Oneindia Kannada News

ಹಾಸನ, ಆ.20: ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿಮಳೆಯಿಂದ 118 ಗ್ರಾಮಗಳಲ್ಲಿ ವಿವಿಧ ರೀತಿಯ ಹಾನಿ ಸಂಭವಿಸಿದೆ. ಇದುವರೆಗೂ 345 ಮನೆಗಳ ನಷ್ಟ ಆದ 43 ಕುಟುಂಬದವರಿಗೆ ತುರ್ತು 10,000 ರೂ. ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ.

Recommended Video

ಮತ್ತೆ ಸ್ವಚ್ಛ ನಗರ ಗೌರವ ಮುಡಿಗೆರಿಸಿಕೊಂಡ ಮೈಸೂರು! | Oneindia Kannada

ಮಳೆಯಿಂದ ಈಬಾರಿ 330 ಗ್ರಾಮಗಳಲ್ಲಿ ವಿದ್ಯತ್ ಸಂಪರ್ಕ ವ್ಯತ್ಯಯವಾಗಿತ್ತು. ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳು ಬಿದ್ದುಹೋಗಿದ್ದು, ಎಲ್ಲಾ ಗ್ರಾಮಗಳಲ್ಲೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಹಾಜರಿದ್ದರು.

ಈ ಬಾರಿ ಹೆಚ್ಚಾಗಿ ಮಳೆ ಬರದಿದ್ದರೂ ಅತಿಯಾದ ಗಾಳಿಯಿಂದ ಕಾಫಿ ತೋಟದಲ್ಲಿನನ ಮರಗಳು ಬಿದ್ದು ನಷ್ಟ ಉಂಟಾಗಿದೆ ಹಾಗೂ ಮಳೆಯಿಂದ ಕಾಫಿ ಕಾಯಿ ಉದುರಿದ್ದು, ಶೇ.33 ಕ್ಕಿಂತ ಹೆಚ್ಚು ನಷ್ಟ ಉಂಟಾಗಿದ್ದಲ್ಲಿ ಅಂತಹವರಿಗೆ ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.

 ಹಾಸನದಲ್ಲಿ ನಿರಂತರ ಮಳೆಯಿಂದ ಭಾರೀ ಹಾನಿ; ಶೀಘ್ರ ವರದಿಗೆ ಸೂಚನೆ ಹಾಸನದಲ್ಲಿ ನಿರಂತರ ಮಳೆಯಿಂದ ಭಾರೀ ಹಾನಿ; ಶೀಘ್ರ ವರದಿಗೆ ಸೂಚನೆ

ಮಳೆಯಿಂದ ಜಿಲ್ಲೆಯಲ್ಲಿ 99 ಶಾಲೆ, 31 ಅಂಗನವಾಡಿ ಕೇಂದ್ರಗಳು ಪ್ರಮುಖವಾಗಿ ನಷ್ಟ ಅನುಭವಿಸಿದ್ದು, ಅವುಗಳಿಗೆ ಎಸ್.ಡಿ.ಆರ್.ಎಫ್ ಮೂಲಕ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟರಲ್ಲಿ ಸಾಧ್ಯವಾಗದಿದ್ದಲ್ಲಿ ಪ್ರತ್ಯೇಕ ಪ್ರಸ್ತಾವನೆ ಕಳುಹಿಸಿ ಆಯಾ ಇಲಾಖೆಗಳ ಅನುದಾನದಿಂದ ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

 ರಾಜೀವ್ ಗಾಂಧಿ ಪೋರ್ಟಲ್

ರಾಜೀವ್ ಗಾಂಧಿ ಪೋರ್ಟಲ್

ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಕಳೆದ ಅತಿವೃಷ್ಠಿಯಲ್ಲಿ ಮನೆಹಾನಿಗೀಡಾಗಿ ದಾಖಲಾತಿಗೆ ಬಾಕಿಯಿರುವ ಮನೆಗಳನ್ನು ರಾಜೀವ್ ಗಾಂಧಿ ಪೋರ್ಟಲ್ ಮೂಲಕ ಡಾಟಾ ಎಂಟ್ರಿ ಮಾಡಲಾಗುತ್ತಿದೆ. ಅನುಮೋದನೆ ಸಿಕ್ಕ ನಂತರ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.

