ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಸೀಕೆರೆ: ತಾ.ಪಂ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ರೊಹಿಣಿ

By Mahesh
|
Google Oneindia Kannada News

ಹಾಸನ, ಜುಲೈ 17: ಹಾಸನದ ಜಿಲ್ಲಾಧಿಕಾರಿಯಾಗಿ ಮತ್ತೆ ಅಧಿಕಾರಕ್ಕೆ ಮರಳುತ್ತಿದ್ದಂತೆ ರೋಹಿಣಿ ಸಿಂಧೂರಿ
ಅವರು ಕಾಮಗಾರಿಗೆ ವೇಗದ ಚಾಲನೆ ನೀಡಿದ್ದಾರೆ. ಅರಕಲಗೂಡಿನ ನಂತರ ಅರಸೀಕೆರೆಯಲ್ಲಿ ತಾಲ್ಲೂಕು ಮಟ್ಟದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಸಭೆಯಲ್ಲಿ ಪಾಲ್ಗೊಂಡು, ದಾಖಲೆ ಪ್ರಮಾಣದಲ್ಲಿ ಅಹವಾಲುಗಳನ್ನು ಸ್ವೀಕರಿಸಿದರು.

ಶಾಸಕರಾದ ಕೆ.ಎಮ್. ಶಿವಲಿಂಗೇಗೌಡ ಅವರು ಸಭೆಯಲ್ಲಿ ಹಾಜರಿದ್ದು, ಸಾರ್ವಜನಿಕರ ಕೇಳಿಬಂದ ಕುಂದುಕೊರತೆಗಳ ಬಗ್ಗೆ ಸ್ವತಃ ವಿವರಣೆಗಳನ್ನು ನೀಡಿ, ಕೆಲ ಸಮಸ್ಯೆಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಉತ್ತರವನ್ನು ನೀಡಿದರು, ಅಲ್ಲದೇ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ಬೇಡಿಕೆ ಮಂಡಿಸಿದರು.

ಅರಕಲಗೂಡಿನಲ್ಲಿ 200 ಅರ್ಜಿ ಸ್ವೀಕರಿಸಿದ ರೋಹಿಣಿ ಸಿಂಧೂರಿ!ಅರಕಲಗೂಡಿನಲ್ಲಿ 200 ಅರ್ಜಿ ಸ್ವೀಕರಿಸಿದ ರೋಹಿಣಿ ಸಿಂಧೂರಿ!

ಇದೇ ರೀತಿ ಜಿಲ್ಲಾ ಪಂಚಾಯತಿ ಸದಸ್ಯರಾದ ಪಟೇಲ್ ಶಿವಪ್ಪ ಅವರು ಸಾರ್ವಜನಿಕರ ಪ್ರಮುಖ ಸಮಸ್ಯೆಗಳ ಕುರಿತು ನಾಲ್ಕು ಮನವಿಗಳನ್ನು ಸಲ್ಲಿಸಿ ಶೀಘ್ರ ಬಗೆಹರಿಸಿ ಕೊಡುವಂತೆ ಕೋರಿದರು.

ಜಿಲ್ಲಾಧಿಕಾರಿಯವರ ಜನಸಂಪರ್ಕ ಸಭೆಯ ನಿರ್ಧಾರವನ್ನು ಪ್ರಶಂಸಿಸಿದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ಭೂಮಿಗೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರೇ ಬಗೆಹರಿಸಬೇಕು. ಹಾಗಾಗಿ ಸರ್ವೆ, ಪೋಡಿ, ತಿದ್ದುಪಡಿ, ಹದ್ದು ಬಸ್ತು ಖಾತೆ ವರ್ಗಾವಣೆ ಮತ್ತಿತರ ಕುಂದುಕೊರತೆಗಳನ್ನು ಆದಷ್ಟು ಬೇಗ ಬಗೆಹರಿಸಿ ಕೊಟ್ಟು ಜನರ ಸಂಕಷ್ಟವನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು.

ಬೇಕಿರುವ ಅನುದಾನ ಒದಗಿಸಲಾಗುವುದು

ಬೇಕಿರುವ ಅನುದಾನ ಒದಗಿಸಲಾಗುವುದು

ರಸ್ತೆ, ಸ್ಮಶಾನ ಭೂಮಿ, ಅಕ್ರಮ ಸಕ್ರಮ, ಜಮೀನು ಮಂಜೂರಾತಿ ಸೇರಿದಂತೆ ಹಲವು ರೀತಿಯ ಮನವಿಗಳನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ವೀಕರಿಸಿದರು. 250 ಕ್ಕೂ ಹೆಚ್ಚು ಅಹವಾಲುಗಾಳನ್ನು ಜಿಲ್ಲಾಧಿಕಾರಿಯವರು ಆಲಿಸಿದರು.

