ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ: ಜೆಡಿಎಸ್- ಕಾಂಗ್ರೆಸ್ ನಡುವೆ ಅಲ್ಲಿ ದೋಸ್ತಿ, ಇಲ್ಲಿ ಕುಸ್ತಿ

|
Google Oneindia Kannada News

ಹಾಸನ, ಸೆಪ್ಟೆಂಬರ್ 29: ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರುವ ಸೂಚನೆಗಳು ಕಾಣಿಸುತ್ತಿವೆ.

ಜಿಲ್ಲೆಯಲ್ಲಿ ಚಿಕ್ಕಪುಟ್ಟ ವಿಚಾರಗಳಿಗೂ ಜೆಡಿಎಸ್ ನಾಯಕರು ತಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಮುಖಂಡರ ಬಳಿ ದೂರು ನೀಡಿದ್ದಾರೆ.

ಹಾಸನ: ಮಂತ್ರಿ ರೇವಣ್ಣ ಪತ್ನಿ, ಮಾಜಿ ಮಂತ್ರಿ ಎ.ಮಂಜು ಮಗನ ನಡುವೆ ಜಟಾಪಟಿಹಾಸನ: ಮಂತ್ರಿ ರೇವಣ್ಣ ಪತ್ನಿ, ಮಾಜಿ ಮಂತ್ರಿ ಎ.ಮಂಜು ಮಗನ ನಡುವೆ ಜಟಾಪಟಿ

ಜೆಡಿಎಸ್‌ ವಿರುದ್ಧ ಸುಮಾರು ಹದಿನೈದು ಬಾರಿ ದೂರು ನೀಡಲಾಗಿದ್ದರೂ ಪಕ್ಷದ ಹಿರಿಯ ನಾಯಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಕಾರ್ಯಕರ್ತರು ಅಸಮಾಧಾನ ತೋಡಿಕೊಂಡಿದ್ದಾರೆ.

Hassan Congress leaders complaint against JDS

ಕ್ಷೇತ್ರಕ್ಕೆ ಬರಬೇಕಿದ್ದ ಅನುದಾನ ಕಡಿತ ಮಾಡಲಾಗುತ್ತಿದೆ. ಜೆಡಿಎಸ್ ಅನುಕೂಲತೆಗೆ ತಕ್ಕಂತೆ ಕೆಲಸ ನಡೆಸಲಾಗುತ್ತಿದೆ. ಅವರಿಂದ ಅನ್ಯಾಯ ಆಗುತ್ತಿದೆ. ಪಕ್ಷ ಸಂಘಟನೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ದೂರು ಸಲ್ಲಿಸಿದ್ದಾರೆ.

ಹಾಸನ ಅಥವಾ ಮಂಡ್ಯ ಕಾಂಗ್ರೆಸ್‌ಗೆ ಬಿಟ್ಟುಕೊಡಿ: ಎ. ಮಂಜು ಪಟ್ಟು ಹಾಸನ ಅಥವಾ ಮಂಡ್ಯ ಕಾಂಗ್ರೆಸ್‌ಗೆ ಬಿಟ್ಟುಕೊಡಿ: ಎ. ಮಂಜು ಪಟ್ಟು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ದೂರು ನೀಡಲಾಗಿದೆ. ಆದರೆ, ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿಕೊಂಡಿರುವ ಕಾಂಗ್ರೆಸ್‌ ಮುಖಂಡರು ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಮೈತ್ರಿಗೆ ಮುನಿಸು : ಎ.ಮಂಜು ಬಿಜೆಪಿಗೆ? ಲೋಕಸಭೆ ಚುನಾವಣೆ ಮೈತ್ರಿಗೆ ಮುನಿಸು : ಎ.ಮಂಜು ಬಿಜೆಪಿಗೆ?

ಶುಕ್ರವಾರ ಹಾಸನ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ವೇಳೆ ಸಚಿವ ಎಚ್‌ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಮತ್ತು ಮಾಜಿ ಸಚಿವ, ಕಾಂಗ್ರೆಸ್‌ನ ಎ. ಮಂಜು ಅವರ ಮಗ ಮಂಥರ್ ಗೌಡ ಅವರ ನಡುವೆ ತೀವ್ರ ವಾಗ್ದಾದ ನಡೆದಿತ್ತು.

ನಾವು ಬೆಂಬಲ ನೀಡಿದ್ದರಿಂದಲೇ ನೀವು ಸಿಎಂ ಆಗಿದ್ದು ಎಂದು ಮಂಥರ್ ಗೌಡ ಹೇಳಿದ್ದರೆ, ನಾವಾಗಿಯೇ ನಿಮ್ಮ ಬಳಿ ಬಂದಿದ್ದಲ್ಲ, ನೀವಾಗಿಯೇ ಬೆಂಬಲ ನೀಡಿರುವುದು ಎಂದು ಭವಾನಿ ರೇವಣ್ಣ ಪ್ರತ್ಯುತ್ತರ ನೀಡಿದ್ದರು. ಈ ಬಗ್ಗೆ ಚರ್ಚೆ ಮಾಡಲು ವಿಧಾನಸೌಧದಲ್ಲಿ ದೊಡ್ಡವರಿದ್ದಾರೆ ಎಂದು ಇಬ್ಬರೂ ಕಿತ್ತಾಟ ನಡೆಸಿದ್ದರು.

English summary
Hassan Congress leaders complained to parties state leaders including Siddaramaiah against JDS leader as the party leaders are dominating on them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X