ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಎಚ್ ಡಿ ರೇವಣ್ಣಗೆ ಬುದ್ಧಿ ಕಮ್ಮಿ: ಎ ಮಂಜು ಟೀಕೆ

|
Google Oneindia Kannada News

ಹಾಸನ, ಫೆಬ್ರವರಿ 2: 'ಸಚಿವ ಎಚ್ ಡಿ ರೇವಣ್ಣ ಅವರಿಗೆ ಬುದ್ಧಿ ಕಮ್ಮಿ. ಅದಕ್ಕೆ ಹತ್ತು ವರ್ಷದಿಂದ ಅಭಿವೃದ್ಧಿ ಆಗಿಲ್ಲ ಎಂದು ಹೇಳುತ್ತಿರುತ್ತಾರೆ' ಎಂಬುದಾಗಿ ಮಾಜಿ ಸಚಿವ ಎ. ಮಂಜು ಟೀಕಿಸಿದ್ದಾರೆ.

ಹಾಸನದಿಂದ ಎಚ್ ಡಿ ದೇವೇಗೌಡರು ಅಥವಾ ರೇವಣ್ಣ ಸ್ಪರ್ಧಿಸಬಹುದಾಗಿತ್ತು. ಅದನ್ನು ಬಿಟ್ಟು ಮಗನಿಗೆ ಸ್ಪರ್ಧಿಸಲು ಬಿಟ್ಟಿದ್ದಾರೆ. ತಂದೆಯೇ ಸ್ಪರ್ಧೆ ಮಾಡಲಿ ಎಂದು ರೇವಣ್ಣ ಅವರೇ ದೇವೇಗೌಡರ ಹೆಸರು ಹೇಳುತ್ತಿಲ್ಲ. ಒಂದು ವೇಳೆ ಹಾಸನ ಕ್ಷೇತ್ರದಿಂದ ಲೋಕಸಭೆಗೆ ದೇವೇಗೌಡರೇ ಸ್ಪರ್ಧಿಸಿದರೆ ನಾನು ತುಂಬು ಹೃದಯದಿಂದ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಮಂಜು ಹೇಳಿದ್ದಾರೆ.

ಸಚಿವ ಎಚ್‌ ಡಿ ರೇವಣ್ಣ ಮತ್ತು ಅವರ ಕುಟುಂಬ ಹೆಚ್ಚಿನ ಅಧಿಕಾರ ಪಡೆದಿತ್ತು. ಅವರು ಕ್ಷೇತ್ರವನ್ನು ಚೆನ್ನಾಗಿ ಅಭಿವೃದ್ಧಿ ಮಾಡಬಹುದಾಗಿತ್ತು. ಆದರೆ, ಯಡಿಯೂರಪ್ಪ ಶಿವಮೊಗ್ಗವನ್ನು ಅಭಿವೃದ್ಧಿ ಮಾಡಿದಷ್ಟು ಕೂಡ ಹಾಸನವನ್ನು ಅಭಿವೃದ್ಧಿ ಮಾಡಿಲ್ಲ. ಎಲ್ಲ ಅಭಿವೃದ್ಧಿಯನ್ನೂ ಹೊಳೆನರಸೀಪುರಕ್ಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಜ್ವಲ್ ಸ್ಪರ್ಧಿಸಿದರೆ ಬೆಂಬಲ ನೀಡೊಲ್ಲ: ಎ ಮಂಜು ಪ್ರಜ್ವಲ್ ಸ್ಪರ್ಧಿಸಿದರೆ ಬೆಂಬಲ ನೀಡೊಲ್ಲ: ಎ ಮಂಜು

ಹಾಸನದಲ್ಲಿ ದೇವೇಗೌಡರ ಹೊರತಾಗಿ ಬೇರೆ ಅಭ್ಯರ್ಥಿಯನ್ನು ನಿಲ್ಲಿಸಿದರೆ ಅವರನ್ನು ಬೆಂಬಲಿಸುವುದರ ಬಗ್ಗೆ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಎಲ್ಲರ ಜತೆ ಸಂಸಾರ ಮಾಡಿ ಅಭ್ಯಾಸ

ಎಲ್ಲರ ಜತೆ ಸಂಸಾರ ಮಾಡಿ ಅಭ್ಯಾಸ

ಕಾಂಗ್ರೆಸ್‌ನವರಿಗಿಂತ ಬಿಜೆಪಿ ಮೈತ್ರಿ ಜೊತೆ ಮಾಡಿಕೊಂಡಿದ್ದ ಸರ್ಕಾರವೇ ಚೆನ್ನಾಗಿತ್ತು ಎಂಬ ಸಚಿವ ಪುಟ್ಟರಾಜು ಹೇಳಿಕೆಗೆ, ಜೆಡಿಎಸ್‌ನವರಿಗೆ ಎಲ್ಲರ ಜತೆ ಸಂಸಾರ ಮಾಡಿ ಅಭ್ಯಾಸ ಆಗಿದೆ. ಬಿಜೆಪಿ ಜತೆಯೂ ಸಂಸಾರ ಮಾಡಿದ್ದಾರೆ. ನಮ್ಮ ಜತೆಯೂ ಸಂಸಾರ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಳ್ಳುತ್ತಾರೆ. ಅಭಿವೃದ್ಧಿಗೆ ಅಲ್ಲ ಎಂದು ಟೀಕಿಸಿದ್ದಾರೆ.

