ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತರ ಕಾಲೇಜು ರಾಜ್ಯ ವಾಲಿಬಾಲ್ ಹಾಗೂ ಚೆಸ್ ಪಂದ್ಯ

ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಹಾಸನ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಚಾಂಪಿಯನ್. ವಾಲಿಬಾಲ್, ಚೆಸ್ ವಿಭಾಗಗಳಲ್ಲಿ ಮೊದಲ ಸ್ಥಾನ.

|
Google Oneindia Kannada News

ಹಾಸನ, ಸೆಪ್ಟೆಂಬರ್ 13: ಮಂಡ್ಯದಲ್ಲಿ ಸೆ. 9 ರಿಂದ 11ರವರೆಗೆ ನಡೆದ ಅಂತರ ಕಾಲೇಜು ವಾಲಿಬಾಲ್ ಹಾಗೂ ಚೆಸ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಕೃಷಿ ಮಹಾವಿದ್ಯಾಲಯ ಹಾಸನದ ಮಹಿಳೆಯರ ತಂಡ ವಾಲಿಬಾಲ್ ಹಾಗೂ ಚೆಸ್ ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ 5 ಕಾಲೇಜುಗಳು ಭಾಗವಹಿಸಿದ್ದವು.

ಕಬ್ಬಡಿಯಲ್ಲಿ ಹಿಮ್ಸ್‌ ಪ್ರಥಮ
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೆ. ೧೨ ರಂದು ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಮೈಸೂರು ವಲಯ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಮೈಸೂರು ವಲಯಗಳಿಂದ 9 ಜಿಲ್ಲೆಗಳ ವಿವಿಧ ಕಾಲೇಜುಗಳ ಕ್ರೀಡಾ ತಂಡಗಳು ಭಾಗವಹಿಸಿದ್ದವು.

Hasan Agriculture University students secures 1st place in Volleyball and Chess in Inter-college sportas meet

ಪಂದ್ಯಾವಳಿಯಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತಂಡವು ಮೈಸೂರು ವಲಯ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿದರೆ, ಎ.ಜೆ. ಶೆಟ್ಟಿ ಮೇಡಿಕಲ್ ಕಾಲೇಜು ಮಂಗಳೂರು ತಂಡವು ದ್ವಿತೀಯ ಪಡೆದುಕೊಂಡಿತು.

ವಿಜೇತ ತಂಡಗಳಿಗೆ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ. ರವಿಕುಮಾರ್ ಬಿ.ಸಿ. ಮೈಸೂರು ವಲಯದ ಕ್ರೀಡಾ ವಿಭಾಗದ ಮುಖ್ಯ ಸಂಯೋಜನಾಧಿಕಾರಿಗಳಾದ ಡಾ. ಎಸ್.ಎಮ್. ಸುರೇಶ್ ಇವರು ಪ್ರಶಸ್ತಿ ಮತ್ತು ಟ್ರೋಫಿಗಳನ್ನು ನೀಡಿ ಅಭಿನಂದಿಸಿದರು.

Hasan Agriculture University students secures 1st place in Volleyball and Chess in Inter-college sportas meet

ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡದ ನಾಯಕ ಅಭಿಷೇಕ್‌ ಗೌಡ ಮತ್ತು ಆಟಗಾರರು, ದೈಹಿಕ ಶಿಕ್ಷಣ ನಿರ್ದೇಶಕ ಲತೀಶ್ ಹಾಗೂ ಕ್ರೀಡಾ ಸಮಿತಿಯ ಸದಸ್ಯರುಗಳು ಹಾಜರಿದ್ದರು.

English summary
Hasan's agricultural University's Volleyball team secures first place in Inter-College Volleyball tournament conducted from Sep. 8th to Sept 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X