• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾಸನದಲ್ಲಿ ಆದಿಚುಂಚನಗಿರಿ ಧರ್ಮಛತ್ರ ಕಟ್ಟಡ ಉದ್ಘಾಟನೆ

By Mahesh
|

ಹಾಸನ, ಸೆಪ್ಟೆಂಬರ್ 10: ಸಾರ್ವಜನಿಕ ಆಸ್ಪತ್ರೆಗೆ ಬರುವ ಬಡರೋಗಿಗಳು ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ಇರುವ ಸಂಧರ್ಭದಲ್ಲಿ ರೋಗಿಗಳೊಂದಿಗೆ ಬರುವವರಿಗೆ ಉಳಿದುಕೊಳ್ಳಲು ನೆರವಾಗುವಂತೆ ನಿರ್ಮಿಸಿರುವ ಹಾಸನಾಂಬ ಧರ್ಮ ಛತ್ರ ನೂರಾರು ವರ್ಷ ಬಡಜನರಿಗೆ ಬಳಕೆಯಾಗಲಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಾಲಾನಂದನಾಥ ಸ್ವಾಮೀಜಿಯವರು ಶುಭ ಹಾರೈಸಿದರು.

ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿಂದು ನೂತನ ಧರ್ಮಶಾಲಾ ಕಟ್ಟಡವನ್ನು ಉದ್ಘಾಟಿಸಿ ಅವರು ಆರ್ಶೀವಚನ ನೀಡಿದರು.

ಹಾಸನಾಂಬ ಧರ್ಮ ಛತ್ರ ನಿರ್ಮಾಣಕ್ಕೆ ದಾನಿಗಳು ಕೈಜೋಡಿಸಿದ್ದಾರೆ ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಸ್ಥಳ ಒದಗಿಸಿರುವವರನ್ನು ಸ್ಮರಿಸಬೇಕು ಎಂದರಲ್ಲದೆ, ಹಾಸನಾಂಬ ಧರ್ಮಛತ್ರ ಸಮಿತಿಯವರು ಉತ್ತಮವಾದ ಕೆಲಸ ಮಾಡಿದ್ದಾರೆ. ಆಸ್ಪತ್ರೆಯ ಆವರಣದಲ್ಲಿಯೇ ಮಾಡಿರುವುದು ಅರ್ಥಪೂರ್ಣವಾಗಿದೆ ಅಸಕ್ತರಿಗೆ ನೆರವಾಗಲಿದೆ ಎಂದರು. ಈ ಕಟ್ಟಡವು ಸುಸೂತ್ರವಾಗಿ ಲೋಕಾರ್ಪಣೆಯಾಗಿದ್ದು, ಇದೊಂದು ಪರಮಪವಿತ್ರ ಘಳಿಗೆ ಎಂದರು.

ಸೇವೆ ಮಾಡುವ ಜಾಗದಲ್ಲಿ ಹೆಚ್ಚು ಮಾತು ಇರಬಾರದು ಎಂದ ಅವರು ಆಡುವವನು ಮಾಡುವುದಿಲ್ಲ ಮಾಡುವವನು ಆಡುವುದಿಲ್ಲ ಎಂಬುದಕ್ಕೆ ಡಾ|| ಗುರುರಾಜ್ ಹೆಬ್ಬಾರ್ ಅವರನ್ನು ಉದಾಹರಣೆ ನೀಡಿದರು. ಮನುಷ್ಯನಿಗೆ ಭಗವಂತ ಅಪರಿಮಿತ ಶಕ್ತಿ ಕೊಟ್ಟಿದ್ದಾನೆ ಅದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಮಾಜ ಸೇವೆ ಮಾಡಬೇಕು ಎಂದರು. ಬೇರೆಯವರ ಬದುಕಲ್ಲಿ ಬೆಳಕು ಹತ್ತಿಸಿದರೆ ನಮ್ಮ್ಮ ಮನೆಯು ಬೆಳಗುತ್ತದೆ ಎಂದರು.

ಮನುಷ್ಯನಿಗೆ ಮುಖ್ಯವಾಗಿ ಬೇಕಿರುವುದು ಆರೋಗ್ಯ ಅದನ್ನು ಜೋಪಾನವಾಗಿ ಕಾಪಾಡಿಕೊಂಡು ಭಗವಂತ ಕೊಟ್ಟಿರುವುದನ್ನು ಬಳಸಿಕೊಂಡು ತ್ಯಾಗ ಭಾವದಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ನೂರು ವರ್ಷ ಸಾರ್ಥಕವಾಗಿ ಬಾಳಿರಿ ಎಂದು ಶುಭ ಹಾರೈಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಆವರಣದಲ್ಲಿ ಗಿಡ ನೆಡಲಾಯಿತು.