ದಲಿತರು ಎದುರು ಬಂದರೆ ರೇವಣ್ಣ ಮನೆಗೆ ಹೋಗಿ ಸ್ನಾನ ಮಾಡಿ ಬರುತ್ತಾರೆ, ಎ ಮಂಜು ದಲಿತರು ಎದುರು ಬಂದರೆ ರೇವಣ್ಣ ಮನೆಗೆ ಹೋಗಿ ಸ್ನಾನ ಮಾಡಿ ಬರುತ್ತಾರೆ, ಎ ಮಂಜು

ಯಾರಿಗೂ ಯಾವುದೂ ಅನಿವಾರ್ಯವಲ್ಲ

ಯಾರಿಗೂ ಯಾವುದೂ ಅನಿವಾರ್ಯವಲ್ಲ

ಸಚಿವರಾದ ಪುಟ್ಟರಾಜು ಹೀಗೆ ಮಾತನಾಡುವುದು ಸರಿಯಲ್ಲ. ನಾನು ಮಾತನಾಡಿದರೆ ಅದು ತಪ್ಪು ಎಂದು ಕಾಣಿಸುತ್ತದೆ. ಅವರು ಮಾತನಾಡಿದರೆ ಸರಿಯೇ? ಯಾರಿಗೂ ಯಾವುದೂ ಅನಿವಾರ್ಯ ಅಲ್ಲ. ಅಭಿವೃದ್ಧಿ ಆಗುವುದಷ್ಟೇ ಮುಖ್ಯ. ಗಂಡ-ಹೆಂಡತಿ ನಡುವೆ ಜಗಳ ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಡೈವೋರ್ಸ್ ಆಗುವುದಿಲ್ಲ ಎಂದಿದ್ದಾರೆ.

ಸಚಿವ ರೇವಣ್ಣ ಅವರ ಹಾಡಿ ಹೊಗಳಿದ ಜಯಮಾಲಾ, ಎ.ಮಂಜು ಕಿಡಿ ಸಚಿವ ರೇವಣ್ಣ ಅವರ ಹಾಡಿ ಹೊಗಳಿದ ಜಯಮಾಲಾ, ಎ.ಮಂಜು ಕಿಡಿ

ಸರ್ಕಾರದ ವಿರುದ್ಧ ಮಾತನಾಡಿಲ್ಲ

ಸರ್ಕಾರದ ವಿರುದ್ಧ ಮಾತನಾಡಿಲ್ಲ

ನಾನು ಸರ್ಕಾರದ ವಿರುದ್ಧ ಮಾತನಾಡಿಲ್ಲ. ಅಭಿವೃದ್ಧಿ ವಿಚಾರವಾಗಿ ಸಚಿವರನ್ನು ಪ್ರಶ್ನಿಸಿ ಮಾತನಾಡುತ್ತಿದ್ದೇನೆ. ನಾನು ಏನೂ ಕೆಲಸ ಮಾಡಿಲ್ಲ ಎನ್ನುವವರು ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಹೇಳಲಿ. ನಾನು ಮಾಡಿದ ಕೆಲಸ ಏನು ಎಂದು ದಾಖಲೆ ಸಹಿತ ತೋರಿಸುತ್ತೇನೆ. ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಮೈತ್ರಿ ಆದರೂ ದೇವೇಗೌಡ ಕುಟುಂಬಕ್ಕೆ ಬೆಂಬಲ ಇಲ್ಲ: ಎ ಮಂಜು ಮೈತ್ರಿ ಆದರೂ ದೇವೇಗೌಡ ಕುಟುಂಬಕ್ಕೆ ಬೆಂಬಲ ಇಲ್ಲ: ಎ ಮಂಜು

ಅರ್ಜಿ ಹಾಕಿಕೊಳ್ಳಲಿ

ಅರ್ಜಿ ಹಾಕಿಕೊಳ್ಳಲಿ

ಹಾಸನದಲ್ಲಿ ಟಿಕೆಟ್ ಬೇಕಿದ್ದರೆ ಕಾಂಗ್ರೆಸ್‌ನವರು ಅರ್ಜಿ ಹಾಕಿಕೊಳ್ಳಲಿ. ಎ. ಮಂಜು ಕೂಡ ಅರ್ಜಿ ಹಾಕಿದರೆ ತಮ್ಮ ಅಭ್ಯಂತರ ಇಲ್ಲ. ತಾವು ಬೇಡ ಅನ್ನುವುದಿಲ್ಲ. ಅವರಿಗೆ ಟಿಕೆಟ್ ಕೊಡುವುದು ಬಿಡುವುದು ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಎಚ್ ಡಿ ರೇವಣ್ಣ ಗುರುವಾರ ಹೇಳಿಕೆ ನೀಡಿದ್ದರು.

English summary
Former Congress Minister A Manju criticised Minister HD Revanna again. Revanna has low sapeince, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X