ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಲೂರು, ಹಳೇಬೀಡು ವಿಶ್ವಪಾರಂಪರಿಕ ತಾಣದ ಪಟ್ಟಿಗೆ

|
Google Oneindia Kannada News

ಹಾಸನ, ಡಿಸೆಂಬರ್ 10 : ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ದೇವಾಲಯಗಳನ್ನು ವಿಶ್ವಪರಾಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೆಗೊಳಿಸಲು ನಾಮ ನಿದೇಶನಗೊಳಿಸಿ ಶಿಫಾರಸು ಮಾಡಲಾಗಿದೆ. ಈಗಾಗಲೇ ತಾತ್ಕಲಿಕ ಪಟ್ಟಿಯಲ್ಲಿ ದೇವಾಲಯಗಳು ಸೇರಿವೆ.

ಕರ್ನಾಟಕ ಸರ್ಕಾರ ಬೇಲೂರು ಚನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಹಾಗೂ ಮೈಸೂರು ಜಿಲ್ಲೆಯ ಸೋಮನಾಥ ದೇವಾಲಯಗಳನ್ನು ವಿಶ್ವ ಪರಾಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ.

 ಮೊದಲ ಬಾರಿಗೆ ಬೇಲೂರು ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ರದ್ದು ಮೊದಲ ಬಾರಿಗೆ ಬೇಲೂರು ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ರದ್ದು

ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ ಇವುಗಳನ್ನು ಸೇರಿಸಲಾಗಿದೆ. ಬೇಲೂರು, ಹಳೇಬೀಡಿನ ದೇವಾಲಯದ ವಿನ್ಯಾಸ ವಾಸ್ತುಶಿಲ್ಪಗಳು ಹಾಗೂ ಮಾನವ ಮೌಲ್ಯಗಳನ್ನು ಪ್ರರ್ದಶಕ ರೂಪಗಳು ಗಮನಿಸಿ ಇವುಗಳು ಪಟ್ಟಿಗೆ ಸೇರಬೇಕು ಎಂದು ಪ್ರಸ್ತಾವನೆಯಲ್ಲಿ ಬೇಡಿಕೆ ಇಡಲಾಗಿದೆ.

ಬೇಲೂರು ದೇಗುಲದಲ್ಲಿ ಇನ್ಮುಂದೆ ಪ್ರಿವೆಡ್ಡಿಂಗ್ ಫೋಟೋಶೂಟ್‌ ಇಲ್ಲಬೇಲೂರು ದೇಗುಲದಲ್ಲಿ ಇನ್ಮುಂದೆ ಪ್ರಿವೆಡ್ಡಿಂಗ್ ಫೋಟೋಶೂಟ್‌ ಇಲ್ಲ

Halebidu And Belur Temple To Join UNESCO World Heritage Site

ನಾಮ ನಿರ್ದೇಶಕ ವಾದ ಸ್ಥಳಗಳಲ್ಲಿ ಸ್ಥಳ ನಿರ್ವಹಣೆ ಯೋಜನೆಯ ವಿನ್ಯಾಸವನ್ನು ಯುನೆಸ್ಕೋಗೆ ಕಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ನಗರ / ಗ್ರಾಮ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ವ್ಯವಸ್ಥಿತವಾದ ಮತ್ತು ದೂರದೃಷ್ಟಿ ಚಿಂತನೆಗಳ ಯೋಜನೆಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕಿದೆ.

ವಿಮಾನ ನಿಲ್ದಾಣ; ಹಾಸನ ಜಿಲ್ಲೆಯ ಜನರಿಗೆ ಸಿಹಿಸುದ್ದಿ ವಿಮಾನ ನಿಲ್ದಾಣ; ಹಾಸನ ಜಿಲ್ಲೆಯ ಜನರಿಗೆ ಸಿಹಿಸುದ್ದಿ

ಬೆಂಗಳೂರಿನ ಇನ್ ಟೆಕ್ ತಜ್ಞರಾದ ಪಂಕಜ್ ಈ ಕುರಿತು ಮಾತನಾಡಿದ್ದು, "ಯುನೆಸ್ಕೋ ಮಾರ್ಗಸೂಚಿಯಂತೆ ದೇವಾಲಯದ ಸುತ್ತಮುತ್ತ ನೂರಾರು ವರ್ಷಗಳಿಂದ ಇರುವ ಮನೆಗಳು, ವಾಸ್ತುಶಿಲ್ಪಗಳು ಮುಂದಿನ ಪೀಳಿಗೆಗೆ ಅಲ್ಲಿನ ಸಂಸ್ಕೃತಿಯನ್ನು ತಿಳಿಸಬೇಕಾಗುತ್ತದೆ" ಎಂದರು.

ಯುನೆಸ್ಕೋ ವಿಶ್ವ ಪರಾಂಪರಿಕ ತಾಣ ಪಟ್ಟಿಗೆ ನಾಮ ನಿರ್ದೇಶನದ ಸಂದರ್ಭ ದಸ್ತಾವೇಜು ಸಲ್ಲಿಕೆ ವೇಳೆ ಸಂಭಂದಪಟ್ಟ ಸ್ಥಳ ನಿರ್ವಹಣಾ ವ್ಯವಸ್ಥೆಯ ವಿಸ್ಕೃತ ಯೋಜನೆ ಸಲ್ಲಿಕೆ ಮಾಡಬೇಕು ಇದರಲ್ಲಿ ಬಫರ್ ವಲಯಗಳನ್ನು ಗುರುತಿಸಬೇಕು.

Recommended Video

ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1.15 ಕೆಜಿ ಚಿನ್ನ ವಶಕ್ಕೆ ಪಡೆದ ಕಸ್ಟಮ್ ಅಧಿಕಾರಿಗಳು | Oneindia Kannada

ಕರ್ನಾಟಕದಲ್ಲಿನ ಹಂಪಿ, ಬಾದಾಮಿ ಈಗಾಗಲೇ ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿವೆ. ಬೇಲೂರು ಮತ್ತು ಹಳೇಬೀಡು ಹಾಸನ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ.

English summary
Hassan district Halebidu and Belur temple may join UNESCO world heritage site soon. Both temple are in temporary list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X