ಅತಿವೃಷ್ಠಿಯಿಂದ ಜೀವ ಕಳೆದುಕೊಂಡಿದ್ದ ಸಕಲೇಶಪುರ ತಾಲ್ಲೂಕಿನ ವ್ಯಕ್ತಿಗೆ 4 ಲಕ್ಷ ರೂ. ಪರಿಹಾರ ನೀಡಲಾಗಿದೆ ಹಾಗೂ ಎರೆಡು ಜಾನುವಾರುಗ ಜೀವ ಹಾನಿಯಾಗಿದ್ದು, ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.

 4,460 ಹೆಕ್ಟೇರ್ ಪ್ರದೇಶದಲ್ಲಿ ಹಾನಿ

4,460 ಹೆಕ್ಟೇರ್ ಪ್ರದೇಶದಲ್ಲಿ ಹಾನಿ

ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ 4,460 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯುಂಟಾಗಿದೆ. ಹಲವೆಡೆ ಭಾಗ ಮೆಕ್ಕೆ ಜೋಳ ಮತ್ತು ಸಕಲೇಶಪುರ ತಾಲ್ಲೂಕಿನ ಕೆಲವುಕಡೆ ಭತ್ತ ಹಾನಿಗೀಡಾಗಿದೆ ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ 940 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ ಎಂದರಲ್ಲದೆ, 13,413 ಹೆಕ್ಟೇರ್‍ಗೆ ಪರಿಣಾಮ ಬೀರಿದೆ ಎಂದು ತಾತ್ಕಾಲಿಕವಾಗಿ ಗುರುತಿಸಲಾಗಿದೆ ಎಂದು ಆರ್. ಗಿರೀಶ್ ಅವರು ಮಾಹಿತಿ ನೀಡಿದರು.

ಅತಿಯಾದ ಗಾಳಿಯಿಂದ ಕಾಫಿ ತೋಟದಲ್ಲಿನನ ಮರಗಳು ಬಿದ್ದು ನಷ್ಟ ಉಂಟಾಗಿದೆ ಹಾಗೂ ಮಳೆಯಿಂದ ಕಾಫಿ ಕಾಯಿ ಉದುರಿದ್ದು, ಶೇ.33 ಕ್ಕಿಂತ ಹೆಚ್ಚು ನಷ್ಟ ಉಂಟಾಗಿದ್ದಲ್ಲಿ ಅಂತಹವರಿಗೆ ಪರಿಹಾರ ನಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.

 ವಾಡಿಕೆಗಿಂತ ಅಧಿಕ ಮಳೆಯಾಗಿದೆ

ವಾಡಿಕೆಗಿಂತ ಅಧಿಕ ಮಳೆಯಾಗಿದೆ

ಈ ಜಿಲ್ಲೆಯಲ್ಲಿ ಆ. 2 ರಿಂದ 8ರವರೆಗೆ ಒಂದು ವಾರದಲ್ಲಿ ಸಕಲೇಶಪುರ ತಾಲ್ಲೂಕಿನಲ್ಲಿ ಶೇ.442 ಮಿ.ಮೀ. ನಷ್ಟು ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನಲ್ಲಿ ಶೇ.306 ಮಿ.ಮೀ., ಹಾಸನ ತಾಲ್ಲೂಕಿನಲ್ಲಿ ಶೇ.252 ಮಿ.ಮೀ., ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶೇ.162 ಮಿ.ಮೀ., ಬೇಲೂರಿನಲ್ಲಿ ಶೇ.419 ಮಿ.ಮೀ. ಹಾಗೂ ಆಲೂರು ತಾಲ್ಲೂಕಿನಲ್ಲಿ ಶೇ.347 ಮಿ.ಮೀ. ನಷ್ಟು ಅಧಿಕ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು.

 ಹೇಮಾವತಿಯಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ

ಹೇಮಾವತಿಯಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ

ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ 11,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಈಗಾಗಲೇ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ನಗರಪ್ರದೇಶದಲ್ಲಿ ಸುಮಾರು 150 ಕಿ.ಲೋ. ಮೀಟರ್‍ನಷ್ಟು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 426 ಕಿಲೋ ಮೀಟರ್‍ನಷ್ಟು ರಸ್ತೆಗಳು ಹಾಳಾಗಿವೆ ಎಂಬ ಮಾಹಿತಿ ಬಂದಿದೆ ಎಂದು ಆರ್. ಗಿರೀಶ್ ತಿಳಿಸಿದರು.

English summary
Hassan district recorded Heavy Rainfall in August month. A Rs 10000 as Emergency relief fund distributed to needy said DC R Girish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X