ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಕಲಗೂಡಿನಲ್ಲಿ 200 ಅರ್ಜಿ ಸ್ವೀಕರಿಸಿದ ರೋಹಿಣಿ ಸಿಂಧೂರಿ!

By Mahesh
|
Google Oneindia Kannada News

ಹಾಸನ ಜುಲೈ 14: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅರಕಲಗೂಡಿನಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ದೂರು ಅರ್ಜಿಗಳನ್ನು ಸ್ವೀಕರಿಸಿದರು. ಶಿಕ್ಷಕರ ಭವನದಲ್ಲಿ ಸುಮಾರು 4 ಗಂಟೆಗಳಿಗೂ ಅಧಿಕ ಕಾಲ ನಡೆದ ಸಭೆಯಲ್ಲಿ 200 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ವೆ, ಪೋಡಿ ದುರಸ್ತಿ, ಭೂ ಮಂಜೂರಾತಿ, ತಿದ್ದುಪಡಿ ಸೇರಿದಂತೆ ಹಲವಾರು ಮಂದಿ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ವೈಯಕ್ತಿಕ ಮನವಿಯನ್ನು ಸಲ್ಲಿಸಿದರು.

ಹಾಸನ : ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಿದ ರೋಹಿಣಿ ಸಿಂಧೂರಿಹಾಸನ : ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಿದ ರೋಹಿಣಿ ಸಿಂಧೂರಿ

ಆಶ್ರಯ ಮನೆ ಒದಗಿಸಿ, ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿ, ಗ್ರಾಮದ ರಸ್ತೆ ದುರಸ್ತಿಗೊಳಿಸಿ, ಜಮೀನಿಗೆ ದಾರಿ ಬಿಡಿಸಿಕೊಡಿ, ವಿದ್ಯುತ್ ಸಂಪರ್ಕ ಒದಗಿಸಿಕೊಡಿ, ಅರಕಲಗೂಡಿನಲ್ಲಿ ಪಹಣಿ ಸ್ವೀಕಾರಕ್ಕೆ ದಿನಗಟ್ಟಲೇ ಕಾಯಬೇಕಾಗಿದ್ದು ಹೆಚ್ಚುವರಿಯಾಗಿ ಒಂದು ಹಾಗೂ ಆಧಾರ್ ಕಾರ್ಡ್ ವಿತರಣಾ ಕೇಂದ್ರವನ್ನು ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು.

ಅರಸೀಕೆರೆ: ತಾ.ಪಂ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ರೊಹಿಣಿಅರಸೀಕೆರೆ: ತಾ.ಪಂ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ರೊಹಿಣಿ

ಪ್ರತಿ 2-3 ತಿಂಗಳಿಗೊಮ್ಮೆ ಎಲ್ಲಾ ತಾಲ್ಲೂಕುಗಳಲ್ಲಿ ಇಂಥ ಸಭೆ ಹಮ್ಮಿಕೊಳ್ಳಲಾಗಿದೆ. ಒಂದು ವೇಳೆ ಸಭೆ ನಡೆಸದಿದ್ದರೆ ಸಾರ್ವಜನಿಕರು ತಹಶೀಲ್ದಾರರನ್ನು ಭೇಟಿ ಮಾಡಿ ಸಭೆಯಲ್ಲಿ ನೀಡಿದ ಅರ್ಜಿಗಳ ಬಗ್ಗೆ ಕೈಗೊಂಡ ಕ್ರಮಗಳ ವಿವರ ಪಡೆಯಬಹುದು. ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರು ಕಂದಾಯ ಪರಿ ವೀಕ್ಷಕರು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಏತ ನೀರಾವರಿ ಯೋಜನೆ ಕುರಿತ ಅರ್ಜಿ

ಏತ ನೀರಾವರಿ ಯೋಜನೆ ಕುರಿತ ಅರ್ಜಿ

ಹುಚ್ಚನ ಕೊಪ್ಪಲು ಏತ ನೀರಾವರಿ ಯೋಜನೆ ಮತ್ತು ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ ಯೋಜನೆಗಳಿಗೆ ಭೂಮಿ ಪರಿಹಾರ ದೊರೆಯದೆ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಪಂಚಾಯತಿ ಸದಸ್ಯರಾದ ರತ್ನಮ್ಮಲೋಕೇಶ್ ಮನವಿ ಸಲ್ಲಿಸಿದರು.

ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಯ ಮಟ್ಟದಲ್ಲಿದ್ದು ಸರಿಪಡಿಸಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಹಿಂದೆ ನಮ್ಮ ಪೂರ್ವಜರು ಶಾಲೆಗೆ ನೀಡಿರುವ ನೀಡಿರುವ ಜಮೀನು ಬಿಟ್ಟುಕೊಡಿ ಹಲವಾರು ರೀತಿಯ ಅರ್ಜಿಗಳು ಅರಕಲಗೂಡಿನ ಅಹವಾಲು ಸ್ವೀಕಾರ ಸಭೆಯಲ್ಲಿ ಬಂದವು
ಎಲ್ಲ ಮನವಿಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಬಂದಿರುವ ಅರ್ಜಿಗಳಲ್ಲಿ ವಿವಾದ ರಹಿತ ವಾದವುಗಳನ್ನು ಆದಷ್ಟು ಶೀಘ್ರವೇ ಬಗೆಹರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸರ್ವೇ ಕಾರ್ಯಕ್ಕೆ ಸಂಬಂಧಿಸಿದಂತೆ ಮನವಿ

ಸರ್ವೇ ಕಾರ್ಯಕ್ಕೆ ಸಂಬಂಧಿಸಿದಂತೆ ಮನವಿ

ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರು ಕುಂದುಕೊರತೆ ಸಭೆಯಲ್ಲಿ ಹೆಚ್ಚಾಗಿ ಸರ್ವೇ ಕಾರ್ಯಕ್ಕೆ ಸಂಬಂಧಿಸಿದಂತೆ ಮನವಿಗಳು ಬಂದಿವೆ ಏಕವ್ಯಕ್ತಿ ಕೋರಿಕೆ ದುರಸ್ತಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಒಂದೇ ಸರ್ವೇ ನಂಬರ್ ನ ಎಲ್ಲರೂ ಒಟ್ಟಾಗಿ ಅರ್ಜಿ ಸಲ್ಲಿಸಿದಲ್ಲಿ ಸರ್ವೇ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಉಳಿದಂತೆ ಸಭೆಯಲ್ಲಿ ಸಲ್ಲಿಕೆಯಾಗಿರುವ ಅಂತಹ ಸಮರ್ಪಕವಾದ ಅರ್ಜಿಗಳನ್ನು 7ದಿನಗಳ ಒಳಗಾಗಿ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ತಾಲ್ಲೂಕುಗಳಲ್ಲಿಯೇ ಸಾರ್ವಜನಿಕರ ಕುಂದುಕೊರತೆ ಸಭೆಗಳನ್ನು ನಡೆಸಲಾಗುತ್ತಿದೆ ಅರಕಲಗೂಡಿನಲ್ಲಿ 200 ಕ್ಕೂ ಹೆಚ್ಚು ಅರ್ಜಿ ಸ್ವೀಕಾರವಾಗಿದ್ದು ಎಲ್ಲವನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ಪಟ್ಟಣದ ರಸ್ತೆ ವಿಸ್ತರಣೆ ಬಗ್ಗೆ

ಪಟ್ಟಣದ ರಸ್ತೆ ವಿಸ್ತರಣೆ ಬಗ್ಗೆ

ಫಾರಮ್ 50 53 ಅರ್ಜಿಗಳ ವಿಲೇವಾರಿ ನಾಲೆಗೆ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಗೆ ಪರಿಹಾರ ಒಳಚರಂಡಿ ಕಾರ್ಯ ಪಟ್ಟಣದ ರಸ್ತೆ ವಿಸ್ತರಣೆ ವೇಳೆ ಕಡಿಮೆ ಜಾಗ ಬಳಸಿ ಮತ್ತಿತರ ರೀತಿಯ ಸಾರ್ವಜನಿಕ ಮನವಿಗಳು ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಿರುವ ಅನುಕೂಲ ಮಾಡಿಕೊಡಲಾಗುವುದು ಎಂದರು.

ಸಭೆಯಲ್ಲಿ ಭೂ ಭೂದಾಖಲೆಗಳ ಉಪ ನಿರ್ದೇಶಕರಾದ ಕೃಷ್ಣಕುಮಾರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಯಶ್ವಂತ್ ತಹಶೀಲ್ದಾರರಾದ ನಂದೀಶ್ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ|| ಯಶ್ವಂತ್ ಮತ್ತಿತರರು ಹಾಜರಿದ್ದರು.

English summary
Hassan DC Rohini Sinduri continued Taluk level meeting in Arkalgud and received more than 200 complaints and grievances. Rohini also urged members to speed up the progressive development works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X