ಶಾಸಕರಾದ ಪ್ರೀತಂ ಜೆ.ಗೌಡ ಅವರು ಮಾತನಾಡಿ

ಶಾಸಕರಾದ ಪ್ರೀತಂ ಜೆ.ಗೌಡ ಅವರು ಮಾತನಾಡಿ

ಶಾಸಕರಾದ ಪ್ರೀತಂ ಜೆ.ಗೌಡ ಅವರು ಮಾತನಾಡಿ ,ಇದೊಂದು ಆದರ್ಶವಾದ ದಿನ ಉದ್ದೇಶ ಸಾಮಾನ್ಯವಾದುದು ಎನಿಸಿದರು ಕೆಲಸ ಮಾಡುವುದು ಕಷ್ಟವಾದುದಾಗಿದೆ ಬಡ ರೋಗಿಗಳೊಂದಿಗೆ ಬರುವವರಿಗೆ ಉಳಿದುಕೊಳ್ಳಲು ಪರಿಹಾರ ಕಂಡುಕೊಳ್ಳಲು ಜವಾಬ್ದಾರಿಯುತವಾಗಿ ಹಿರಿಯನಾಗರಿಕರು ಈ ಕಟ್ಟಡ ನಿರ್ಮಾಣ ಮಾಡಿರುವುದು ಪುಣ್ಯದ ಕೆಲಸವಾಗಿದ್ದು, ಈ ಕೆಲಸ ಯುವಕರಿಗೆ ಪ್ರೇರಣೆ ನೀಡಿದೆ ಮುಂದಿನ ದಿನಗಳಲ್ಲಿ ತಮ್ಮೋಡನಿದ್ದೇವೆ ಎಂದು ಸ್ವಾಮೀಜಿ ಅವರ ಸಾನಿಧ್ಯದಲ್ಲಿ ತಿಳಿಸಬಯಸುತ್ತೇನೆ ಎಂದರು.

ಗುರುರಾಜ್ ಹೆಬ್ಬಾರ್

ಗುರುರಾಜ್ ಹೆಬ್ಬಾರ್

ಹಾಸನಾಂಬ ಧರ್ಮಛತ್ರ ಸಮಿತಿಯ ಅಧ್ಯಕ್ಷರಾದ ಡಾ|| ಗುರುರಾಜ್ ಹೆಬ್ಬಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಹಕ್ಕೆ ವಯಸ್ಸದರು ಮನಸ್ಸನ್ನು ಭಗವಂತನಲ್ಲಿಟ್ಟು ಸದಾ ಲವಲವಿಕೆಯಿಂದ ಕೆಲಸಕ್ಕೆ ಮುಂದಾಗಬೇಕು ಎಂದರು. ಒಳ್ಳೆಯ ಕೆಲಸಕ್ಕೆ ನಾಲ್ಕು ಜನರೊಂದಿಗೆ ಚರ್ಚಿಸಿ ಮುನ್ನೆಡೆಯಬೇಕು ಎಂದರು.

ಹಾಸನಾಂಬ ಧರ್ಮಛತ್ರ ಸಮಿತಿಗೆ ಅಭಿನಂದನೆ

ಹಾಸನಾಂಬ ಧರ್ಮಛತ್ರ ಸಮಿತಿಗೆ ಅಭಿನಂದನೆ

ಹಾಸನ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ|| ಬಿ.ಸಿ.ರವಿಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹಿಮ್ಸ್‍ಗೆ ಮಹತ್ವ ದಿನ ಎಂದು ಭಾವಿಸುತ್ತೇನೆ. ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡಿದ್ದಾರೆ. ದಾನಿಗಳಿಂದ ಪಾರದರ್ಶಕವಾಗಿ ಹಣ ಸಂಗ್ರಹಿಸಿ ಡಾ|| ಗುರುರಾಜ್ ಹೆಬ್ಬಾರ್ ಮತ್ತು ತಂಡದವರು ಅತ್ಯಂತ ಕಡಿಮೆ ಅವಧಿಯಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಕಾರ್ಯಕರ್ತರಾಗಿದ್ದಾರೆ. ಸದರಿ ಕಟ್ಟಡದಲ್ಲಿ 50 ಪುರುಷರು ಹಾಗೂ 50 ಮಹಿಳೆಯರು ಉಳಿಯಲು ಅವಕಾಶವಿದೆ. ಹಾಸನಾಂಬ ಧರ್ಮಛತ್ರ ಸಮಿತಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಎಚ್.ಡಿ.ರೇವಣ್ಣನವರ ಕಾಳಜಿ

ಎಚ್.ಡಿ.ರೇವಣ್ಣನವರ ಕಾಳಜಿ

ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಡಿ.ರೇವಣ್ಣನವರ ಕಾಳಜಿಯಿಂದ ಜಿಲ್ಲಾ ಆಸ್ಪತ್ರೆಯನ್ನು 2006 ರಲ್ಲಿ 350 ಹಾಸಿಗೆಯಿಂದ 850 ಹಾಸಿಗೆಗಳಿಗೆ ಏರಿಸಲಾಯಿತು. ಪ್ರತಿನಿತ್ಯ 1500-1700 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿರುವುದು ತೃಪ್ತಿ ನೀಡಿದೆ ಎಂದರು.

ಎಚ್.ಡಿ.ರೇವಣ್ಣನವರ ಅತೀವ ಕಾಳಜಿಯಿಂದ ನಗರದ ಗಂಧದ ಕೋಠಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಅಲ್ಲದೆ 18.5 ಕೋಟಿ ರೂ ವೆಚ್ಚದಲ್ಲಿ ರೇಡಿಯಾಜಿ ಕೇಂದ್ರಕ್ಕೆ ಅನುಮೋದನೆ ದೊರೆತಿದೆ ಎಂದರು. ಪಿ.ಜಿ., ನರ್ಸಿಂಗ್ ವಿದ್ಯಾರ್ಥಿಗಳಿಗೆ ವಸತಿ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಆದಿಚುಂಚನಗಿರಿ ಶಾಖಾ ಮಠಾಧೀಶರಾದ ಶಂಭುನಾಥ ಸ್ವಾಮೀಜಿಯವರು, ಮಲೇನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷರಾದ ಎಚ್.ಪಿ.ಮೋಹನ್, ತಹಸೀಲ್ದಾರ್, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

English summary
Hassan : Adichunchanagiri mutt seer Nirmalananda Swamiji today(Sept 10) inaugurated shelter house for poor
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more