ನಗರದ ಒಳ ಒಳಚರಂಡಿ ಸಮಸ್ಯೆ ಕಳೆದ ನಾಲ್ಕು ವರ್ಷಗಳಿಂದ ಹಾಗೆ ಉಳಿದಿದೆ ಭೂಮಿ ಪಡೆದ ಪರಿಹಾರ ದೊರೆತಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ, ಅದನ್ನು ಸರಿಪಡಿಸಿ, ಎಂದು ನಗರದ ನಿವಾಸಿಗಳು ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ಯೋಜನೆ ನೆನೆಗುದಿಗೆ ಬಿದ್ದಿದೆ ಭೂಸ್ವಾಧೀನಕ್ಕೆ ಅಗತ್ಯವಿರುವ ದರನಿಗದಿ ಪ್ರಕ್ರಿಯೆಯನ್ನು ಮುಗಿಸಿದ್ದಲ್ಲಿ ಬೇಕಿರುವ ಅನುದಾನ ಒದಗಿಸಲಾಗುವುದು ಎಂದರು.

ವಿಳಂಬವಾಗಿರುವ ಬಾಣವಾರ ರಸ್ತೆ ಕಾಮಗಾರಿ

ವಿಳಂಬವಾಗಿರುವ ಬಾಣವಾರ ರಸ್ತೆ ಕಾಮಗಾರಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯವರು ಪ್ರತಿಕ್ರಿಯೆ ನೀಡಿ ಈ ಬಗ್ಗೆ ರಾಜ್ಯ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಲಭ್ಯವಿರುವ ಅನುದಾನ ಬಗ್ಗೆ ಮಾಹಿತಿ ಪಡೆದು ಶೀಘ್ರವೇ ಭೂಮಿಗೆ ಪರಿಹಾರ ದರ ನಿಗದಿ ಪಡಿಸಿ ಕೊಡುವುದಾಗಿ ಹೇಳಿದರು.

ಹಲವು ಸಾರ್ವಜನಿಕ ಸಮಸ್ಯೆಗಳು ನಗರ ಸ್ಥಳೀಯ ಸಂಸ್ಥೆಗಳ ಕೊರತೆಗಳ ಬಗ್ಗೆ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರೇ ಪೂರಕ ಪ್ರತಿಕ್ರಿಯೆ ಹಾಗೂ ವಿವರಗಳನ್ನು ನೀಡಿದರು, ಕೆಲವು ಅರ್ಜಿಗಳಿಗೆ ಅವರೇ ಉತ್ತರವನ್ನು ನೀಡಿದರು.

ನಗರದ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿಸಲಾಗುವುದು. ವಿಳಂಬವಾಗಿರುವ ಬಾಣವಾರ ರಸ್ತೆ ಕಾಮಗಾರಿ ಇದೀಗ ಪ್ರಾರಂಭವಾಗಿದ್ದು 148.18 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದರು.

ಕಾಲಮಿತಿಯೊಳಗೆ ಅರ್ಜಿ ಇತ್ಯರ್ಥ ಪಡಿಸಬೇಕಿದೆ

ಕಾಲಮಿತಿಯೊಳಗೆ ಅರ್ಜಿ ಇತ್ಯರ್ಥ ಪಡಿಸಬೇಕಿದೆ

ಜಿಲ್ಲಾಧಿಕಾರಿಯವರು ಮಾತನಾಡಿ ವಿವಾದಗಳಿಲ್ಲದ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸಬೇಕಿದೆ ಉಳಿದವುಗಳನ್ನು ಕಾನೂನಿನ ವ್ಯಾಪ್ತಿಯೊಳಗೆ ನಿಯಮಾನುಸಾರ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದುರಸ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಬಂದಿವೆ, ಸ್ವತಂತ್ರ ಬಂದಾಗಿನಿಂದ ಇರುವ ಪ್ರಕರಣಗಳೂ ಇವೆ ಎಲ್ಲವನ್ನು ಅನುಭವದ ಆಧಾರದ ಮೇಲೆ ಹಾಗೂ ಪಹಣಿ ಮ್ಯುಟೇಷನ್ ಪ್ರತಿ ಆದರಿಸಿ ದುರಸ್ತಿ ಮಾಡಿಕೊಡಿ ಎಂದು ಸಾರ್ವಜನಿಕರು ಹಾಗೂ ಶಾಸಕರು ಅವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯೆಯಿಂದ ಜಿಲ್ಲಾಧಿಕಾರಿ ನಿಯಮದಂತೆ ಜಮೀನು ದುರಸ್ತಿ ವೇಳೆ 1-5 ಪ್ರಕ್ರಿಯೆ ನಡೆಸಬೇಕು. ಈ ಪ್ರಕ್ರಿಯೆಯನ್ನು ಸರ್ಕಾರಿ ಹಂತದಲ್ಲಿ ಸರಳೀಕರಣಗೊಳಿಸಿದರೆ ಸೂಕ್ತ ಎಂದರು.

