ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಕೊರೊನಾವೈರಸ್ ಸೋಂಕಿಗೆ ವೃದ್ಧೆ ಬಲಿ

|
Google Oneindia Kannada News

ಹಾಸನ, ಜೂನ್ 28: ಹಾಸನದ ಕೊವಿಡ್ 19 ಆಸ್ಪತ್ರೆಯಲ್ಲಿ ಕೊರೊನಾವೈರಸ್ ಸೋಂಕಿಗೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. 65 ವರ್ಷದ ಮಹಿಳೆಯೊಬ್ಬರು ಈ ಡೆಡ್ಲಿ ವೈರಸ್ ದಾಳಿಗೆ ತುತ್ತಾಗಿ ಚೇತರಿಸಿಕೊಳ್ಳಲಾಗದೆ ಮೃತರಾಗಿದ್ದಾರೆ. ಒಟ್ಟಾರೆ, ಹಾಸನದಲ್ಲಿ ಮೃತರ ಸಂಖ್ಯೆ ಎರಡಕ್ಕೇರಿದೆ.

ಮುಂಬೈಯಿಂದ ಈ ಮಹಿಳೆ ಬಂದಿದ್ದರು. ಸರ್ಕಾರದ ನಿಯಮ ಪ್ರಕಾರ ಕ್ವಾರಂಟೈನ್ ನಲ್ಲಿದ್ದರು. ಆದರೆ, ಕೆಲ ದಿನಗಳಲ್ಲೇತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಾಗತಿಕವಾಗಿ ಕೊವಿಡ್19 ಪ್ರಕರಣಗಳ ಸಂಖ್ಯೆ 1ಕೋಟಿ!ಜಾಗತಿಕವಾಗಿ ಕೊವಿಡ್19 ಪ್ರಕರಣಗಳ ಸಂಖ್ಯೆ 1ಕೋಟಿ!

ಜೂನ್ 17ರಂದು ಮುಂಬೈಯಿಂದ ಹಾಸನಕ್ಕೆ ಬಂದಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಗಂಟಲು ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢಪಟ್ಟಿತ್ತು. ಜೂನ್ 18ರಂದು ಹಾಸನದ ಕೋವಿಡ್ 19 ಆಸ್ಪತ್ರೆಗೆ ದಾಖಲು ಮಾಡಲಾಗಿ, ಚಿಕಿತ್ಸೆ ಕೊಡಲಾಗಿತ್ತು ಎಂದು ವೈದ್ಯಾಧಿಕಾರಿ ಹೇಳಿದ್ದಾರೆ.

Hassan: A 65-year-old woman dies of Covid 19

ಆಸ್ಪತ್ರೆಯ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಸಾವಿಗೀಡಾಗಿರುವ ಮಹಿಳೆ ಹಾಸನ ನಗರದ ಉತ್ತರ ಬಡಾವಣೆಯವರು ಎಂದು ತಿಳಿದು ಬಂದಿದೆ.

ಮುಂಬೈಯಿಂದ ಬಂದ ಮಹಿಳೆಯಲ್ಲದೆ ಅವರ ಕುಟುಂಬದ ಮೂರು ಮಂದಿಗೆ ಪಾಸಿಟಿವ್ ಇದ್ದ ಕಾರಣ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದಲ್ಲಿ ಒಂದೇ ದಿನ 918 ಕೇಸ್ ಪತ್ತೆ, ಬೆಂಗಳೂರಿನಲ್ಲಿ 596 ಸೋಂಕುರಾಜ್ಯದಲ್ಲಿ ಒಂದೇ ದಿನ 918 ಕೇಸ್ ಪತ್ತೆ, ಬೆಂಗಳೂರಿನಲ್ಲಿ 596 ಸೋಂಕು

ಹಾಸನದಲ್ಲಿ ಶನಿವಾರದಂದು 14 ಕೇಸ್ ಪತ್ತೆಯಾಗಿದ್ದು, ಒಟ್ಟು 328 ಮಂದಿ ಪಾಸಿಟಿವ್ ಹೊಂದಿದ್ದಾರೆ. 91 ಸಕ್ರಿಯ ಪ್ರಕರಣಗಳಿದ್ದು, 236 ಮಂದಿ ಗುಣಮುಖರಾಗಿದ್ದು, 2 ಮಂದಿ ಮೃತರಾಗಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 11, 293 ಪಾಸಿಟಿವ್ ಪ್ರಕರಣಗಳಿದ್ದು, 191 ಮಂದಿ ಮೃತಪಟ್ಟಿದ್ದಾರೆ. ಶನಿವಾರದಂದು ಒಂದೇ ದಿನ 918 ಪ್ರಕರಣಗಳು ದಾಖಲಾಗಿ ಆತಂಕ ಹೆಚ್ಚಿಸಿದೆ.

English summary
Hassan: A 65-year-old woman who had tested positive for the coronavirus infection died at a Covi 19 hospital here on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X