• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರ ನೀಡಿರುವ ಇ ಆಡಳಿತ ಅಸ್ತ್ರ ಪ್ರಯೋಗಿಸಿದ ಡಿಸಿ ರೋಹಿಣಿ

By Mahesh
|
   ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯಿಂದ ಸಾರ್ವಜನಿಕ ತೊಂದರೆಗಳ ಪರಿಹಾರಕ್ಕೆ ಹೊಸ ಐಡಿಯಾ | Oneindia Kannada

   ಹಾಸನ, ಜನವರಿ 02: ಒಂದೇ ಸೂರಿನಡಿ 50ಕ್ಕೂ ಹೆಚ್ಚು ಸರ್ಕಾರಿ ಇಲಾಖೆ/ ಕಚೇರಿಗಳಿಗೆ ಸಂಬಂಧಿಸಿದ ಸಾರ್ವಜನಿಕ ದೂರು/ ಕುಂದುಕೊರತೆಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವೆಬ್ ಪೋರ್ಟಲ್‍ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಚಾಲನೆ ನೀಡಿದರು.

   ಕುಂದುಕೊರತೆಗಳ ದೂರು ನೀಡಲು ಜನಹಿತ APP

   ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ವೆಬ್ ಪೋರ್ಟಲ್ ಬಳಕೆ ಕುರಿತಂತೆ ಸಾರ್ವಜನಿಕರು ಇನ್ನು ಮುಂದೆ ಅರ್ಜಿ ಹಿಡಿದು ಕಚೇರಿಗೆ ಅಲೆಯುವ, ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ.

   ಕಂಪ್ಯೂಟರ್/ ಸ್ಮಾರ್ಟ್‍ಫೋನ್ ಬಳಕೆ ಗೊತ್ತಿದ್ದರೆ ಆನ್‍ಲೈನ್ ಮೂಲಕವೂ ದೂರು/ ಕುಂದುಕೊರತೆಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ವೆಬ್ ಪೋರ್ಟಲ್‍ಗೆ 'ಸ್ಪಂದನ' ಎಂದು ಹೆಸರಿಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

   ಸ್ಪಂದನ ವೆಬ್ ಪೋರ್ಟಲ್‍ನ ಆಕರ್ಷಕ ಲೋಗೋ ಮತ್ತು ಟ್ಯಾಗ್ ಲೈನ್ ಸ್ಪರ್ಧೆಯಲ್ಲಿ ಪ್ರಗತಿ ನಗರದ ಚಿತ್ರಕಲಾ ಶಿಕ್ಷಕರಾದ ಕೆ.ಎನ್. ಶಂಕರಪ್ಪ ಅವರು ಆಯ್ಕೆಯಾಗಿದ್ದಾರೆ. ಇವರು ಮಹಾಮಸ್ತಕಾಭಿಷೇಕದ ಹಾಗೂ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋವನ್ನು ಸಿದ್ದಪಡಿಸಿದ್ದಾರೆ.

   ಯಾವ ಯಾವ ಇಲಾಖೆಗಳಿಗೆ ಸಂಬಂಧಿಸಿದ ದೂರು

   ಯಾವ ಯಾವ ಇಲಾಖೆಗಳಿಗೆ ಸಂಬಂಧಿಸಿದ ದೂರು

   ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ರೇಷ್ಮೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ, ಪಶುಸಂಗೋಪನೆ, ಆಯುಷ್ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ, ಸಾಮಾಜಿಕ ಅರಣ್ಯ, ಸಹಕಾರ ಸಂಘಗಳ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ..... ಹೀಗೆ 50ಕ್ಕೂ ಹೆಚ್ಚು ಇಲಾಖೆ/ ಕಚೇರಿಗಳಿಗೆ ಸಂಬಂಧಿಸಿದ ದೂರು ಅರ್ಜಿಯನ್ನು ಸಾರ್ವಜನಿಕರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

   ಈ ವ್ಯವಸ್ಥೆ ಪಾರದರ್ಶಕತೆಯಿಂದ ಕೂಡಿದೆ

   ಈ ವ್ಯವಸ್ಥೆ ಪಾರದರ್ಶಕತೆಯಿಂದ ಕೂಡಿದೆ

   ಈ ವ್ಯವಸ್ಥೆ ಪಾರದರ್ಶಕತೆಯಿಂದ ಕೂಡಿದ್ದು ಸಾರ್ವಜನಿಕರ ಅಹವಾಲು ಆಲಿಕೆಗೆ ಅನುಕೂಲವಾಗಲಿದೆ. ದಾಖಲಾಗುವ ದೂರು/ ಕುಂದುಕೊರತೆಗಳ ಅರ್ಜಿಗಳ ವಿಲೇ ಸುಸೂತ್ರವಾಗಿ ನಡೆಯುತ್ತಿದೆಯಾ ಎಂಬುವುದರ ಬಗ್ಗೆ ನಿಗಾ ವಹಿಸಲಾಗುವುದು. ಈ ಬಗ್ಗೆ ಗಮನಹರಿಸಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಅಲ್ಲದೆ, ಈ ಕುರಿತ ಪ್ರಗತಿ ಪರಿಶೀಲನೆಯನ್ನು ಆಗ್ಗಿಂದಾಗ್ಗೆ ನಡೆಸಲಾಗುವುದು ಎಂದು ತಿಳಿಸಿದರು.

   ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ದೂರು ಸಲ್ಲಿಸಬಹುದು

   ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ದೂರು ಸಲ್ಲಿಸಬಹುದು

   ಜಿಲ್ಲಾ ಆಡಳಿತವು ನ್ಯಾಷನಲ್ ಇನ್ಫರ್ಮೇಟಿಕ್ ಸೆಂಟರ್ (ಎನ್.ಐ.ಸಿ.) ಮೂಲಕ ರೂಪಿಸಿರುವ ವೆಬ್ ಪೋರ್ಟಲ್ ತಂತ್ರಾಂಶವು ಬಳಕೆದಾರರ ಸ್ನೇಹಿ ಆಗಿದ್ದು, ಕಂಪ್ಯೂಟರ್ ಜೊತೆಗೆ ಸ್ಮಾರ್ಟ್‍ಫೋನ್ ಮೂಲಕವೂ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ದೂರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

   ಆನ್‍ಲೈನ್ ಮೂಲಕ ದೂರು ಅರ್ಜಿ ಸಲ್ಲಿಸಿದ ಬಳಿಕ ದೂರುದಾರರಿಗೆ (ದೂರಿನ ಸಂಖ್ಯೆಯೊಂದಿಗೆ) ಹಾಗೂ ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮುಖ್ಯಸ್ಥರಿಗೆ ಎಸ್.ಎಂ.ಎಸ್. ಸಂದೇಶ ತಲುಪಲಿದೆ. ಅರ್ಜಿ ಸಕಾಲದಲ್ಲಿ ವಿಲೇ ಆಗದಿದ್ದರೆ ಇಲಾಖಾ ಕಚೇರಿ ಮುಖ್ಯಸ್ಥರಿಗೆ ಮತ್ತು ವಿಷಯ ನಿರ್ವಾಹಕರಿಗೆ ನೆನಪಿಸುವ ಸಂದೇಶ ಹೋಗಲಿದೆ.

   ತ್ವರಿತವಾಗಿ ಸಾರ್ವಜನಿಕ ದೂರುಗಳಿಗೆ ಪರಿಹಾರ

   ತ್ವರಿತವಾಗಿ ಸಾರ್ವಜನಿಕ ದೂರುಗಳಿಗೆ ಪರಿಹಾರ

   ಸಾರ್ವಜನಿಕರು ತಾವು ಸಲ್ಲಿಸಿರುವ ಅರ್ಜಿ ಸಂಬಂಧ ಇಲಾಖಾ/ ಕಚೇರಿಯಿಂದ ಕೈಗೊಂಡ ಕ್ರಮ ಕುರಿತು ಅರಿಯಲು ದೂರು ಅರ್ಜಿ ಸ್ಥಿತಿ ಪರಿಶೀಲನೆ ಮೆನು ಕ್ಲಿಕ್ಕಿಸಿದರೇ ಮಾಹಿತಿ ಲಭ್ಯವಾಗಲಿದೆ. ಸಕಾಲದಲ್ಲಿ ಸಲ್ಲಿಸಿದ ಅರ್ಜಿಗೆ ಪರಿಹಾರ ಒದಗಿಸದಿದ್ದರೆ ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಮೂಲಕ ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ಅವಕಾಶ ಕಲ್ಪಿಸಲಾಗಿದೆ.

   ತ್ವರಿತವಾಗಿ ಸಾರ್ವಜನಿಕ ದೂರುಗಳಿಗೆ ಪರಿಹಾರ ಕಂಡುಕೊಳ್ಳಲು ಈ ವ್ಯವಸ್ಥೆ ನೆರವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

   ಅರ್ಜಿ ಸಲ್ಲಿಕೆ ಹೇಗೆ?

   ಅರ್ಜಿ ಸಲ್ಲಿಕೆ ಹೇಗೆ?

   ವೆಬ್ ಪೋರ್ಟಲ್(ಮುಖಪುಟ)ದಲ್ಲಿನ ದೂರು ಅರ್ಜಿಯ ನೋಂದಣಿ ಮೇನು ಕ್ಲಿಕ್ಕಿಸಿ ದೂರುದಾರರ ವಿವರ, ಮೊಬೈಲ್ ಸಂಖ್ಯೆ, ದೂರಿನ ಸ್ವರೂಪ, ಸಂಬಂಧಪಟ್ಟ ಇಲಾಖೆ/ ಕಚೇರಿ ವಿವರಗಳನ್ನು ನಮೂದಿಸಿ ಪಿ.ಡಿ.ಎಫ್ ಫಾಮ್ರ್ಯಾಟ್‍ನಲ್ಲಿ (ಗರಿಷ್ಠ 5 ಎಂಬಿ) ಅರ್ಜಿಯನ್ನು ಲಗತ್ತಿಸಿ ಸಲ್ಲಿಸಬೇಕು. ತದನಂತರ, ಅರ್ಜಿದಾರರು ನೊಂದಾಯಿಸಿದ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ (ದೂರಿನ ಸಂಖ್ಯೆಯೊಂದಿಗೆ) ಸಂದೇಶ ಬರಲಿದೆ.

   ಸಲ್ಲಿಕೆಯಾದ ಅರ್ಜಿಯ ವಿವರವನ್ನು ಒಳಗೊಂಡ ಹಾರ್ಡ್‍ಕಾಪಿ ಮುದ್ರಿಸಿಕೊಳ್ಳಲು ಅವಕಾಶವಿದೆ.

   ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

   English summary
   Hassan DC Rohini Sindhuri has strengthened the e governance in the district by introducing the Public Grievance Redressal System. It enables citizens to easily register and track their complaints/ suggestions.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X