ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರಕಾರ್ಮಿಕರ ಪಾದ ತೊಳೆದು ನಾಮಪತ್ರ ಸಲ್ಲಿಸಿದ ಹಾಸನ ಬಿಜೆಪಿ ಅಭ್ಯರ್ಥಿ

|
Google Oneindia Kannada News

ಹಾಸನ, ಮಾರ್ಚ್ 25: ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರ ನಾಮಪತ್ರ ಸಲ್ಲಿಕೆಯ ವೇಳೆ ಜೆಡಿಎಸ್ ಬಲಪ್ರದರ್ಶನದ ನಂತರ, ಬಿಜೆಪಿ ಅಭ್ಯರ್ಥಿ ಎ ಮಂಜು, ಸೋಮವಾರ (ಮಾ 25) ಭರ್ಜರಿ ರೋಡ್ ಶೋ ಮಾಡಿ, ನಾಮಪತ್ರ ಸಲ್ಲಿಸಿದ್ದಾರೆ. ಯಡಿಯೂರಪ್ಪ ಆದಿಯಾಗಿ, ಬಿಜೆಪಿ ಮುಖಂಡರು ಈ ವೇಳೆ ಹಾಜರಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಳೆದ ವಾರಣಾಸಿ ಭೇಟಿಯ ವೇಳೆ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಪ್ರಧಾನಿಯೂ ಆಗಿರುವ ನರೇಂದ್ರ ಮೋದಿ, ಪೌರಕಾರ್ಮಿಕರ ಕಾಲುತೊಳೆದು ಸನ್ಮಾನ ಮಾಡಿದ್ದು, ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಈಗ, ಹಾಸನ ಬಿಜೆಪಿ ಅಭ್ಯರ್ಥಿ ಮಂಜು ಅದೇ ದಾರಿಯಲ್ಲಿ ಸಾಗಿದ್ದಾರೆ.

ಹಾಸನದಲ್ಲಿ ದೇವೇಗೌಡರ ಕುಟುಂಬಕ್ಕೆ ಎದುರಾಗಿ ಸ್ಪೀಡ್ ಬ್ರೇಕರ್ ಮಂಜುಹಾಸನದಲ್ಲಿ ದೇವೇಗೌಡರ ಕುಟುಂಬಕ್ಕೆ ಎದುರಾಗಿ ಸ್ಪೀಡ್ ಬ್ರೇಕರ್ ಮಂಜು

ನಾಮಪತ್ರಿಕೆ ಸಲ್ಲಿಸುವ ಮುನ್ನ ಎ ಮಂಜು, ನಗರದ ನಿರ್ಮಲ ನಗರದಲ್ಲಿರುವ ಪೌರಕಾರ್ಮಿಕ ಕುಟುಂಬದ ಮನೆಗೆ ತೆರಳಿ, ದಂಪತಿಗಳ ಪಾದ ತೊಳೆದು, ನಂತರ ಜಿಲ್ಲಾಧಿಕರಿ ಕಚೇರಿಗೆ ತೆರಳಿದ್ದಾರೆ. ಇದಕ್ಕೂ ಮೊದಲು ಮಂಜು, ಗೋಪೂಜೆಯನ್ನು ಸಲ್ಲಿಸಿದ್ದರು.

Hassan BJP candidate A Manju done the pada pooja of civic servant

ಪ್ರಧಾನಮಂತ್ರಿ ಪಾದತೊಳೆದ ದೃಶ್ಯವನ್ನು ನೋಡಿದ್ದೆ, ಈಗ ಬಿಜೆಪಿ ಅಭ್ಯರ್ಥಿ ಎ ಮಂಜು ನಮ್ಮ ಪಾದತೊಳೆದದ್ದು ಮುಜುಗರವಾದರೂ ಖುಷಿ ತಂದಿದೆ ಎಂದು ಪೌರಕಾರ್ಮಿಕ ದಂಪತಿಗಳು ಹೇಳಿದ್ದಾರೆ.

ಕಾಂಗ್ರೆಸ್‌ ಪಾಲಿಗೆ ಎ.ಮಂಜು ಹಳಸಿದ ಅನ್ನ: ಹಾಸನ ಬಿಜೆಪಿಕಾಂಗ್ರೆಸ್‌ ಪಾಲಿಗೆ ಎ.ಮಂಜು ಹಳಸಿದ ಅನ್ನ: ಹಾಸನ ಬಿಜೆಪಿ

ಹಾಸನದ ಜನತೆಯನ್ನು ಮೋಸ ಮಾಡಲು ಸಾಧ್ಯವಿಲ್ಲ, ಮಂಜು ಅವರ ಈ ನಾಟಕವೆಲ್ಲಾ ಹಾಸನದಲ್ಲಿ ನಡೆಯುವುದಿಲ್ಲ ಎಂದು ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

English summary
Hassan BJP candidate A Manju followed PM Modi step, done the pada pooja of civic servant before filing the nomination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X