ಶಾಸಕರಾದ ಕೆ.ಎಮ್.ಶಿವಲಿಂಗೇಗೌಡ ಅವರು ಮಾತನಾಡಿ

ಶಾಸಕರಾದ ಕೆ.ಎಮ್.ಶಿವಲಿಂಗೇಗೌಡ ಅವರು ಮಾತನಾಡಿ

ಶಾಸಕರಾದ ಕೆ.ಎಮ್.ಶಿವಲಿಂಗೇಗೌಡ ಅವರು ಮಾತನಾಡಿ ಅರಸೀಕೆರೆ ತಾಲ್ಲೂಕು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ, ನಿರಂತರ ಬರದಿಂದ ಜನರ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಹದಗೆಟ್ಟಿದ್ದು ಅದನ್ನು ಸುಧಾರಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಅರಸೀಕೆರೆ ತಾಲ್ಲೂಕಿನ ಸುಮಾರು 30 ಸಾವಿರ ಯುವಕರು ಬೆಂಗಳೂರಿನ ವಸ್ತ್ರೋದ್ಯಮ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದಾರೆ. ಅವರೆಲ್ಲರೀಗೂ ಇಲ್ಲಿ ಉದ್ಯೋಗ ಸೃಷ್ಟಿ ಆಗಬೇಕು ಸ್ಥಳೀಯವಾಗಿ ಕಾರ್ಖಾನೆಗಳು ಬರಬೇಕು ಅದಕ್ಕೆ ಉದ್ಯಮಿಗಳಿಗೆ ಉಚಿತವಾಗಿ ಜಾಗ ಒದಗಿಸಬೇಕು.
ಹಾಗಾಗಿ ಅರಸೀಕೆರೆ ತಾಲ್ಲೂಕಿನ ರಂಗಾಪುರ ಕಾವಲು ಸರ್ವೇ ನಂಬರ್ ನಲ್ಲಿ ಲಭ್ಯವಿರುವ 500 ಎಕರೆ ಸರ್ಕಾರಿ ಜಮೀನನ್ನು ಕೈಗಾರಿಕಾ ಕೇಂದ್ರ ಸ್ಥಾಪನೆಗೆ ಕಾಯ್ದಿರಿಸಿ ಆದೇಶ ಮಾಡಿಕೊಡಬೇಕು ಎಂದು ಶಾಸಕರು ಮನವಿ ಮಾಡಿದರು.

ವ್ಯವಸ್ಥಿತವಾದ ಮಾರುಕಟ್ಟೆಯ ಸ್ಥಾಪನೆ

ವ್ಯವಸ್ಥಿತವಾದ ಮಾರುಕಟ್ಟೆಯ ಸ್ಥಾಪನೆ

ಇದೇ ರೀತಿ ಅರಸೀಕೆರೆ ನಗರದಲ್ಲಿ ವ್ಯವಸ್ಥಿತವಾದ ಮಾರುಕಟ್ಟೆಯ ಸ್ಥಾಪನೆಯಾಗಬೇಕು ಇದಕ್ಕಾಗಿ ನಾಲ್ಕು ಎಕರೆ ಜಾಗದ ಅಗತ್ಯವಿದ್ದು ಅದನ್ನು ಮಂಜೂರು ಮಾಡಬೇಕು ಎಂದು ಶಾಸಕರು ಕೋರಿದರು ಇದೇ ರೀತಿ ಅರಸೀಕೆರೆಯಲ್ಲಿ ಕೃಷಿ ಅತ್ಯಂತ ಪ್ರಧಾನವಾಗಿದ್ದು ರೈತರು ಬೆಳೆಯುವ ತರಕಾರಿಗಳನ್ನು ಸುರಕ್ಷಿತವಾಗಿರಿಸಲು ಅತ್ಯಾಧುನಿಕ ಶೀತಲಗೃಹವನ್ನು ನಿರ್ಮಾಣ ಮಾಡಬೇಕು ಎಂಬುದು ತಮ್ಮ ಕನಸಾಗಿದ್ದು ಅದನ್ನು ಶೀಘ್ರವಾಗಿ ಮಾಡುವುದಾಗಿ ಹೇಳಿದರು.

ಎತ್ತಿನ ಹೊಳೆ ಯೋಜನೆ ಜಾರಿ

ಎತ್ತಿನ ಹೊಳೆ ಯೋಜನೆ ಜಾರಿ

ಎತ್ತಿನ ಹೊಳೆ ಯೋಜನೆ ಜಾರಿಯಿಂದ ಅರಸೀಕೆರೆ ತಾಲೂಕಿನ ಸಣ್ಣ ನೀರಾವರಿ 34 ಕೆರೆಗಳು ಹಾಗೂ ಇತರ ಕೆರೆಗಳಿಗೆ ನೀರು ಹರಿಯಲಿದೆ ಇದರಿಂದ ತಾಲ್ಲೂಕಿನ ನೀರಿನ ಸಮಸ್ಯೆ ಬಹುತೇಕ ಬಗೆ ಹರಿಯಲಿದೆ ಹಾಗಾಗಿ ಆದಷ್ಟು ಬೇಗ ಇದು ಅನುಷ್ಟಾನಗೊಳ್ಳಬೇಕು ಅದಕ್ಕೂ ಮುನ್ನ ಸರ್ವೆ ನಡೆಸಿ ಭೂ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು. ಅದಕ್ಕೆ ವಿಶೇಷ ಭೂಸ್ವಾಧೀನಾಧಿಕಾರಿ ನೇಮಕದ ಅಗತ್ಯವಿದ್ದು ಶೀಘ್ರದಲ್ಲೇ ಸರ್ಕಾರದ ಹಂತದಲ್ಲಿ ಅಧಿಕಾರಿಯನ್ನು ನೇಮಕ ಮಾಡಿಸಿಕೊಂಡು ಬರುವುದಾಗಿ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎತ್ತಿನಹಳ್ಳ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆಗೆ ಹಣದ ಕೊರತೆ ಇಲ್ಲ ಭೂಸ್ವಾಧೀನಾಧಿಕಾರಿ ನೇಮಕದ ನಂತರ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದರು.

 573 ಮನವಿಗಳು ಸ್ವೀಕಾರಗೊಂಡವು

573 ಮನವಿಗಳು ಸ್ವೀಕಾರಗೊಂಡವು

ಸಭೆಯ ನಂತರ ಮಾತನಾಡಿದ ಜಿಲ್ಲಾಧಿಕಾರಿ ಅವರು ಎಲ್ಲಾ ತಾಲ್ಲೂಕುಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಅಹವಾಲು ಸ್ವೀಕಾರ ಸಭೆಗಳನ್ನು ನಡೆಸಲಾಗಿದೆ ಅರಸಿಕೆರೆಯಲ್ಲಿ ಅತೀ ಹೆಚ್ಚು ಅರ್ಜಿಗಳು ಬಂದಿವೆ ಎಲ್ಲಾ ಅರ್ಜಿಗಳನ್ನು ಗಣಕೀಕರಣಗೊಳಿಸಿ ಕಾಲಮಿತಿಯೊಳಗೆ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿವಾದ ರಹಿತವಾದ ಅರ್ಜಿಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸಲಾಗುವುದು ಎಂದರು.

ಹರಿದುಬಂದ ಅರ್ಜಿಗಳ ಮಹಾಪೂರ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅರಸೀಕೆರೆಯಲ್ಲಿ ನಡೆಸಿದ ಸಾರ್ವಜನಿಕ ದೂರು ಅರ್ಜಿಗಳ ಸ್ವೀಕಾರ ಸಭೆಯಲ್ಲಿ ಅರ್ಜಿಗಳ ಮಹಾಪೂರವೇ ಹರಿದುಬಂತು ಇಂದಿನ ಕಾರ್ಯಕ್ರಮದಲ್ಲಿ 573 ಮನವಿಗಳು ಸ್ವೀಕಾರಗೊಂಡವು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನಡೆದ ಕುಂದುಕೊರತೆ ಸಭೆಗಳಿಗೆ ಹೋಲಿಸಿದರೆ ಇದು ಅತ್ಯಂತ ಗರಿಷ್ಠವಾಗಿದೆ.

English summary
Hassan DC Rohini Sinduri continued Taluk level meeting in Arsikere and received many complaints and grievances related to many infrastructure and agriculture issues. Rohini also urged Taluk Panchayat members to speed up the progressive development works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X